1ಇದಲ್ಲದೆ ದಾವೀದನೂ, ಸೈನ್ಯಾಧಿಪತಿಗಳೂ ಆಸಾಫ್, ಹೇಮಾನ್, ಯೆದುತೂನ್; ಇವರ ಪುತ್ರರಲ್ಲಿ ಕಿನ್ನರಿಗಳಿಂದಲೂ, ವೀಣೆಗಳಿಂದಲೂ, ತಾಳಗಳಿಂದಲೂ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರವಾಗಿತ್ತು.
2ಅವರು ಯಾರೆಂದರೆ: ಆಸಾಫನ ಪುತ್ರರಲ್ಲಿ
3ಯೆದುತೂನನ ಪುತ್ರರಲ್ಲಿ
4ಹೇಮಾನನ ಪುತ್ರರಲ್ಲಿ
5ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೇಮಾನನ ಪುತ್ರರು. ದೇವರು ಹೇಮಾನನಿಗೆ ಹದಿನಾಲ್ಕು ಮಂದಿ ಪುತ್ರರನ್ನೂ, ಮೂರು ಮಂದಿ ಪುತ್ರಿಯರನ್ನೂ ಕೊಟ್ಟಿದ್ದರು.
6ಯೆಹೋವ ದೇವರ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ, ಇವರೆಲ್ಲರೂ ತಮ್ಮ ತಂದೆಯ ನೇತೃತ್ವದಲ್ಲಿ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು.
7ಹೀಗೆಯೇ ಅವರ ಲೆಕ್ಕವೂ, ಯೆಹೋವ ದೇವರ ಹಾಡುಗಳಲ್ಲಿ ತರಬೇತುಪಡೆದ ಸಮಸ್ತ ಪ್ರವೀಣರ ಲೆಕ್ಕ, ತಮ್ಮ ಸಹೋದರರ ಸಹಿತವಾಗಿ ಇನ್ನೂರ ಎಂಬತ್ತೆಂಟು ಮಂದಿಯಾಗಿದ್ದರು.
8ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ, ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆ ಎದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು.
9ಆಸಾಫನಿಗೋಸ್ಕರ ಮೊದಲನೆಯ ಚೀಟು ಯೋಸೇಫನಿಗೆ ಬಂತು.
10ಮೂರನೆಯದು ಜಕ್ಕೂರನಿಗೆ;
11ನಾಲ್ಕನೆಯದು ಇಚ್ರೀಗೆ;
12ಐದನೆಯದು ನೆತನ್ಯನಿಗೆ;
13ಆರನೆಯದು ಬುಕ್ಕೀಯನಿಗೆ;
14ಏಳನೆಯದು ಯೆಸರೇಲನಿಗೆ;
15ಎಂಟನೆಯದು ಯೆಶಾಯನಿಗೆ;
16ಒಂಬತ್ತನೆಯವನು ಮತ್ತನ್ಯ;
17ಹತ್ತನೆಯದು ಶಿಮ್ಮಿಗೆ;
18ಹನ್ನೊಂದನೆಯದು ಅಜರಯೇಲನಿಗೆ;
19ಹನ್ನೆರಡನೆಯದು ಹಷಬ್ಯನಿಗೆ;
20ಹದಿಮೂರನೆಯದು ಶುಬಯೇಲನಿಗೆ;
21ಹದಿನಾಲ್ಕನೆಯವನು ಮತ್ತಿತ್ಯ;
22ಹದಿನೈದನೆಯದು ಯೆರೆಮೋತನಿಗೆ;
23ಹದಿನಾರನೆಯದು ಹನನ್ಯನಿಗೆ;
24ಹದಿನೇಳನೆಯದು ಯೊಷ್ಬೆಕಾಷನಿಗೆ;
25ಹದಿನೆಂಟನೆಯದು ಹನಾನೀಗೆ;
26ಹತ್ತೊಂಬತ್ತನೆಯದು ಮಲ್ಲೋತಿಗೆ;
27ಇಪ್ಪತ್ತನೆಯದು ಎಲಿಯಾತನಿಗೆ;
28ಇಪ್ಪತ್ತೊಂದನೆಯದು ಹೋತೀರನಿಗೆ;
29ಇಪ್ಪತ್ತೆರಡನೆಯದು ಗಿದ್ದಲ್ತಿಗೆ;
30ಇಪ್ಪತ್ತಮೂರನೆಯದು ಮಹಜೀಯೋತನಿಗೆ;
31ಇಪ್ಪತ್ತನಾಲ್ಕನೆಯದು ರೋಮಮ್ತಿಯೆಜೆರನಿಗೆ;