We Believe JesusFé, Esperança e Nova Vida

1 ಪೂರ್ವಕಾಲ ವೃತ್ತಾಂತ 24

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← 1 ಪೂರ್ವಕಾಲ ವೃತ್ತಾಂತ 23 1 ಪೂರ್ವಕಾಲ ವೃತ್ತಾಂತ 1 ಪೂರ್ವಕಾಲ ವೃತ್ತಾಂತ 25 →

1ಆರೋನನ ಪುತ್ರರಲ್ಲಿ ವರ್ಗಗಳಾಗಿ ವಿಭಾಗ ಆದವರು ಇವರೇ.

2ಆದರೆ ನಾದಾಬ್ ಮತ್ತು ಅಬೀಹೂ ತಮ್ಮ ತಂದೆಗಿಂತ ಮುಂಚೆ ಸತ್ತು ಮಕ್ಕಳಿಲ್ಲದೆ ಇದ್ದುದರಿಂದ ಎಲಿಯಾಜರನೂ, ಈತಾಮಾರನೂ ಯಾಜಕ ಸೇವೆ ಮಾಡಿದರು.

3ಆದ್ದರಿಂದ ದಾವೀದನು ಎಲಿಯಾಜರನ ಮಕ್ಕಳಲ್ಲಿ ಚಾದೋಕನಿಗೂ, ಈತಾಮಾರನ ಮಕ್ಕಳಲ್ಲಿ ಅಹೀಮೆಲೆಕನಿಗೂ ಅವರ ಸೇವೆಯಲ್ಲಿರುವ ಪದ್ದತಿಗಳ ಪ್ರಕಾರ ವರ್ಗಗಳನ್ನು ವಿಭಾಗಿಸಿದನು.

4ಈತಾಮಾರನ ಪುತ್ರರಿಗಿಂತ ಎಲಿಯಾಜರನ ಪುತ್ರರಲ್ಲಿ ಮುಖ್ಯಸ್ಥರು ಹೆಚ್ಚಾಗಿದ್ದುದರಿಂದ, ಅವರು ಸಹ ಹೀಗೆಯೇ ವಿಭಾಗಿಸಿದ್ದರು. ಎಲಿಯಾಜರನ ಪುತ್ರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಹದಿನಾರು ಮಂದಿ ಮುಖ್ಯಸ್ಥರು. ಈತಾಮಾರನ ಪುತ್ರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಎಂಟು ಮಂದಿ ಮುಖ್ಯಸ್ಥರು.

5ಇವರು ಸಹ ಚೀಟುಹಾಕುವ ಮೂಲಕ ನಿಷ್ಪಕ್ಷಪಾತವಾಗಿ ವಿಭಾಗವಾಗಿದ್ದರು. ಏಕೆಂದರೆ ಪರಿಶುದ್ಧ ಸ್ಥಾನದ ಪ್ರಧಾನರೂ, ದೇವರ ಪ್ರಧಾನರೂ ಎಲಿಯಾಜರನ ಪುತ್ರರೂ, ಈತಾಮಾರನ ಪುತ್ರರೂ ಇದ್ದರು.

6ಇದಲ್ಲದೆ ಲೇವಿಯರಲ್ಲಿ ಒಬ್ಬನಾದಂಥ ನೆತನೆಯೇಲ್ ಇವನ ಮಗ ಲೇಖಕನಾದ ಶೆಮಾಯನು ಅರಸನ ಮುಂದೆಯೂ; ಪ್ರಧಾನರು, ಯಾಜಕನಾದ ಚಾದೋಕನು, ಅಬಿಯಾತರನ ಮಗ ಅಹೀಮೆಲೆಕನು, ಯಾಜಕರ ಲೇವಿಯರ ಪಿತೃಗಳ ಮುಖ್ಯಸ್ಥರ ಮುಂದೆಯೂ ಅವರ ಹೆಸರುಗಳನ್ನು ಬರೆದನು. ಎಲಿಯಾಜರನಿಗೋಸ್ಕರ ಒಂದು ಶ್ರೇಷ್ಠ ಮನೆ ತೆಗೆದುಕೊಳ್ಳಲಾಯಿತು. ಅದರಂತೆಯೇ, ಈತಾಮಾರನಿಗೋಸ್ಕರವೂ ಒಂದು ತೆಗೆದುಕೊಳ್ಳಲಾಯಿತು.

7ಮೊದಲನೆಯ ಚೀಟು ಯೆಹೋಯಾರೀಬನಿಗೆ ಬಿದ್ದಿತು;

8ಮೂರನೆಯದು ಹಾರಿಮನಿಗೆ;

9ಐದನೆಯದು ಮಲ್ಕೀಯನಿಗೆ;

10ಏಳನೆಯದು ಹಕ್ಕೋಚನಿಗೆ;

11ಒಂಬತ್ತನೆಯದು ಯೆಷೂವನಿಗೆ;

12ಹನ್ನೊಂದನೆಯದು ಎಲ್ಯಾಷೀಬನಿಗೆ;

13ಹದಿಮೂರನೆಯದು ಹುಪ್ಪನಿಗೆ;

14ಹದಿನೈದನೆಯದು ಬಿಲ್ಗನಿಗೆ;

15ಹದಿನೇಳನೆಯದು ಹೇಜೀರನಿಗೆ;

16ಹತ್ತೊಂಬತ್ತನೆಯದು ಪೆತಹ್ಯನಿಗೆ;

17ಇಪ್ಪತ್ತೊಂದನೆಯದು ಯಾಕೀನನಿಗೆ;

18ಇಪ್ಪತ್ಮೂರನೆಯದು ದೆಲಾಯನಿಗೆ;

19ಇವೇ ಇಸ್ರಾಯೇಲಿನ ದೇವರಾದ ಯೆಹೋವ ದೇವರು ತಮ್ಮ ತಂದೆ ಆರೋನನಿಗೆ ಆಜ್ಞಾಪಿಸಿದ ಹಾಗೆ, ಅವನ ಕೈಕೆಳಗೆ ತಮ್ಮ ತಮ್ಮ ಕಟ್ಟಳೆಗಳ ಪ್ರಕಾರ, ಯೆಹೋವ ದೇವರ ಮನೆಯಲ್ಲಿ ಸೇವೆ ಮಾಡುವುದಕ್ಕೆ ಬರಬೇಕಾದ ಅವರ ನಿಯಮಗಳು.

20ಲೇವಿಯ ವಂಶಜರಲ್ಲಿ ಉಳಿದವರು ಯಾರೆಂದರೆ:

21ರೆಹಬ್ಯನನ್ನು ಕುರಿತು: ರೆಹಬ್ಯನ ಪುತ್ರರಲ್ಲಿ ಇಷೀಯನು ಮೊದಲನೆಯವನು.

22ಇಚ್ಹಾರರಲ್ಲಿ ಶೆಲೋಮೋತನು ಮೊದಲನೆಯವನು.

23ಹೆಬ್ರೋನನ ಪುತ್ರರಲ್ಲಿ

24ಉಜ್ಜೀಯೇಲನ ಕುಮಾರರಲ್ಲಿ ಮೀಕನು;

25ಮೀಕನ ಸಹೋದರನು ಇಷೀಯನು;

26ಮೆರಾರೀಯ ಪುತ್ರರಲ್ಲಿ ಮಹ್ಲೀ, ಮೂಷೀ;

27ಮೆರಾರೀಯ ಪುತ್ರರಲ್ಲಿ

28ಮಹ್ಲೀಯನಿಗೆ ಎಲಿಯಾಜರನು ಹುಟ್ಟಿದನು; ಎಲಿಯಾಜರನಿಗೆ ಪುತ್ರರಿರಲಿಲ್ಲ.

29ಕೀಷನಿಂದ ಯೆರಹ್ಮೇಲನು.

30ಮೂಷೀಯ ಪುತ್ರರು: ಮಹ್ಲೀ, ಏದೆರ್, ಯೆರೀಮೋತ್.

31ಇವರು ಹಾಗೆಯೇ ಅರಸನಾದ ದಾವೀದನ ಸಮ್ಮುಖದಲ್ಲಿಯೂ, ಚಾದೋಕನು, ಅಹೀಮೆಲೆಕನು, ಯಾಜಕರ ಮತ್ತು ಲೇವಿಯರ ಪಿತೃಗಳ ಮುಖ್ಯಸ್ಥರು, ಇವರ ಸಮ್ಮುಖದಲ್ಲಿಯೂ, ಆರೋನನ ಪುತ್ರರಾದ ತಮ್ಮ ಸಹೋದರರಿಗೆ ಎದುರಾಗಿ ಮುಖ್ಯಸ್ಥರಾದ ಪಿತೃಗಳು ತಮ್ಮ ಕಿರಿಯ ಸಹೋದರರಿಗೆದುರಾಗಿ ಚೀಟುಗಳನ್ನು ಹಾಕಿದರು.

← 1 ಪೂರ್ವಕಾಲ ವೃತ್ತಾಂತ 23 1 ಪೂರ್ವಕಾಲ ವೃತ್ತಾಂತ 1 ಪೂರ್ವಕಾಲ ವೃತ್ತಾಂತ 25 →

1 ಪೂರ್ವಕಾಲ ವೃತ್ತಾಂತ 24 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019