1ದಾವೀದನು ಮುದುಕನಾದ ಮೇಲೆ ತನ್ನ ಮಗ ಸೊಲೊಮೋನನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಮಾಡಿದನು.
2ಇದಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರಮಾಡಿದನು.
3ಲೇವಿಯರು ಮೂವತ್ತು ವರ್ಷ ಪ್ರಾಯದವರು ಮೊದಲುಗೊಂಡು ಎಣಿಕೆಯಾಗಿದ್ದರು. ಅವರ ಪುರುಷರ ಲೆಕ್ಕವು ಮೂವತ್ತೆಂಟು ಸಾವಿರವಾಗಿತ್ತು.
4ದಾವೀದನು ಹೇಳಿದ್ದೇನೆಂದರೆ, “ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಯೆಹೋವ ದೇವರ ಮನೆಯ ಕೆಲಸವನ್ನು ನಡಿಸುವವರಾಗಿದ್ದರು. ಮತ್ತು ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿಪತಿಗಳೂ ಆಗಿದ್ದರು.
5ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು. ನಾಲ್ಕು ಸಾವಿರ ಮಂದಿ ಸ್ತುತಿಸುವುದಕ್ಕೆ ತಾನು ಸಿದ್ಧಮಾಡಿದ ವಾದ್ಯಗಳಿಂದ ಯೆಹೋವ ದೇವರನ್ನು ಸ್ತುತಿಸಿದರು.”
6ಇದಲ್ಲದೆ ದಾವೀದನು ಗೇರ್ಷೋನ್ಯರು, ಕೊಹಾತ್ಯರು, ಮೆರಾರೀಯರು ಎಂಬ ಲೇವಿಯರನ್ನು ಮೂರು ವರ್ಗಗಳಾಗಿ ವಿಭಾಗಿಸಿದನು.
7ಗೇರ್ಷೋನ್ಯರಲ್ಲಿ,
8ಲದ್ದಾನನ ಪುತ್ರರು:
9ಶಿಮ್ಮೀಯ ಪುತ್ರರು:
10ಶಿಮ್ಮೀಯ ಪುತ್ರರು:
11ಯಹತನು ಮೊದಲನೆಯವನು, ಜೀಜನು ಎರಡನೆಯವನಾಗಿದ್ದನು. ಯೆಯೂಷನಿಗೂ ಬೆರೀಯನಿಗೂ ಹೆಚ್ಚು ಮಕ್ಕಳು ಇಲ್ಲದ್ದರಿಂದ ಇವರು ತಮ್ಮ ತಂದೆಯ ಮನೆಯಲ್ಲಿ ಒಂದೇ ಲೆಕ್ಕವಾಗಿ ಎಣಿಕೆಯಾಗಿದ್ದರು.
12ಕೊಹಾತನ ಪುತ್ರರು:
13ಅಮ್ರಾಮನ ಪುತ್ರರು:
14ದೇವರ ಮನುಷ್ಯನಾದ ಮೋಶೆಯಾದರೋ, ಅವನ ಪುತ್ರರು ಲೇವಿಯ ಗೋತ್ರದಲ್ಲಿ ಲೆಕ್ಕಿತರಾಗಿದ್ದರು.
15ಮೋಶೆಯ ಪುತ್ರರು:
16ಗೇರ್ಷೋಮನ ಪುತ್ರರಲ್ಲಿ
17ಎಲೀಯೆಜೆರನ ಪುತ್ರರು:
18ಇಚ್ಹಾರನ ಪುತ್ರರಲ್ಲಿ
19ಹೆಬ್ರೋನನ ಪುತ್ರರಲ್ಲಿ
20ಉಜ್ಜೀಯೇಲನ ಪುತ್ರರಲ್ಲಿ
21ಮೆರಾರೀಯ ಪುತ್ರರು:
22ಎಲಿಯಾಜರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಪುತ್ರಿಯರು ಮಾತ್ರ ಇದ್ದರು; ಇವರು ತಮ್ಮ ಬಂಧುಗಳಾದ ಕೀಷನ ಪುತ್ರರೊಂದಿಗೆ ಮದುವೆಯಾದರು.
23ಮೂಷೀಯ ಪುತ್ರರು:
24ಇವರು ತಮ್ಮ ಪಿತೃಗಳ ವಂಶದ ಪ್ರಕಾರವಾಗಿ ಲೇವಿಯ ಪುತ್ರರಾಗಿದ್ದರು. ತಮ್ಮ ಹೆಸರುಗಳಿಂದ, ಎಣಿಕೆಯಾಗಿದ್ದ ಇವರು ತಮ್ಮ ಕುಟುಂಬಗಳಲ್ಲಿ ಮುಖ್ಯಸ್ಥರಾಗಿದ್ದರು. ಇವರು ಇಪ್ಪತ್ತು ವರ್ಷ ಪ್ರಾಯದವರು ಮೊದಲುಗೊಂಡು, ಯೆಹೋವ ದೇವರ ಮನೆಯ ಸೇವೆಗೋಸ್ಕರ ಕೆಲಸಮಾಡಿದರು.
25ದಾವೀದನು, “ಇಸ್ರಾಯೇಲಿನ ದೇವರಾದ ಯೆಹೋವ ದೇವರು, ಅವರು ಯುಗಯುಗಾಂತರಕ್ಕೂ ಯೆರೂಸಲೇಮಿನಲ್ಲಿ ವಾಸಿಸುವ ಹಾಗೆ ತಮ್ಮ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾರೆ,” ಎಂದು ಹೇಳಿ,
26ಲೇವಿಯರನ್ನು ಕುರಿತು ಅವರು ಗುಡಾರವನ್ನೂ, ಅವರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು.
27ಏಕೆಂದರೆ ದಾವೀದನ ಕಡೇ ಮಾತುಗಳ ಪ್ರಕಾರ, ಲೇವಿಯರು ಇಪ್ಪತ್ತು ವರ್ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯದವರು ಮೊದಲುಗೊಂಡು ಎಣಿಕೆಯಾಗಿದ್ದರು.
28ಅವರು ಆರೋನನ ವಂಶಸ್ಥರ ಕೈಕೆಳಗಿದ್ದುಕೊಂಡು ಯೆಹೋವ ದೇವರ ಆಲಯದ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳಲ್ಲಿಯೂ ಸಮಸ್ತ ಪರಿಶುದ್ಧ ಸಾಮಗ್ರಿಗಳನ್ನು ಶುದ್ಧ ಮಾಡುವುದರಲ್ಲಿಯೂ,
29ಯೆಹೋವ ದೇವರ ಮಂದಿರದ ಸೇವೆಯ ಕಾರ್ಯದಲ್ಲಿರುವ ಸಮ್ಮುಖದ ರೊಟ್ಟಿಗೋಸ್ಕರವೂ, ಅರ್ಪಣೆ ಬಲಿಯ ನಯವಾದ ಹಿಟ್ಟಿಗೋಸ್ಕರವೂ, ಹುಳಿಯಿಲ್ಲದ ರೊಟ್ಟಿಗಳಿಗೋಸ್ಕರವೂ, ಬಾಂಡ್ಲಿಯಲ್ಲಿ ಮಾಡಿದ್ದಕ್ಕೋಸ್ಕರವೂ, ಕರಿದಿದ್ದಕ್ಕೋಸ್ಕರವೂ, ಸಮಸ್ತ ವಿವಿಧ ಅಳತೆಗೋಸ್ಕರವೂ ಆರೋನನ ಮಕ್ಕಳ ಬಳಿಯಲ್ಲಿ ಅವರಿಗೆ ನೇಮಕವಾಗಿತ್ತು.
30ಇದಲ್ಲದೆ ಉದಯಕಾಲದಲ್ಲಿಯೂ, ಸಾಯಂಕಾಲದಲ್ಲಿಯೂ ನಿಂತು, ಯೆಹೋವ ದೇವರನ್ನು ಕೊಂಡಾಡುವುದಕ್ಕೂ, ಯೆಹೋವ ದೇವರನ್ನು ಸ್ತುತಿಸುವುದಕ್ಕೂ,
31ಯೆಹೋವ ದೇವರ ಮುಂದೆ ನಿರಂತರವಾಗಿ ಅವರಿಗೆ ಆಜ್ಞಾಪಿಸಿದ ಕಟ್ಟಳೆಯ ಪ್ರಕಾರವಾಗಿ ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ನೇಮಕವಾದ ಹಬ್ಬಗಳಲ್ಲಿಯೂ ಲೆಕ್ಕದ ಪ್ರಕಾರ ಎಲ್ಲಾ ದಹನಬಲಿಗಳನ್ನು ಅರ್ಪಿಸುವುದು.
32ಯೆಹೋವ ದೇವರ ಮನೆಯ ಸೇವೆಯಲ್ಲಿ ದೇವದರ್ಶನ ಗುಡಾರದ ಕಾವಲನ್ನೂ, ಪರಿಶುದ್ಧ ಸ್ಥಾನದ ಕಾವಲನ್ನೂ, ತಮ್ಮ ಸಹೋದರರಾದ ಆರೋನನ ಪುತ್ರರ ಆಜ್ಞೆಯನ್ನೂ ಕೈಗೊಳ್ಳುವುದು ಅವರಿಗೆ ನೇಮಕವಾಗಿತ್ತು.