1ದ್ವಾರಪಾಲಕರ ವರ್ಗಗಳು:
2ಮೆಷೆಲೆಮ್ಯನ ಪುತ್ರರು:
3ಐದನೆಯವನು ಏಲಾಮನು; ಆರನೆಯವನು ಯೆಹೋಹಾನಾನನು;
4ಓಬೇದ್ ಏದೋಮನ ಪುತ್ರರು:
5ಆರನೆಯವನು ಅಮ್ಮಿಯೇಲ್;
6ಇದಲ್ಲದೆ ತನ್ನ ಮಗನಾದ ಶೆಮಾಯನಿಗೆ ತಮ್ಮ ತಂದೆಯ ಮನೆಯಲ್ಲಿ ಆಳುವ ಪುತ್ರರು ಹುಟ್ಟಿದರು, ಅವರು ಪರಾಕ್ರಮಶಾಲಿಗಳಾಗಿದ್ದರು.
7ಶೆಮಾಯನ ಪುತ್ರರು ಯಾರೆಂದರೆ:
8ಇವರೆಲ್ಲರು ಓಬೇದ್ ಏದೋಮನ ಪುತ್ರರು; ಇವರೂ, ತಮ್ಮ ಪುತ್ರರೂ, ತಮ್ಮ ಸಹೋದರರೂ ಸೇವೆಗೆ ಶಕ್ತಿಯುಳ್ಳ ಸ್ಥಿತಿವಂತರು; ಒಬೆದೆದೋಮನವರು ಅರವತ್ತೆರಡು ಮಂದಿಯಾಗಿದ್ದರು.
9ಮೆಷೆಲೆಮ್ಯನಿಗೆ ಬಲವುಳ್ಳ ಪುತ್ರರೂ, ಸಹೋದರರೂ ಹದಿನೆಂಟು ಮಂದಿಯಾಗಿದ್ದರು.
10ಇದಲ್ಲದೆ ಮೆರಾರೀಯ ಮಕ್ಕಳಲ್ಲಿರುವ ಹೋಸ ಎಂಬವನಿಗೆ ಮಕ್ಕಳಿದ್ದರು.
11ಎರಡನೆಯವನು ಹಿಲ್ಕೀಯನು; ಮೂರನೆಯವನು ಟೆಬಲ್ಯನು;
12ಇದರಲ್ಲಿ ದ್ವಾರಪಾಲಕರ ವರ್ಗಗಳು ಯೆಹೋವ ದೇವರ ಆಲಯದಲ್ಲಿ ಸೇವೆ ಮಾಡುವುದಕ್ಕೆ ವರ್ಗಕ್ಕೆದುರಾಗಿ ಮುಖ್ಯಸ್ಥರಲ್ಲಿ ವಿಭಾಗಿಸಲಾಗಿದ್ದವು.
13ಅವರು ಕಿರಿಯರು ಹಿರಿಯರ ಹಾಗೆ ತಮ್ಮ ಪಿತೃಗಳ ಮನೆಯ ಪ್ರಕಾರ ಬಾಗಿಲಿಂದ ಬಾಗಿಲಿಗೂ ಚೀಟುಗಳನ್ನು ಹಾಕಿದರು.
14ಪೂರ್ವದಿಕ್ಕಿನ ಭಾಗದ ಚೀಟು ಶೆಲೆಮ್ಯನಿಗೆ ಬಿತ್ತು.
15ಓಬೇದ್ ಏದೋಮನಿಗೆ ದಕ್ಷಿಣ ಭಾಗ ಬಂತು. ಅವನ ಪುತ್ರರಿಗೆ ಉಗ್ರಾಣ ಮನೆ ಬಂತು.
16ಶುಪ್ಪೀಮ್, ಹೋಸ ಎಂಬವರಿಗೆ ಪಶ್ಚಿಮದಲ್ಲಿರುವ ಶೆಲ್ಲೆಕೆತ್ ಎಂಬ ಬಾಗಿಲು ಬಂತು.
17ಪೂರ್ವ ಕಡೆಯಾಗಿ ಆರು ಮಂದಿ ಲೇವಿಯರಿದ್ದರು.
18ಪಶ್ಚಿಮ ಭಾಗವಾದ ದೇವಾಲಯದ ಅಂಗಳಕ್ಕೆ ಹೋಗುವ ರಾಜಮಾರ್ಗದಲ್ಲಿ ನಾಲ್ಕು ಮಂದಿಯೂ, ದೇವಾಲಯದ ಅಂಗಳ ಬಳಿಯಲ್ಲಿ ಇಬ್ಬರೂ ಇದ್ದರು.
19ಕೋರಹೀಯರ ಪುತ್ರರಲ್ಲಿಯೂ, ಮೆರಾರೀಯ ಪುತ್ರರಲ್ಲಿಯೂ ವಿಭಾಗಿಸಿದ ದ್ವಾರಪಾಲಕರ ವರ್ಗಗಳು ಇವೆ.
20ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಆಲಯದ ಬೊಕ್ಕಸದ ಮೇಲೆಯೂ, ಪ್ರತಿಷ್ಠಿತವಾದವುಗಳ ಬೊಕ್ಕಸಗಳ ಮೇಲೆಯೂ ಅಧಿಕಾರಿಯಾಗಿದ್ದನು.
21ಲದ್ದಾನನ ವಂಶಜರು: ಗೇರ್ಷೋನ್ಯನಾದ ಲದ್ದಾನನ ಪುತ್ರರು ಕುಟುಂಬಗಳ ಮುಖ್ಯಸ್ಥರಾಗಿದ್ದರು. ಈ ಗೇರ್ಷೋನ್ಯನಾದ ಲಡಾನನ ಮಗನು ಯೆಹೀಯೇಲನು.
22ಯೆಹೀಯೇಲನ ಪುತ್ರರು ಜೇತಾಮನು, ಅವನ ಸಹೋದರನಾದ ಯೋಯೇಲನು; ಇವರು ಯೆಹೋವ ದೇವರ ಆಲಯದ ಬೊಕ್ಕಸಗಳ ಮೇಲೆ ಇದ್ದರು.
23ಅಮ್ರಾಮಿಯರಲ್ಲಿಯೂ ಇಚ್ಹಾರರಲ್ಲಿಯೂ ಹೆಬ್ರೋನಿಯರಲ್ಲಿಯೂ ಉಜ್ಜೀಯೇಲರಲ್ಲಿಯೂ ಇವರ ಸಂತಾನದವರಲ್ಲಿ:
24ಮೋಶೆಯ ಮೊಮ್ಮಗನೂ, ಗೇರ್ಷೋಮನ ಮಗನೂ ಆಗಿರುವ ಶೆಬೂಯೇಲನು ಬೊಕ್ಕಸಗಳ ಮೇಲೆ ಅಧಿಕಾರಿಯಾಗಿದ್ದನು.
25ಇವನ ಸಹೋದರರು, ಎಲೀಯೆಜೆರನ ಮಗನು ರೆಹಬ್ಯನು, ಇವನ ಮಗನು ಯೆಶಾಯನು, ಇವನ ಮಗನು ಯೋರಾಮ, ಇವನ ಮಗನು ಜಿಕ್ರಿಯು, ಇವನ ಮಗನು ಶೆಲೋಮೋತನು.
26ಈ ಶೆಲೋಮೋತನೂ ಅವನ ಸಹೋದರರೂ ಅರಸನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತ್ರುಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆ ಮಾಡಿದ ಪ್ರತಿಷ್ಠಿತವಾದವುಗಳ ಬೊಕ್ಕಸಗಳನ್ನು ಕಾಯುತ್ತಿದ್ದರು.
27ಅವರು ಯೆಹೋವ ದೇವರ ಆಲಯವನ್ನು ದುರಸ್ತಿಪಡಿಸುವುದಕ್ಕೆ ಯುದ್ಧಗಳಿಂದಲೂ, ಕೊಳ್ಳೆಯಿಂದಲೂ ಸಂಪಾದಿಸಿದವುಗಳನ್ನು ಪ್ರತಿಷ್ಠೆ ಮಾಡಿದರು.
28ಇದಲ್ಲದೆ ದರ್ಶಿಯಾದ ಸಮುಯೇಲನೂ, ಕೀಷನ ಮಗ ಸೌಲನೂ, ನೇರನ ಮಗ ಅಬ್ನೇರನೂ, ಚೆರೂಯಳ ಮಗ ಯೋವಾಬನೂ ಪ್ರತಿಷ್ಠೆ ಮಾಡಿದ್ದೆಲ್ಲವೂ ಮತ್ತು ಯಾರು ಪ್ರತಿಷ್ಠೆ ಮಾಡಿದ್ದರೋ, ಅದೆಲ್ಲವೂ ಶೆಲೋಮೋತನ ಕೈಕೆಳಗೂ, ಅವನ ಸಹೋದರರ ಕೈಕೆಳಗೂ ಇತ್ತು.
29ಇಚ್ಹಾರರಲ್ಲಿ
30ಹೆಬ್ರೋನಿಯರಲ್ಲಿ
31ಹೆಬ್ರೋನಿಯರಲ್ಲಿ ಯೆರೀಯನು ತನ್ನ ಪಿತೃಗಳ ಸಂತತಿಗಳ ಪ್ರಕಾರ ಹೆಬ್ರೋನ್ಯರಲ್ಲಿ ಮುಖ್ಯಸ್ಥನಾಗಿದ್ದನು.
32ಇದಲ್ಲದೆ ಬಲವುಳ್ಳವರಾದ ಯೆರೀಯನ ಸಹೋದರರು ಎರಡು ಸಾವಿರದ ಏಳು ನೂರು ಮಂದಿ ಕುಟುಂಬಗಳ ಮುಖ್ಯಸ್ಥರಾಗಿದ್ದರು. ಅರಸನಾದ ದಾವೀದನು ಇವರನ್ನು ದೇವರ ಸಮಸ್ತ ಕಾರ್ಯಗಳ ನಿಮಿತ್ತವಾಗಿಯೂ ರೂಬೇನ್ಯರ ಮೇಲೆಯೂ, ಗಾದ್ಯರ ಮೇಲೆಯೂ, ಮನಸ್ಸೆಯ ಅರ್ಧ ಗೋತ್ರದ ಮೇಲೆಯೂ ಅಧಿಪತಿಗಳಾಗಿ ಮಾಡಿದನು.