1ಯೆಹೂದನ ವಂಶಜರು:
2ಶೋಬಾಲನ ಮಗನಾದ ರೆವಾಯನು ಯಹತನ ತಂದೆ. ಯಹತನು ಅಹೂಮೈ ಮತ್ತು ಲಹದ್ ಎಂಬವರ ತಂದೆ. ಇವರೇ ಚೊರ್‍ರದ ಕುಟುಂಬದವರು.
3ಏಟಾಮನ ಪುತ್ರರು:
4ಪೆನೂಯೇಲ್, ಗೆದೋರ್ ವಂಶದವರಿಗೆ ಮೂಲಪುರುಷನಾಗಿದ್ದನು. ಏಜೆರ್ ಹೂಷಾಹರ ಮೂಲಪುರುಷನಾಗಿದ್ದನು.
5ತೆಕೋವದ ತಂದೆ ಅಷ್ಹೂರನಿಗೆ ಹೆಲಾಹ, ನಾರ ಎಂಬ ಇಬ್ಬರು ಪತ್ನಿಯರಿದ್ದರು.
6ನಾರಳು ಅವನಿಗೆ ಅಹುಜ್ಜಾಮ್, ಹೇಫೆರ್, ತೇಮಾನಿ, ಅಹಷ್ಟಾರ್ಯನನ್ನು ಹೆತ್ತಳು. ಇವರೇ ನಾರಳ ಮಕ್ಕಳು.
7ಹೆಲಾಹಳ ಪುತ್ರರು:
8ಕೋಚನು ಅನೂಬ್‌ನನ್ನೂ, ಚೊಬೇಬನನ್ನೂ, ಹಾರುಮನ ಮಗನಾದ ಅಹರ‍್ಹೇಲನ ಸಂತತಿಗಳನ್ನೂ ಪಡೆದನು.
9ಯಾಬೇಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ, “ನಾನು ಇವನನ್ನು ವ್ಯಥೆಯಿಂದ ಹೆತ್ತೆನು,” ಎಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು.
10ಆದರೆ ಯಾಬೇಚನು ಇಸ್ರಾಯೇಲಿನ ದೇವರಿಗೆ, “ನೀವು ನನ್ನನ್ನು ನಿಜವಾಗಿ ಆಶೀರ್ವದಿಸಬೇಕು; ನನ್ನ ಮೇರೆಯನ್ನು ವಿಸ್ತರಿಸಬೇಕು; ನಿಮ್ಮ ಹಸ್ತವು ನನ್ನ ಸಂಗಡ ಇರಲಿ; ನನ್ನನ್ನು ವ್ಯಥೆಪಡಿಸದ ಹಾಗೆ ನನ್ನನ್ನು ಕೇಡಿನಿಂದ ತಪ್ಪಿಸಿರಿ,” ಎಂದು ಮೊರೆಯಿಟ್ಟನು. ದೇವರು ಅವನು ಬೇಡಿಕೊಂಡದ್ದನ್ನು ಅನುಗ್ರಹಿಸಿದರು.
11ಶೂಹನ ಸಹೋದರ ಕೆಲೂಬನು ಎಷ್ಟೋನನ ತಂದೆ ಮೆಹೀರನನ್ನು ಪಡೆದನು.
12ಎಷ್ಟೋನನಿಂದ ಬೇತ್ ರಾಫಾ, ಪಾಸೇಹ, ತೆಹಿನ್ನ ಎಂಬ ಮೂವರು ಮಕ್ಕಳು ಇದ್ದರು. ತೆಹಿನ್ನ ನಾಹಷ್ ಪಟ್ಟಣದ ಸ್ಥಾಪಕ. ಈ ಜನರ ವಂಶಜರು ರೇಕಾ ಎಂಬಲ್ಲಿ ವಾಸಿಸಿದ್ದರು.
13ಕೆನಾಜನ ಪುತ್ರರು:
14ಮೆಯೋನೋತೈ ಒಫ್ರಾಹನನ್ನು ಪಡೆದನು.
15ಯೆಫುನ್ನೆಯ ಮಗನಾದ ಕಾಲೇಬನ ಪುತ್ರರು:
16ಯೆಹಲ್ಲೆಲೇಲನ ಪುತ್ರರು:
17ಎಜ್ರನ ಪುತ್ರರು:
18ಇವರು ಮೆರೆದನು ಮದುವೆಯಾದ ಫರೋಹನ ಮಗಳು ಬಿತ್ಯಳ ಮಕ್ಕಳು.
19ಹೋದೀಯನು ನಹಮನ ಸಹೋದರಿಯನ್ನು ಮದುವೆಯಾದನು.
20ಶೀಮೋನನ ಪುತ್ರರು:
21ಯೆಹೂದನ ಮಗ ಶೇಲಹನ ಪುತ್ರರು:
22ಕೋಜೇಬದವರಾದ ಯೊಕೀಮ್ಯರೂ, ಯೋವಾಷನು, ಸಾರಾಫ ಮೋವಾಬ್ ಮತ್ತು ಯೆಷೂಬಿ ಲೆಹೇಮಿನಲ್ಲಿ ಅಧಿಕಾರವುಳ್ಳವರಾಗಿದ್ದರು. ಈ ದಾಖಲೆಗಳು ಪ್ರಾಚೀನ ಕಾಲದಿಂದ ಬಂದವು.
23ಇವರೇ ನೆಟಾಯಿಮ್, ಗೆದೇರ ಎಂಬ ಸ್ಥಳಗಳಲ್ಲಿ ವಾಸವಾಗಿದ್ದ ಕುಂಬಾರರು. ಅವರು ಅಲ್ಲಿಯೇ ಇದ್ದು ಅರಸನಿಗೋಸ್ಕರ ಕೆಲಸ ಮಾಡುತ್ತಿದ್ದರು.
24ಸಿಮೆಯೋನನ ವಂಶಜರು:
25ಅವನ ಮಗನಾದ ಶಲ್ಲೂಮನು, ಅವನ ಮಗನಾದ ಮಿಬ್ಸಾಮನು, ಅವನ ಮಗನಾದ ಮಿಷ್ಮಾವನು.
26ಮಿಷ್ಮಾವನ ವಂಶಜರು:
27ಶಿಮ್ಮಿಯಿಗೆ ಹದಿನಾರು ಮಂದಿ ಪುತ್ರರೂ, ಆರು ಮಂದಿ ಪುತ್ರಿಯರೂ ಇದ್ದರು. ಆದರೆ ಅವನ ಸಹೋದರರಿಗೆ ಬಹಳ ಮಕ್ಕಳಿರಲಿಲ್ಲ. ಅವರ ಸಮಸ್ತ ಸಂತತಿಯು ಯೆಹೂದದ ಮಕ್ಕಳ ಹಾಗೆ ಹೆಚ್ಚಾಗಿರಲಿಲ್ಲ.
28ಇವರು ಬೇರ್ಷೆಬದಲ್ಲಿಯೂ; ಮೋಲಾದದಲ್ಲಿಯೂ; ಹಚರ್ ಷೂವಾಲ್ ಎಂಬಲ್ಲಿಯೂ;
29ಬಿಲ್ಹದಲ್ಲಿಯೂ ಎಚೆಮಿನಲ್ಲಿಯೂ, ತೋಲಾದ್,
30ಬೆತೂಯೇಲ್, ಹೊರ್ಮದಲ್ಲಿಯೂ; ಚಿಕ್ಲಗಿನಲ್ಲಿಯೂ;
31ಬೇತ್ ಮರ್ಕಾಬೋತ್, ಹಚರ್ ಸೂಸೀಮ್, ಬೇತ್ ಬಿರೀ ಮತ್ತು ಶಾರಯಿಮ್‌ನಲ್ಲಿಯೂ ವಾಸವಾಗಿದ್ದರು. ದಾವೀದನ ಆಳ್ವಿಕೆಯವರೆಗೂ ಇವು ಅವರ ಪಟ್ಟಣಗಳಾಗಿದ್ದವು.
32ಅವರ ಸುತ್ತಲಿನ ಗ್ರಾಮಗಳು ಯಾವುವೆಂದರೆ: ಏಟಾಮ್, ಆಯಿನ್, ರಿಮ್ಮೋನ್, ತೋಕೆನ್, ಆಷಾನ್ ಎಂಬ ಐದು ಪಟ್ಟಣಗಳು.
33ಇದಲ್ಲದೆ ಆ ಪಟ್ಟಣಗಳ ಸುತ್ತಲಿದ್ದ ಊರುಗಳು ಬಾಳ್ ಪಟ್ಟಣದವರೆಗೆ ವಾಸವಾಗಿದ್ದರು.
34ಮೆಷೋಬಾಬನು, ಯಮ್ಲೇಕನು,
35ಯೋಯೇಲನು,
36ಎಲ್ಯೋವೇನೈ, ಯಾಕೋಬ, ಯೆಷೋಹಾಯ,
37ಶೆಮಾಯನ ಮಗ ಶಿಮ್ರಿಯ ಮಗ ಯೆದಾಯನ ಮಗ ಅಲ್ಲೋನನ ಮಗ ಶಿಪ್ಫಿಯ ಮಗ ಜೀಜನು.
38ಹೆಸರು ಹೆಸರಾಗಿ ಬರೆಯಲಾದ ಇವರು ತಮ್ಮ ಕುಟುಂಬಗಳಲ್ಲಿ ನಾಯಕರಾಗಿದ್ದರು.
39ತಮ್ಮ ಮಂದೆಗಳಿಗೆ ಮೇವನ್ನು ಹುಡುಕಲು ತಗ್ಗಿನ ಪೂರ್ವದಿಕ್ಕಿನಲ್ಲಿರುವ ಗೆದೋರು ಎಂಬ ಸ್ಥಳದ ಪ್ರವೇಶದವರೆಗೂ ಹೋದರು.
40ಅವರು ರಸವತ್ತಾದ ಒಳ್ಳೆಯ ಮೇವನ್ನು ಕಂಡುಕೊಂಡರು. ಆ ದೇಶವು ವಿಸ್ತಾರವಾಗಿಯೂ, ಶಾಂತವಾಗಿಯೂ, ಸಮಾಧಾನವಾಗಿಯೂ ಇತ್ತು. ಪೂರ್ವದಲ್ಲಿ ಹಾಮನ ವಂಶದವರು ಅಲ್ಲಿ ವಾಸವಾಗಿದ್ದರು.
41ಹೆಸರು ಹೆಸರಾಗಿ ಬರೆದಿರುವವರಾದ ಇವರು ಯೆಹೂದದ ಅರಸನಾದ ಹಿಜ್ಕೀಯನ ದಿವಸಗಳಲ್ಲಿ ಅಲ್ಲಿಗೆ ಹೋಗಿ ಹಾಮ್ಯರ ಡೇರೆಗಳನ್ನೂ ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಸಂಪೂರ್ಣವಾಗಿ ನಾಶಮಾಡಿದರು. ಅಲ್ಲಿ ತಮ್ಮ ಮಂದೆಗಳಿಗೆ ಮೇವು ಇರುವುದರಿಂದ ಇಂದಿನವರೆಗೂ ಅವರ ಸ್ಥಳದಲ್ಲಿ ವಾಸಿಸಿದರು.
42ಇದಲ್ಲದೆ ಅವರಲ್ಲಿ ಸಿಮೆಯೋನನ ಪುತ್ರರಲ್ಲಿ ಐನೂರು ಮಂದಿ ಇಷ್ಷೀಯ ಪುತ್ರರಾದ ಪೆಲಟ್ಯ, ನೆಯರ್ಯ, ರೆಫಾಯ, ಉಜ್ಜೀಯೇಲ್ ಎಂಬವರನ್ನು ತಮ್ಮ ಅಧಿಪತಿಗಳಾಗಿ ಮಾಡಿಕೊಂಡು. ಸೇಯೀರ್ ಎಂಬ ಪರ್ವತ ದೇಶಕ್ಕೆ ಹೋದರು.
43ಅವರು ತಪ್ಪಿಸಿಕೊಂಡ ಉಳಿದ ಅಮಾಲೇಕ್ಯರನ್ನು ಕೊಂದು, ಅಲ್ಲಿ ಇಂದಿನವರೆಗೂ ವಾಸವಾಗಿದ್ದಾರೆ.