1“ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ, 2:1 ಪ್ರಕ 1:11, 13, 16, 20:ಏಳು ನಕ್ಷತ್ರಗಳನ್ನು ತನ್ನ ಬಲಗೈಯಲ್ಲಿ ಹಿಡಿದುಕೊಂಡು 2:1 ಪ್ರಕ 1:11, 13, 16, 20:ಏಳು ಚಿನ್ನದ ದೀಪಸ್ತಂಭಗಳ ಮಧ್ಯದಲ್ಲಿ ಸಂಚರಿಸುವಾತನು ಹೇಳುವುದೇನಂದರೆ,
2“ನಿನ್ನ ಕೃತ್ಯಗಳನ್ನೂ, ಪ್ರಯಾಸವನ್ನೂ, ತಾಳ್ಮೆಯನ್ನೂ, ಬಲ್ಲೆನು. ನೀನು ದುರ್ಜನರನ್ನು ಸಹಿಸಲಾರೆ, ಅಪೊಸ್ತಲರಲ್ಲದಿದ್ದರೂ 2:2 2 ಕೊರಿ 11:13:ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು 2:2 1 ಯೋಹಾ 4:1:ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿರುವೆ.
3ನೀನು ತಾಳ್ಮೆಯುಳ್ಳವನಾಗಿ 2:3 ಯೋಹಾ 15:21:ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಸಹಿಸಿಕೊಂಡರೂ ಬಿದ್ದುಹೋಗದೆ ಇದ್ದುದನ್ನು ನಾನು ಬಲ್ಲೆನು.
4ಆದರೂ ನಿನ್ನ ಮೇಲೆ ಹೊರಿಸಬೇಕಾದ ಆಪಾದನೆ ಒಂದಿದೆ. 2:4 ಯೆರೆ 2:2:ಮೊದಲು ನಿನಗೆ ನನ್ನ ಮೇಲಿದ್ದ ಪ್ರೀತಿ ಈಗಿಲ್ಲ.
5ಆದ್ದರಿಂದ ನೀನು ಎಲ್ಲಿಂದ ಬಿದ್ದಿರುವಿಯೋ ಅದನ್ನು ನಿನ್ನ ನೆನಪಿಗೆ ತಂದುಕೋ. ಮಾನಸಾಂತರಪಟ್ಟು ದೇವರ ಕಡೆಗೆ ತಿರುಗಿ 2:5 ವ. 2:ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು. ನೀನು ಮಾನಸಾಂತರಪಡದಿದ್ದರೆ 2:5 ಪ್ರಕ 3:3, 19:ನಾನು ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದು ಹಾಕುವೆನು.
6ಆದರೆ ನಿನ್ನಲ್ಲಿ ಒಳ್ಳೆಯದು ಒಂದುಂಟು, ಅದೇನೆಂದರೆ ನಾನು ದ್ವೇಷಿಸುವ 2:6 ವ. 15:ನಿಕೊಲಾಯಿತರ ಕೃತ್ಯಗಳನ್ನು ನೀನೂ ಸಹ ದ್ವೇಷಿಸುತ್ತಿರುವಿ.
7ದೇವರಾತ್ಮನು ಸಭೆಗಳಿಗೆ ಹೇಳುವುದನ್ನು 2:7 ಮತ್ತಾ 11:15; 13:9 ಇತ್ಯಾದಿ. ಪ್ರಕ 2:11, 17, 29; 3:6, 13, 22; 13:9:ಕಿವಿಯುಳ್ಳವನು ಕೇಳಲಿ. 2:7 ಪ್ರಕ 3:5 ಇತ್ಯಾದಿ 21:7:ಯಾವನು ಜಯಹೊಂದುತ್ತಾನೋ ಅವನಿಗೆ 2:7 ಯೆಹೆ. 28:13; 31:8. (ಗ್ರೀಕ್ ಮೂಲ); ಲೂಕ 23:43:ದೇವರ ಪರದೈಸಿನಲ್ಲಿರುವ 2:7 ಅಂದರೆ, ಆನಂದವನ್ನು. ಆದಿ 2:8, 9; ಪ್ರಕ 22:2:ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವುದಕ್ಕೆ ಅನುಮತಿ ಕೊಡುವೆನು.
8“ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಬರೆ, ಆದಿಯು, ಅಂತ್ಯವೂ ಆಗಿರುವಾತನು, 2:8 ಪ್ರಕ 1:18:ಸತ್ತವನಾಗಿದ್ದು ಜೀವಿತನಾಗಿ ಎದ್ದು ಬಂದಾತನೂ 2:8 ಯೆಶಾ 44:6; ಪ್ರಕ 1:17, 18:ಹೇಳುವುದೇನಂದರೆ,
9ನಾನು ನಿನ್ನ ಸಂಕಟವನ್ನೂ 2:9 ಯಾಕೋಬ. 2:5; 1 ತಿಮೊ. 6:18; ಇಬ್ರಿ. 10:34; 11:26:ನಿನ್ನ ಬಡತನವನ್ನೂ ಬಲ್ಲೆನು, ಆದರೂ ನೀನು ಐಶ್ವರ್ಯವಂತನೇ. ಇದಲ್ಲದೆ 2:9 ಪ್ರಕ 3:9, 10:ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುವವರು ನಿನ್ನ ವಿಷಯವಾಗಿ ದೂಷಿಸುವುದನ್ನು ಬಲ್ಲೆನು. ಅವರು ಯೆಹೂದ್ಯರಲ್ಲ, ಸೈತಾನನ 2:9 ಸೈತಾನನ ಸಭಾ ಮಂದಿರದವರಾಗಿದ್ದಾರೆ. ಸಭಾಮಂದಿರದವರಾಗಿದ್ದಾರೆ.
10ನಿನಗೆ ಸಂಭವಿಸಬಹುದಾದ ಬಾಧೆಗಳಿಗೆ ಹೆದರಬೇಡ. ಇಗೋ, 2:10 ಪ್ರಕ 3:9, 10:ನಿಮ್ಮನ್ನು ಪರೀಕ್ಷಿಸಲು ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕಿದ್ದಾನೆ ಮತ್ತು 2:10 ಆದಿ 24:55; ದಾನಿ. 1:12, 14:ಹತ್ತು ದಿನಗಳ ತನಕ ನಿಮಗೆ ಸಂಕಟವಿರುವುದು. 2:10 ಇಬ್ರಿ. 12:11:ನೀನು ಸಾಯುವ ತನಕ 2:10 ಮತ್ತಾ 10:22; 24:13; ಮಾರ್ಕ 13:13; ಯಾಕೋಬ. 5:11:ನಂಬಿಗಸ್ತನಾಗಿರು, ನಾನು ನಿನಗೆ 2:10 ಯಾಕೋಬ. 1:12:ಜೀವದ ಕಿರೀಟವನ್ನು ಕೊಡುವೆನು.
11ದೇವರಾತ್ಮನು ಸಭೆಗಳಿಗೆ ಹೇಳುವುದನ್ನು 2:11 ವ. 7:ಕಿವಿಯುಳ್ಳವನು ಕೇಳಲಿ. 2:11 ವ. 7:ಜಯಹೊಂದುವವನಿಗೆ 2:11 ಪ್ರಕ 20, 6, 14; 21:8:ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.
12“ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಬರೆ, 2:12 ಪ್ರಕ 1:16; 2:16:ಹರಿತವಾದ ಇಬ್ಬಾಯಿ ಕತ್ತಿಯನ್ನು ಹಿಡಿದಾತನು ಹೇಳುವುದೇನಂದರೆ,
13ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು. 2:13 ವ. 9:ಅದು ಸೈತಾನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ದೃಢವಾಗಿ ಹಿಡಿದುಕೊಂಡಿರುವಿ. ಸೈತಾನನ ನಿವಾಸವಾದ ನಿನ್ನ ಪಟ್ಟಣದಲ್ಲಿ ನನಗೆ ನಂಬಿಗಸ್ತ ಸಾಕ್ಷಿಯಾದ ಅಂತಿಪನು ಕೊಲ್ಲಲ್ಪಟ್ಟಾಗಲೂ ನನ್ನಲ್ಲಿಟ್ಟಿರುವ ನಂಬಿಕೆಯನ್ನು ನೀನು ನಿರಾಕರಿಸಲಿಲ್ಲ.
14ಕೆಲವು ವಿಷಯಗಳಲ್ಲಿ ನಿನ್ನ ವಿರುದ್ಧ ನನಗೆ ಅಪಾದನೆಗಳಿವೆ. 2:14 ವ. 20:ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವುದರಲ್ಲಿಯೂ 2:14 ಅರಣ್ಯ 25:1, 2; 31:16; 1 ಕೊರಿ 10:8:ಜಾರತ್ವದಲ್ಲಿಯೂ ಇಸ್ರಾಯೇಲ್ಯರು ಮುಗ್ಗರಿಸಿ ಬೀಳಬೇಕೆಂದು 2:14 2 ಪೇತ್ರ. 2:15:ಬಿಳಾಮನು ಬಾಲಾಕನಿಗೆ ಕಲಿಸಿದ ದುರ್ಬೋಧನೆಯನ್ನು ಅವಲಂಬಿಸಿರುವವರು ನಿನ್ನಲ್ಲಿ ಇದ್ದಾರೆ.
15ಹಾಗೆಯೇ, 2:15 ವ. 6:ನಿಕೊಲಾಯಿತರ ಬೋಧನೆಯನ್ನು ಅವಲಂಬಿಸಿರುವವರೂ ನಿಮ್ಮಲ್ಲಿದ್ದಾರೆ.
16ಆದ್ದರಿಂದ ನೀನು ಪಶ್ಚಾತ್ತಾಪಪಟ್ಟು ತಿರುಗಿಕೊಳ್ಳದಿದ್ದರೆ 2:16 ಪ್ರಕ 22:7:ನಾನು ಬೇಗನೆ ನಿನ್ನ ಬಳಿಗೆ ಬಂದು 2:16 ವ. 12; ಪ್ರಕ 1:16:ನನ್ನ ಬಾಯಿಂದ ಹೊರಬರುವ ಕತ್ತಿಯಿಂದ 2:16 2 ಥೆಸ. 2:8:ಅವರ ಮೇಲೆ ಯುದ್ಧ ಮಾಡುವೆನು.
17ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ. 2:17 ವ. 7:ಯಾವನು ಜಯಹೊಂದುತ್ತಾನೋ ಅವನಿಗೆ 2:17 ಯೋಹಾ 6:48:ಬಚ್ಚಿಟ್ಟಿರುವ 2:17 ವಿಮೋ 16:33:ಮನ್ನವೆಂಬ ಆಹಾರವನ್ನು ಕೊಡುವೆನು. ಇದಲ್ಲದೆ ಅವನಿಗೆ ಬಿಳೀಕಲ್ಲನ್ನೂ ಆ ಕಲ್ಲಿನ ಮೇಲೆ ಕೆತ್ತಿದ 2:17 ಯೆಶಾ 62:2; 65:15; ಪ್ರಕ 3:12:ಹೊಸ ಹೆಸರನ್ನೂ ಕೊಡುವೆನು. 2:17 ಪ್ರಕ 14:3; 19:12:ಆ ಹೆಸರನ್ನು ಹೊಂದಿದವನಿಗೇ ಹೊರತು ಅದು ಮತ್ತಾರಿಗೂ ತಿಳಿಯದು.
18“ಥುವತೈರದಲ್ಲಿರುವ ಸಭೆಯ ದೂತನಿಗೆ ಬರೆ, 2:18 ಪ್ರಕ 1:14, 15:ಬೆಂಕಿಯ ಜ್ವಾಲೆಯಂತಿರುವ ಕಣ್ಣುಗಳೂ ಹೊಳೆಯುವ ತಾಮ್ರದಂತಿರುವ ಪಾದಗಳುಳ್ಳ ದೇವಕುಮಾರನು ಹೇಳುವುದೇನಂದರೆ,
192:19 ವ. 2:ನಿನ್ನ ಕೃತ್ಯಗಳನ್ನೂ, ನಿನ್ನ ಪ್ರೀತಿಯನ್ನೂ, ನಂಬಿಕೆಯನ್ನೂ, ಸೇವೆಯನ್ನೂ ಮತ್ತು ತಾಳ್ಮೆಯನ್ನೂ ಬಲ್ಲೆನು. ಇದಲ್ಲದೆ ನಿನ್ನ ಇತ್ತೀಚಿನ ಕೃತ್ಯಗಳು ನಿನ್ನ ಮೊದಲಿನ ಕೃತ್ಯಗಳಿಗಿಂತ ಮೇಲಾದದ್ದು ಎಂದು ಬಲ್ಲೆನು.
20ನಿನ್ನ ವಿರುದ್ಧ ನನಗೆ ಅಪಾದನೆ ಒಂದಿದೆ. 2:20 ಕೆಲವು ಪ್ರತಿಗಳಲ್ಲಿ, ನಿನ್ನ ಹೆಂಡತಿಯು ಎಂದು ಬರೆದದೆ. 1 ಅರಸು. 16:31; 21:25:ಯೆಜೆಬೇಲೆಂಬ ಆ ಹೆಂಗಸು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು, 2:20 ಅರಣ್ಯ 25:1, 2; 1 ಕೊರಿ 10:8:ಜಾರತ್ವಮಾಡಬಹುದೆಂದೂ 2:20 ವ. 14:ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನಬಹುದೆಂದೂ ನನ್ನ ದಾಸರಿಗೆ ಬೋಧಿಸುತ್ತಾ ಅವರನ್ನು ತಪ್ಪಾದ ಮಾರ್ಗದಲ್ಲಿ ನಡೆಸುತ್ತಿದ್ದರೂ ನೀನು ಅವಳನ್ನು ತಡೆಯದೆ ಅನುಮತಿಯನ್ನು ಕೊಟ್ಟಿರುವಿ.
21ಜಾರತ್ವವನ್ನು ಬಿಟ್ಟು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು, 2:21 ಪ್ರಕ 9:20, 21; 16:9, 11:ಆದರೆ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ಅವಳಿಗೆ ಮನಸ್ಸು ಬರಲಿಲ್ಲ.
22ಇಗೋ, ಅವಳು ಹಾಸಿಗೆಯಲ್ಲಿ ಬಿದ್ದುಕೊಂಡಿರುವಂತೆ ಮಾಡುವೆನು ಮತ್ತು ಅವಳೊಂದಿಗೆ ವ್ಯಭಿಚಾರಮಾಡುವವರು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಂಡು ಬಿಡದೆ ಹೋದರೆ ಅವರನ್ನು ಮಹಾ ಸಂಕಟದಲ್ಲಿ ಬೀಳುವಂತೆ ಮಾಡುವೆನು.
232:23 ಅಥವಾ, ಅವಳನ್ನು ಹಿಂಬಾಲಿಸಿದವರನ್ನು. ಅವಳ ಮಕ್ಕಳನ್ನು ಕೊಲ್ಲುವೆನು. ಆಗ ನಾನು ಮನುಷ್ಯರ 2:23 ಕೀರ್ತ 7:9; 26:2; ಯೆರೆ 20:12; ರೋಮಾ. 8:27:ಅಂತರಿಂದ್ರಿಯಗಳನ್ನೂ, ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆಂಬುದು ಎಲ್ಲಾ ಸಭೆಗಳಿಗೆ ಗೊತ್ತಾಗುವುದು. 2:23 ಮತ್ತಾ 16:27; 1 ಕೊರಿ 5:10. ಇಬ್ರಿ. 9:27; 1 ಪೇತ್ರ. 1:7:ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗೆ ತಕ್ಕ ಹಾಗೆ ಪ್ರತಿಫಲವನ್ನು ಕೊಡುವೆನು.
24“ಆದರೆ ಥುವತೈರದಲ್ಲಿರುವ ಉಳಿದವರಿಗೆ, ಅಂದರೆ ಸೈತಾನನಿಂದ ಪ್ರೇರಿತವಾದ ದುರ್ಬೋಧನೆಯ ಆಳವನ್ನು ಯಾರಾರು ತಿಳಿಯದೆಯೂ ಅದನ್ನು ಅವಲಂಬಿಸದೆಯೂ ಇರುತ್ತಾರೋ ಅವರಿಗೆ ಹೇಳುವುದೇನಂದರೆ, ನಾನು 2:24 ಅ. ಕೃ. 15:28:ಮತ್ತೊಂದು ಭಾರವನ್ನು ನಿಮ್ಮ ಮೇಲೆ ಹಾಕುವುದಿಲ್ಲ.
25ಆದರೆ 2:25 ಪ್ರಕ 3:11:ನೀವು ಹೊಂದಿರುವುದನ್ನು ನಾನು ಬರುವ ತನಕ ಭದ್ರವಾಗಿ ಹಿಡಿದುಕೊಂಡಿರಿ.
262:29 ವ. 7:ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.