1ಯೆಹೋವ ದೇವರ ಮಹಾ ಪ್ರೀತಿಯನ್ನು ಯುಗಯುಗಕ್ಕೂ ಹಾಡುವೆನು.
2ಎಂದೆಂದಿಗೂ ನಿಮ್ಮ ಪ್ರೀತಿಯನ್ನು ಸಾರುವೆನು.
3ನೀವು ಹೇಳಿದ್ದೇನಂದರೆ, “ನಾನು ಆಯ್ದುಕೊಂಡವನ ಸಂಗಡ ನಾನು ಒಡಂಬಡಿಕೆ ಮಾಡಿಕೊಂಡಿದ್ದೇನೆ.
4‘ಎಂದೆಂದಿಗೂ ನಿಮ್ಮ ಸಂತತಿಯನ್ನು ಸ್ಥಿರಪಡಿಸುವೆನು
5ಯೆಹೋವ ದೇವರೇ, ಆಕಾಶಗಳು ನಿಮ್ಮ ಅದ್ಭುತಗಳನ್ನೂ
6ಪ್ರಪಂಚದಲ್ಲಿ ಯೆಹೋವ ದೇವರಿಗೆ ಸಮಾನನಾದವನು ಯಾರು?
7ಅವರು ಪರಿಶುದ್ಧರ ಸಭೆಯಲ್ಲಿ ಭಯಭಕ್ತಿಗೆ ಪಾತ್ರರಾದ ದೇವರು.
8ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮ ಹಾಗೆ ಶಕ್ತರು ಯಾರು ಇದ್ದಾರೆ?
9ನೀವು ಸಮುದ್ರದ ಏರುವಿಕೆಯನ್ನು ಆಳುತ್ತೀರಿ.
10ಹತನಾದವನಂತೆ ನೀವು ರಹಬನ್ನು ಜಯಿಸಿದ್ದೀರಿ.
11ಆಕಾಶಗಳು ನಿಮ್ಮವು, ಭೂಮಿಯು ಸಹ ನಿಮ್ಮದು.
12ಉತ್ತರವನ್ನೂ ದಕ್ಷಿಣವನ್ನೂ ನೀವೇ ನಿರ್ಮಿಸಿದ್ದೀರಿ.
13ನಿಮ್ಮ ಭುಜವು ಶಕ್ತಿಯುತವಾದದ್ದು.
14ನೀತಿಯೂ, ನ್ಯಾಯವೂ ನಿಮ್ಮ ಸಿಂಹಾಸನದ ಅಸ್ತಿವಾರವಾಗಿವೆ.
15ನಿಮ್ಮ ಉತ್ಸಾಹ ಧ್ವನಿಯನ್ನು ಕೇಳಿದ ಜನರು ಧನ್ಯರು.
16ನಿಮ್ಮ ಹೆಸರಿನಿಂದ ದಿನವೆಲ್ಲಾ ಉಲ್ಲಾಸಪಟ್ಟು,
17ಏಕೆಂದರೆ ಅವರ ಬಲವೂ ಮಹಿಮೆಯೂ ನೀವೇ.
18ನಮ್ಮ ಗುರಾಣಿಯು ಯೆಹೋವ ದೇವರದೇ.
19ಆ ಕಾಲದಲ್ಲಿ ನೀವು ದರ್ಶನದಲ್ಲಿ
20ನನ್ನ ಸೇವಕನಾದ ದಾವೀದನನ್ನು ಕಂಡು,
21ನನ್ನ ಕೈ ಅವನನ್ನು ಪರಿಪಾಲಿಸುವುದು;
22ಶತ್ರುವು ಅವನನ್ನು ಜಯಿಸಲಾರನು.
23ಅವನ ಮುಂದೆ ಅವನ ವೈರಿಗಳನ್ನು ಓಡಿಸಿಬಿಡುವೆನು;
24ನನ್ನ ನಂಬಿಗಸ್ತಿಕೆಯೂ ಪ್ರೀತಿಯೂ ಅವನ ಸಂಗಡ ಇರುವುವು.
25ಸಮುದ್ರ ಹಾಗು ನದಿಗಳ ಮೇಲೆ
26ಅವನು, ‘ನೀವು ನನ್ನ ತಂದೆಯೂ
27ನಾನು ಆತನನ್ನು ನನ್ನ ಚೊಚ್ಚಲ ಮಗನನ್ನಾಗಿಯೂ
28ಎಂದೆಂದಿಗೂ ಆತನಿಗೋಸ್ಕರ ನನ್ನ ಪ್ರೀತಿಯನ್ನು ಕಾದಿಡುವೆನು.
29ಆತನ ಸಂತತಿಯನ್ನು ಸಹ ಎಂದೆಂದಿಗೂ
30“ಆತನ ಸಂತತಿಯು ನನ್ನ ನಿಯಮವನ್ನು ಬಿಟ್ಟು,
31ಅವರು ನನ್ನ ತೀರ್ಪುಗಳನ್ನು ಮುರಿದು,
32ಕೋಲಿನಿಂದ ಅವರ ದ್ರೋಹವನ್ನೂ
33ಆದರೂ ನನ್ನ ಪ್ರೀತಿ, ಕರುಣೆಯನ್ನು ಆತನಿಂದ ಸಂಪೂರ್ಣವಾಗಿ ತೊಲಗಿಸೆನು.
34ನನ್ನ ಒಡಂಬಡಿಕೆಯನ್ನು ನಾನು ಮುರಿಯೆನು.
35ಒಂದೇ ಸಾರಿ ನನ್ನ ಪರಿಶುದ್ಧತ್ವದಿಂದ ಆಣೆಯಿಟ್ಟು ಹೇಳಿದ್ದೇನೆ.
36ಆತನ ಸಂತತಿಯು ಯುಗಯುಗಕ್ಕೂ ಇರುವುದು.
37ಚಂದ್ರನ ಹಾಗೆ ಅದು ಯುಗಯುಗಕ್ಕೂ ಸ್ಥಿರವಾಗಿರುವುದು;
38ಆದರೆ ನೀವು ತಿರಸ್ಕರಿಸಿ ಬಿಟ್ಟುಬಿಟ್ಟ,
39ನಿಮ್ಮ ಸೇವಕನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಅಸಡ್ಡೆಮಾಡಿ,
40ಅವನ ಗೋಡೆಗಳನ್ನೆಲ್ಲಾ ಮುರಿದು,
41ದಾರಿಯಲ್ಲಿ ಹೋಗುವವರು ಅವನನ್ನು ಕೊಳ್ಳೆ ಹೊಡೆಯುತ್ತಾರೆ.
42ಅವನ ವೈರಿಗಳ ಬಲಗೈ ಉನ್ನತವಾಗಿದೆ.
43ಅವನ ಖಡ್ಗದ ಮೊನೆ ಮೊಂಡಾಗಿದೆ.
44ಅವನ ಪ್ರಭೆ ಮುಗಿದು ಹೋಗಿದೆ.
45ಅವನ ಯೌವನದ ದಿವಸಗಳು ಕಡಿಮೆಯಾಗಿದೆ.
46ಯೆಹೋವ ದೇವರೇ, ಇನ್ನೂ ಎಷ್ಟರವರೆಗೆ? ಸದಾಕಾಲಕ್ಕೆ ನೀವು ಅಡಗಿಕೊಳ್ಳುವಿರಾ?
47ನನ್ನ ಆಯುಸ್ಸು ಎಷ್ಟು ಕಡಿಮೆ ಎಂದು ಜ್ಞಾಪಕಮಾಡಿಕೊಳ್ಳಿರಿ.
48ಮರಣವನ್ನು ಕಾಣದೆ ಬದುಕುವಂಥವರು ಯಾರು?
49ಯೆಹೋವ ದೇವರೇ, ನಿಮ್ಮ ಸತ್ಯದಲ್ಲಿ ನೀವು ದಾವೀದನಿಗೆ ಆಣೆಯಿಟ್ಟೆ.
50ಯೆಹೋವ ದೇವರೇ, ನಿಮ್ಮ ಸೇವಕನು ನಿಂದೆ ಹೊಂದಿರುವದನ್ನು ನೆನಸಿಕೊಳ್ಳಿರಿ.
51ಯೆಹೋವ ದೇವರೇ, ನಿಮ್ಮ ಶತ್ರುಗಳು ನಿಂದಿಸುತ್ತಿದ್ದಾರೆ.
52ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯಾಗಲಿ.