1ದೇವರು ನಮ್ಮ ಮೇಲೆ ಕರುಣೆಯಿಟ್ಟು, ನಮ್ಮನ್ನು ಆಶೀರ್ವದಿಸಲಿ.
2ಆಗ ದೇವರೇ, ನಿಮ್ಮ ಮಾರ್ಗಗಳು ಭೂಮಿಯಲ್ಲಿ ಗೊತ್ತಾಗುವುದು.
3ದೇವರೇ, ಜನರು ನಿಮ್ಮನ್ನು ಕೊಂಡಾಡಲಿ,
4ಜನಾಂಗಗಳು ಸಂತೋಷಪಟ್ಟು ಉತ್ಸಾಹದಿಂದ ಹಾಡಲಿ.
5ದೇವರೇ, ಜನರು ನಿಮ್ಮನ್ನು ಕೊಂಡಾಡಲಿ.
6ಭೂಮಿಯು ತನ್ನ ಬೆಳೆಯನ್ನು ಕೊಡುವುದು.
7ದೇವರು ನಮ್ಮನ್ನು ಆಶೀರ್ವದಿಸುವರು.