1ದೇವರೇ, ನಿಮ್ಮ ಹೆಸರಿನಿಂದ ನನ್ನನ್ನು ರಕ್ಷಿಸಿರಿ.
2ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ.
3ಗರ್ವಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ.
4ನಿಜವಾಗಿಯೂ ದೇವರು ನನ್ನ ಸಹಾಯಕರು.
5ನನ್ನ ಕೆಡುಕನ್ನು ಬಯಸುವವರು ಕೇಡನ್ನು ಅನುಭವಿಸಲಿ.
6ನಾನು ನಿಮಗೆ ಸ್ವಂತ ಇಚ್ಛೆಯಿಂದ ಬಲಿಯನ್ನು ಅರ್ಪಿಸುವೆನು.
7ಏಕೆಂದರೆ ಎಲ್ಲಾ ಇಕ್ಕಟ್ಟಿನಿಂದ ನನ್ನನ್ನು ಬಿಡಿಸಿದ ದೇವರು ನೀವೇ.