1ಕೆಟ್ಟವರನ್ನು ನೋಡಿ ಕೋಪಿಸಿಕೊಳ್ಳಬೇಡ.
2ಏಕೆಂದರೆ, ಅವರು ಹುಲ್ಲಿನ ಹಾಗೆ ಬೇಗ ಒಣಗಿ ಹೋಗುವರು.
3ಯೆಹೋವ ದೇವರಲ್ಲಿ ಭರವಸೆ ಇಟ್ಟು ಒಳ್ಳೆಯದನ್ನು ಮಾಡು;
4ಯೆಹೋವ ದೇವರಲ್ಲಿ ಆನಂದವಾಗಿರು;
5ನಿನ್ನ ಮಾರ್ಗವನ್ನು ಯೆಹೋವ ದೇವರಿಗೆ ಒಪ್ಪಿಸು;
6ಅವರು ನಿನ್ನ ನೀತಿಯನ್ನು ಉದಯದ ಬೆಳಕಿನ ಹಾಗೆ ಮಾಡುವರು,
7ಯೆಹೋವ ದೇವರ ಮುಂದೆ ಶಾಂತನಾಗಿರು;
8ಕೋಪವನ್ನು ಅಡಗಿಸು ಮತ್ತು ರೋಷವನ್ನು ಬಿಡು.
9ಏಕೆಂದರೆ, ದುರ್ಮಾರ್ಗಿಗಳು ನಾಶವಾಗುವರು;
10ಇನ್ನು ಸ್ವಲ್ಪ ಸಮಯದಲ್ಲಿ ದುಷ್ಟನು ಕಾಣದೆ ಹೋಗುವನು.
11ಆದರೆ ಸಾತ್ವಿಕರು ಭೂಮಿಯನ್ನು ಸ್ವಾಧೀನಮಾಡಿಕೊಳ್ಳುವರು.
12ದುಷ್ಟನು ನೀತಿವಂತನಿಗಾಗಿ ಒಳಸಂಚು ಮಾಡುತ್ತಾನೆ,
13ದುಷ್ಟನ ದಿವಸ ಬರುತ್ತದೆಂದು ತಿಳಿದು
14ದುಷ್ಟರು ಬಡವನನ್ನೂ ದೀನನನ್ನೂ ಬೀಳಿಸಬೇಕೆಂದು
15ಆದರೆ ಅವರ ಖಡ್ಗ ಅವರ ಹೃದಯದಲ್ಲಿ ಇರಿದು ಬಿಡುವುದು;
16ದುಷ್ಟರ ಐಶ್ವರ್ಯಕ್ಕಿಂತ
17ಏಕೆಂದರೆ ದುಷ್ಟರ ತೋಳುಗಳು ಮುರಿದುಹೋಗುವವು,
18ನಿರ್ದೋಷಿಗಳು ತಮ್ಮ ದಿವಸಗಳನ್ನು ಯೆಹೋವ ದೇವರ ಪರಾಮರಿಕೆಯಲ್ಲಿ ಕಳೆಯುವರು.
19ಆಪತ್ಕಾಲದಲ್ಲಿ ಅವರು ಕುಂದುವುದಿಲ್ಲ;
20ಆದರೆ ದುಷ್ಟರು ನಾಶವಾಗುವರು;
21ದುಷ್ಟನು ಸಾಲ ಮಾಡಿ ಹಿಂದಿರುಗಿ ಕೊಡದೆ ಹೋಗುವನು.
22ಯೆಹೋವ ದೇವರು ಆಶೀರ್ವದಿಸುವವರು,
23ಯೆಹೋವ ದೇವರಲ್ಲಿ ಯಾರು ಹರ್ಷಿಸುತ್ತಾರೋ
24ಅವನು ಎಡವಿದರೂ ಬಿದ್ದುಹೋಗುವುದಿಲ್ಲ.
25ನಾನು ಬಾಲಕನಾಗಿದ್ದೆನು, ಈಗ ಮುದುಕನಾಗಿದ್ದೇನೆ;
26ಅವರು ಯಾವಾಗಲೂ ಧಾರಾಳವಾಗಿ ಸಾಲ ಕೊಡುತ್ತಾರೆ;
27ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು,
28ಏಕೆಂದರೆ ಯೆಹೋವ ದೇವರು ನ್ಯಾಯವನ್ನು ಪ್ರೀತಿಸುತ್ತಾರೆ;
29ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು
30ನೀತಿವಂತನ ಬಾಯಿ ಜ್ಞಾನವನ್ನು ನುಡಿಯುವುದು;
31ಅವನ ದೇವರ ನಿಯಮವೂ ಅವನ ಹೃದಯದಲ್ಲಿ ಇದೆ;
32ದುಷ್ಟನು ನೀತಿವಂತನಿಗಾಗಿ ಒಳಸಂಚು ಮಾಡುತ್ತಾನೆ;
33ಆದರೆ ಯೆಹೋವ ದೇವರು ಅವನನ್ನು ದುಷ್ಟನ ಕೈಯಲ್ಲಿ ಬಿಡುವುದಿಲ್ಲ;
34ಯೆಹೋವ ದೇವರನ್ನು ನಿರೀಕ್ಷಿಸು;
35ದುಷ್ಟರು ದೊಡ್ಡ ಅಧಿಕಾರದಲ್ಲಿರುವುದನ್ನು ನಾನು ಕಂಡೆನು;
36ಆದರೆ ಅವರು ಅಳಿದೇ ಹೋದರು;
37ನಿರ್ದೋಷಿಯನ್ನು ಗಮನಿಸು;
38ಆದರೆ ದ್ರೋಹಿಗಳೆಲ್ಲರೂ ನಾಶವಾಗುವರು;
39ನೀತಿವಂತರ ರಕ್ಷಣೆಯು ಯೆಹೋವ ದೇವರಿಂದಲೇ;
40ಯೆಹೋವ ದೇವರು ಅವರಿಗೆ ಸಹಾಯಮಾಡಿ ಅವರನ್ನು ಬಿಡಿಸುವರು.