1ಯೆಹೋವ ದೇವರಿಗೆ ಉಪಕಾರ ಸಲ್ಲಿಸಿರಿ; ಅವರು ಒಳ್ಳೆಯವರು;
2ದೇವಾಧಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿರಿ;
3ಪ್ರಭುಗಳ ಪ್ರಭುವಿಗೆ ಕೃತಜ್ಞತಾಸ್ತುತಿ ಸಲ್ಲಿಸಿರಿ;
4ಅವರೊಬ್ಬರೇ ಮಹಾ ಅದ್ಭುತಗಳನ್ನು ಮಾಡುತ್ತಾರೆ;
5ತಮ್ಮ ಜ್ಞಾನದಿಂದ ಪರಲೋಕಗಳನ್ನು ನಿರ್ಮಿಸಿದರು;
6ನೀರಿನ ಮೇಲೆ ಭೂಮಿಯನ್ನು ವಿಸ್ತರಿಸಿದರು;
7ದೊಡ್ಡ ಬೆಳಕುಗಳನ್ನು ನಿರ್ಮಿಸಿದರು;
8ಸೂರ್ಯನು ಹಗಲನ್ನಾಳುವಂತೆ ಮಾಡಿದರು;
9ರಾತ್ರಿಯನ್ನಾಳಲು ಚಂದ್ರನನ್ನೂ, ನಕ್ಷತ್ರಗಳನ್ನೂ ಇಟ್ಟರು;
10ಈಜಿಪ್ಟಿನವರ ಚೊಚ್ಚಲ ಮಕ್ಕಳನ್ನು ದಂಡಿಸಿದರು;
11ಇಸ್ರಾಯೇಲರನ್ನು ಈಜಪ್ಟಿನಿಂದ ಹೊರಗೆ ಬರಮಾಡಿದವರನ್ನು ಕೊಂಡಾಡಿರಿ;
12ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ ಅವರನ್ನು ಹೊರತಂದರು;
13ಕೆಂಪು ಸಮುದ್ರವನ್ನು ವಿಭಾಗಿಸಿದರು;
14ಇಸ್ರಾಯೇಲನ್ನು ಅದರ ನಡುವೆ ದಾಟಿಸಿದರು;
15ಫರೋಹನನ್ನೂ, ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿದರು;
16ತಮ್ಮ ಜನರನ್ನು ಮರುಭೂಮಿಯಲ್ಲಿ ನಡೆಸಿದರು;
17ದೊಡ್ಡ ಅರಸರನ್ನು ದಂಡಿಸಿದರು;
18ಶ್ರೇಷ್ಠ ಅರಸರನ್ನು ಸಹ ದಂಡಿಸಿದರು;
19ಅಮೋರಿಯರ ಅರಸನಾದ ಸೀಹೋನನು ದಂಡನೆಹೊಂದಿದನು;
20ಬಾಷಾನಿನ ಅರಸನಾದ ಓಗನು ಸಂಹಾರವಾದ ಮತ್ತೊಬ್ಬನು;
21ಅವರ ದೇಶವನ್ನು ಬಾಧ್ಯತೆಯಾಗಿ ದೇವರು ಕೊಟ್ಟರು;
22ತಮ್ಮ ಸೇವಕ ಇಸ್ರಾಯೇಲನಿಗೆ ಅದು ಸೊತ್ತಾಯಿತು;
23ನಾವು ಹೀನ ಸ್ಥಿತಿಯಲ್ಲಿದ್ದಾಗ ನಮ್ಮನ್ನು ನೆನಪಿಸಿಕೊಂಡರು;
24ನಮ್ಮ ವೈರಿಗಳಿಂದ ನಮ್ಮನ್ನು ಬಿಡಿಸಿದರು;
25ಸಕಲ ಜೀವಿಗಳಿಗೂ ಆಹಾರವನ್ನು ಕೊಡುತ್ತಾರೆ;
26ಪರಲೋಕದ ದೇವರನ್ನು ಕೊಂಡಾಡಿರಿ;