We Believe JesusFé, Esperança e Nova Vida

ಜ್ಞಾನೋಕ್ತಿಗಳು 31

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಜ್ಞಾನೋಕ್ತಿಗಳು 30 ಜ್ಞಾನೋಕ್ತಿಗಳು

1ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವಿಕ ಬುದ್ಧಿಮಾತುಗಳು:

2ನನ್ನ ಮಗನೇ ಕೇಳು, ನನ್ನ ಗರ್ಭಪುತ್ರನೇ ಕೇಳು!

3ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸದಿರು.

4ಲೆಮೂವೇಲನೇ, ಕುಡುಕತನವು ರಾಜರಿಗಾಗಿ ಅಲ್ಲ,

5ಕುಡಿದರೆ ಅವರು ನಿಯಮವನ್ನು ಮರೆತು,

6ನಾಶವಾಗುವವರಿಗೆ ಮದ್ಯಪಾನವಿರಲಿ.

7ಅವರು ಕುಡಿದು ಬಡತನವನ್ನು ಮರೆಯಲಿ.

8ತಮಗಾಗಿ ಮಾತನಾಡಲು ಸಾಧ್ಯವಾಗದವರಿಗಾಗಿ ಮಾತನಾಡು,

9ಅವರ ಪರವಾಗಿ ಮಾತನಾಡಿ, ನೀತಿನ್ಯಾಯವನ್ನು ಸ್ಥಾಪಿಸು.

10ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು?

11ಅವಳ ಪತಿಯ ಹೃದಯವು ಅವಳಲ್ಲಿ ಭರವಸೆ ಇಡುತ್ತದೆ,

12ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ,

13ಆಕೆಯು ಉಣ್ಣೆಯನ್ನೂ ಸೆಣಬನ್ನೂ ತಂದು,

14ಆಕೆಯು ವರ್ತಕರ ಹಡಗುಗಳಂತೆ ಇರುವಳು;

15ಇನ್ನೂ ಕತ್ತಲಿರುವಾಗಲೇ ಆಕೆಯು ಏಳುವಳು;

16ಆಕೆಯು ಹೊಲವನ್ನು ನೋಡಿ, ಅದನ್ನು ಕೊಂಡುಕೊಳ್ಳುತ್ತಾಳೆ.

17ಆಕೆಯು ನಡುಕಟ್ಟಿ ಆಸಕ್ತಿಯಿಂದ ಕೆಲಸ ಮಾಡುತ್ತಾಳೆ.

18ತನ್ನ ವ್ಯಾಪಾರವು ಲಾಭದಾಯಕವೆಂದು ಅವಳು ನೋಡುತ್ತಾಳೆ.

19ಅವಳು ರಾಟೆಯ ಮೇಲೆ ಕೈಹಾಕಿ,

20ಆಕೆಯು ಬಡವರಿಗಾಗಿ ಕೈ ಬಿಚ್ಚಿ ಕೊಡುತ್ತಾಳೆ.

21ಚಳಿಗಾಲದಲ್ಲಿ ತನ್ನ ಮನೆಯವರ ಬಗ್ಗೆ ಆಕೆಯು ಚಿಂತಿಸಬೇಕಾಗಿಲ್ಲ.

22ಆಕೆಯು ತಾನೇ ಕಂಬಳಿಗಳನ್ನು ನೇಯುತ್ತಾಳೆ.

23ಆಕೆಯ ಪತಿಯು ಪಟ್ಟಣದಲ್ಲಿ ಸನ್ಮಾನಿತ.

24ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ.

25ಆಕೆಯ ಉಡುಪು ಬಲವೂ ಘನತೆಯೂ ಆಗಿವೆ.

26ಆಕೆಯು ಜ್ಞಾನದಿಂದ ಮಾತನಾಡುತ್ತಾಳೆ.

27ಆಕೆಯು ತನ್ನ ಗೃಹಕೃತ್ಯಗಳನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ.

28ಆಕೆಯ ಮಕ್ಕಳು ಎದ್ದು, ಆಕೆಯನ್ನು ಧನ್ಯಳೆಂದು ಕರೆಯುವರು.

29“ಬಹುಮಂದಿ ಸ್ತ್ರೀಯರು ಗುಣವತಿಯರಾಗಿದ್ದಾರೆ.

30ಸೌಂದರ್ಯವು ಮೋಸಕರವಾದದ್ದು, ಸೌಂದರ್ಯವು ಶಾಶ್ವತವಲ್ಲ.

31ಆಕೆಯ ಕೈಕೆಲಸಕ್ಕೆ ತಕ್ಕ ಪ್ರತಿಫಲವನ್ನು ಸಲ್ಲಿಸಿ ಗೌರವಿಸಿರಿ.

← ಜ್ಞಾನೋಕ್ತಿಗಳು 30 ಜ್ಞಾನೋಕ್ತಿಗಳು

ಜ್ಞಾನೋಕ್ತಿಗಳು 31 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019