We Believe JesusFé, Esperança e Nova Vida

ಅರಣ್ಯಕಾಂಡ 29

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಅರಣ್ಯಕಾಂಡ 28 ಅರಣ್ಯಕಾಂಡ ಅರಣ್ಯಕಾಂಡ 30 →

1“ ‘ಏಳನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಿಬರಬೇಕು. ದೈನಂದಿನ ಉದ್ಯೋಗವನ್ನು ನೀವು ಮಾಡಬಾರದು. ಅದು ನಿಮಗೆ ತುತೂರಿಗಳನ್ನು ಊದುವ ದಿವಸವಾಗಿರುವುದು.

2ನೀವು ಯೆಹೋವ ದೇವರಿಗೆ ಸುವಾಸನೆಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ ದಹನಬಲಿಯಾಗಿ ಅರ್ಪಿಸಬೇಕು.

3ಅವುಗಳಿಗೆ ಧಾನ್ಯ ಸಮರ್ಪಣೆಯಾಗಿ ಎಣ್ಣೆಯಿಂದ ಕಲಸಿದ ಹಿಟ್ಟನ್ನು ಹೋರಿಗೆ ಎಫಾದ ಹತ್ತನೇ ಮೂರು ಭಾಗ29:3 ಸುಮಾರು ಐದು ಕಿಲೋಗ್ರಾಂ, ಟಗರಿಗೆ ಹತ್ತನೇ ಎರಡು ಭಾಗ29:3 ಸುಮಾರು 3.2 ಕಿಲೋಗ್ರಾಂ,

4ಆ ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಹತ್ತನೇ ಒಂದು ಭಾಗ29:4 ಸುಮಾರು 1.6 ಕಿಲೋಗ್ರಾಂ,

5ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.

6ಇದಲ್ಲದೆ ಪ್ರತಿ ತಿಂಗಳಿನ ಮತ್ತು ನಿತ್ಯವಾದ ದಹನಬಲಿಗಳಿಗೆ ಹೆಚ್ಚುವರಿಯಾಗಿ ಅವುಗಳ ಧಾನ್ಯ ಅರ್ಪಣೆಯನ್ನು ಮತ್ತು ಪಾನ ಅರ್ಪಣೆಗಳನ್ನು ನಿರ್ದಿಷ್ಟಪಡಿಸಿದಂತೆ ಸಮರ್ಪಣೆಯಾಗಬೇಕು, ಅವು ಯೆಹೋವ ದೇವರಿಗೆ ಸುವಾಸನೆಗಾಗಿ ಅರ್ಪಿಸುವ ದಹನಬಲಿಯಾಗಿರುವುವು.

7“ ‘ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯನ್ನು ಕೂಡಿಸಬೇಕು. ನೀವು ಎಲ್ಲವನ್ನು ವರ್ಜಿಸಿ, ಯಾವ ಕೆಲಸವನ್ನೂ ಮಾಡಬಾರದು.

8ಆದರೆ ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,

9ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಹಿಟ್ಟನ್ನು, ಹೋರಿಗೆ ಎಫಾದ ಹತ್ತನೇ ಮೂರು ಭಾಗ29:9 ಸುಮಾರು ಐದು ಕಿಲೋಗ್ರಾಂ, ಟಗರಿಗೆ ಎಫಾದ ಹತ್ತನೇ ಎರಡು ಭಾಗ29:9 ಸುಮಾರು 3.2 ಕಿಲೋಗ್ರಾಂ,

10ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಹತ್ತನೇ ಒಂದು ಭಾಗ29:10 ಸುಮಾರು 1.6 ಕಿಲೋಗ್ರಾಂ,

11ಪಾಪ ಪರಿಹಾರಕ ಬಲಿಗಾಗಿ ಒಂದು ಹೋತನ್ನು ಅರ್ಪಿಸುವದರ ಜೊತೆಗೆ ಪ್ರಾಯಶ್ಚಿತ್ತದ ಪಾಪ ಪರಿಹಾರಕ ಬಲಿಯನ್ನೂ ನಿತ್ಯ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆಯನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಸಮರ್ಪಿಸಬೇಕು.

12“ ‘ಏಳನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಿಬರಬೇಕು. ದೈನಂದಿನ ಉದ್ಯೋಗವನ್ನು ಮಾಡಬಾರದು. ಯೆಹೋವ ದೇವರಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು.

13ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಯಾಗಿ ಬಲಿಯನ್ನು ಅರ್ಪಿಸಬೇಕು. ಏನೆಂದರೆ, ದೋಷವಿಲ್ಲದ ಹದಿಮೂರು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,

14ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಹಿಟ್ಟನ್ನು ಹದಿಮೂರು ಹೋರಿಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಮೂರು ಭಾಗ29:14 ಸುಮಾರು ಐದು ಕಿಲೋಗ್ರಾಂ, ಎರಡು ಟಗರುಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಎರಡು ಭಾಗ29:14 ಸುಮಾರು 3.2 ಕಿಲೋಗ್ರಾಂ,

15ಹದಿನಾಲ್ಕು ಕುರಿಮರಿಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಒಂದು ಭಾಗ29:15 ಸುಮಾರು 1.6 ಕಿಲೋಗ್ರಾಂ,

16ಪಾಪ ಪರಿಹಾರಕ ಬಲಿಯಾಗಿ ಒಂದು ಹೋತವನ್ನೂ ಇದಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆ ಮತ್ತು ಪಾನದ ಅರ್ಪಣೆಯನ್ನೂ ಸಮರ್ಪಿಸಬೇಕು.

17“ ‘ಎರಡನೆಯ ದಿವಸದಲ್ಲಿ ಕಳಂಕವಿಲ್ಲದ ಹನ್ನೆರಡು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,

18ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,

19ದೋಷಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.

20“ ‘ಮೂರನೆಯ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,

21ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,

22ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.

23“ ‘ನಾಲ್ಕನೆಯ ದಿವಸದಲ್ಲಿ ದೋಷವಿಲ್ಲದ ಹತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,

24ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ

25ಪಾಪ ಪರಿಹಾರಕ ಬಲಿಯಾಗಿ ಒಂದು ಹೋತವನ್ನೂ ಇದಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.

26“ ‘ಐದನೆಯ ದಿವಸದಲ್ಲಿ ದೋಷವಿಲ್ಲದ ಒಂಬತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,

27ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯಪಾನ ಬಲಿಗಳನ್ನೂ,

28ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.

29“ ‘ಆರನೆಯ ದಿವಸದಲ್ಲಿ ದೋಷವಿಲ್ಲದ ಎಂಟು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,

30ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,

31ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.

32“ ‘ಏಳನೆಯ ದಿವಸದಲ್ಲಿ ದೋಷವಿಲ್ಲದ ಏಳು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ

33ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,

34ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.

35“ ‘ಎಂಟನೆಯ ದಿನದಲ್ಲಿ ನೀವು ಹಬ್ಬದ ಸಭೆಯಾಗಿ ಕೂಡಿಬರಬೇಕು. ದೈನಂದಿನ ಕೆಲಸವನ್ನು ನೀವು ಮಾಡಬಾರದು.

36ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಗಾಗಿ ದೋಷವಿಲ್ಲದ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ

37ಹೋರಿಗೆ, ಟಗರಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,

38ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.

39“ ‘ಇದಲ್ಲದೆ ನಿಮ್ಮ ಹರಕೆಯನ್ನೂ ನಿಮ್ಮ ಉಚಿತವಾದ ಬಲಿಗಳನ್ನೂ ನಿಮ್ಮ ದಹನಬಲಿಗಳನ್ನೂ ನಿಮ್ಮ ಧಾನ್ಯಪಾನ ಅರ್ಪಣೆಗಳನ್ನೂ ನಿಮ್ಮ ಸಮಾಧಾನ ಬಲಿಗಳನ್ನೂ ನೀವು ನಿಮ್ಮ ಹಬ್ಬಗಳಲ್ಲಿ ಯೆಹೋವ ದೇವರಿಗೆ ಮಾಡತಕ್ಕೆ ಸಮರ್ಪಣೆಗಳು ಇವೇ.’ ”

40ಯೆಹೋವ ದೇವರು ತನಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮೋಶೆಯು ಇಸ್ರಾಯೇಲರಿಗೆ ಹೇಳಿದನು.

← ಅರಣ್ಯಕಾಂಡ 28 ಅರಣ್ಯಕಾಂಡ ಅರಣ್ಯಕಾಂಡ 30 →

ಅರಣ್ಯಕಾಂಡ 29 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019