1ವ್ಯಾಧಿಯ ತರುವಾಯ ಯೆಹೋವ ದೇವರು ಮೋಶೆಗೂ, ಆರೋನನ ಮಗನೂ, ಯಾಜಕನೂ ಆಗಿರುವ ಎಲಿಯಾಜರನ ಸಂಗಡ ಮಾತನಾಡಿ,
2“ಇಸ್ರಾಯೇಲರ ಸಮಸ್ತ ಸಮೂಹದವರಲ್ಲಿ ಇಪ್ಪತ್ತು ವರ್ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರನ್ನು ಯುದ್ಧಕ್ಕೆ ಹೋಗುವುದಕ್ಕೆ ಶಕ್ತರಾದವರೆಲ್ಲರನ್ನು ಜನಗಣತಿ ಮಾಡಿ ಅವರ ಗೋತ್ರಗಳ ಪ್ರಕಾರ ತೆಗೆದುಕೊಳ್ಳಿರಿ,” ಎಂದರು.
3ಆಗ ಮೋಶೆಯೂ ಯಾಜಕನಾದ ಎಲಿಯಾಜರನೂ ಮೋವಾಬಿನ ಬಯಲುಗಳಲ್ಲಿ ಯೆರಿಕೋವಿಗೆದುರಾಗಿ ಯೊರ್ದನಿನ ಹತ್ತಿರ ಅವರ ಸಂಗಡ ಮಾತನಾಡಿ,
4“ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ, ಇಪ್ಪತ್ತು ವರ್ಷದವರನ್ನೂ ಅದಕ್ಕೆ ಅಧಿಕವಾದ ಪ್ರಾಯವುಳ್ಳವರನ್ನೂ ಎಣಿಸಬೇಕು.”
5ಇಸ್ರಾಯೇಲನ ಚೊಚ್ಚಲ ಮಗ ರೂಬೇನನೂ, ರೂಬೇನನ ಮಕ್ಕಳೂ;
6ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ;
7ಇವೇ ರೂಬೇನ್ಯರ ಕುಟುಂಬಗಳು. ಇವರಲ್ಲಿ ಎಣಿಕೆಯಾದವರ ಸಂಖ್ಯೆ 43,730 ಪುರುಷರು.
8ಪಲ್ಲೂವಿನ ಪುತ್ರ ಎಲೀಯಾಬನು.
9ಎಲೀಯಾಬನ ಪುತ್ರರು ನೆಮೂಯೇಲ್, ದಾತಾನ್, ಅಬೀರಾಮ್. ಈ ದಾತಾನನೂ, ಅಬೀರಾಮನೂ ಜನರಲ್ಲಿ ಪ್ರಸಿದ್ಧರಾಗಿದ್ದು; ಕೋರಹನ ಗುಂಪಿನಲ್ಲಿದ್ದು; ಯೆಹೋವ ದೇವರಿಗೂ ಮೋಶೆ ಆರೋನರಿಗೂ ವಿರೋಧವಾಗಿ ಹೋರಾಡಿದರು.
10ಭೂಮಿಯು ತನ್ನ ಬಾಯಿಯನ್ನು ತೆರೆದು, ಅವರನ್ನು ಕೋರಹನೊಂದಿಗೆ ನುಂಗಿಬಿಟ್ಟಿತು. ಹಾಗೆಯೇ ಆ ಗುಂಪಿನವರಲ್ಲಿ ಬೆಂಕಿಯು ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು. ಹೀಗೆ ಇಸ್ರಾಯೇಲರಿಗೆ ಎಚ್ಚರಿಕೆ ಉಂಟಾಗುವಂತೆ ಮಾಡಿತು. ಅವರು ದೃಷ್ಟಾಂತವಾದರು.
11ಆದರೂ ಕೋರಹನ ಮಕ್ಕಳು ಸಾಯಲಿಲ್ಲ.
12ಕುಟುಂಬಗಳ ಪ್ರಕಾರ ಸಿಮೆಯೋನನ ಪುತ್ರರು.
13ಜೆರಹನ ವಂಶಸ್ಥರಾದ ಜೆರಹಿಯರು,
14ಸಿಮೆಯೋನ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 22,200 ಪುರುಷರು.
15ಕುಟುಂಬಗಳ ಪ್ರಕಾರ ಗಾದನ ಮಕ್ಕಳು:
16ಒಜ್ನೀಯ ವಂಶಸ್ಥರಾದ ಒಜ್ನೀಯರು,
17ಅರೋದನಿಂದ ಅರೋದ್ಯರ ಕುಟುಂಬ;
18ಗಾದನ ಮಕ್ಕಳ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 40,500 ಪುರುಷರು.
19ಯೆಹೂದನ ಪುತ್ರರು: ಏರ್, ಓನಾನನೂ. ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು.
20ಕುಟುಂಬಗಳ ಪ್ರಕಾರ ಯೆಹೂದನ ಪುತ್ರರು.
21ಪೆರೆಚನ ಪುತ್ರರು,
22ಯೆಹೂದನ ಕುಟುಂಬಗಳಲ್ಲಿ ಲೆಕ್ಕಿತರಾದವರ ಸಂಖ್ಯೆ 76,500 ಪುರುಷರು.
23ಕುಟುಂಬಗಳ ಪ್ರಕಾರ ಇಸ್ಸಾಕಾರನ ಪುತ್ರರು.
24ಯಾಶೂಬನಿಂದ ಯಾಶೂಬ್ಯರ ಕುಟುಂಬ;
25ಇಸ್ಸಾಕಾರನ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 64,300 ಪುರುಷರು.
26ಜೆಬುಲೂನನ ಪುತ್ರರು: ಕುಟುಂಬಗಳ ಪ್ರಕಾರ
27ಜೆಬುಲೂನ್ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 60,500 ಪುರುಷರು.
28ಕುಟುಂಬಗಳ ಪ್ರಕಾರ ಯೋಸೇಫನ ಪುತ್ರರು: ಮನಸ್ಸೆ, ಎಫ್ರಾಯೀಮ್.
29ಮನಸ್ಸೆಯ ಪುತ್ರರು:
30ಗಿಲ್ಯಾದನ ಪುತ್ರರು ಇವರೇ.
31ಅಸ್ರೀಯೇಲನಿಂದ ಅಸ್ರೀಯೇಲ್ಯರ ಕುಟುಂಬ,
32ಶೆಮೀದಾಯನಿಂದ ಶೆಮೀದಾಯರ ಕುಟುಂಬ;
33ಹೇಫೆರನ ಮಗ ಚಲ್ಪಹಾದನಿಗೆ ಪುತ್ರರಿರಲಿಲ್ಲ. ಪುತ್ರಿಯರು ಇದ್ದರು. ಚಲ್ಪಹಾದನ ಪುತ್ರಿಯರ ಹೆಸರುಗಳು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ.
34ಮನಸ್ಸೆಯ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 52,700 ಪುರುಷರು.
35ಕುಟುಂಬಗಳ ಪ್ರಕಾರ ಎಫ್ರಾಯೀಮನ ಪುತ್ರರು:
36ಶೂತೆಲಹನ ಪುತ್ರರು:
37ಎಫ್ರಾಯೀಮನ ಪುತ್ರರ ಎಫ್ರಾಯೀಮನ ಪುತ್ರರುಗಳು ಇವೇ. ಅವರಲ್ಲಿ ಲೆಕ್ಕಿತರಾದವರ ಸಂಖ್ಯೆ 32,500.
38ಕುಟುಂಬಗಳ ಪ್ರಕಾರ ಬೆನ್ಯಾಮೀನನ ಪುತ್ರರು:
39ಶೂಫಾಮನಿಂದ ಶೂಫಾಮ್ಯರ ಕುಟುಂಬ;
40ಬೆಳಗನ ಪುತ್ರರು ಆರ್ದನೂ ನಾಮಾನನೂ.
41ಕುಟುಂಬಗಳ ಪ್ರಕಾರ ಬೆನ್ಯಾಮೀನನ ಪುತ್ರರು ಇವರೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 45,600.
42ಕುಟುಂಬಗಳ ಪ್ರಕಾರ ದಾನನ ಪುತ್ರರು:
43ಶೂಹಾಮ್ಯರ ಸಮಸ್ತ ಕುಟುಂಬಗಳಲ್ಲಿ ಲೆಕ್ಕಿತರಾದವರ ಸಂಖ್ಯೆ 64,400.
44ಕುಟುಂಬಗಳ ಪ್ರಕಾರ ಆಶೇರನ ಮಕ್ಕಳು:
45ಬೆರೀಯನ ಕುಮಾರರು:
46ಆಶೇರನ ಮಗಳ ಹೆಸರು ಸೆರಹ.
47ಲೆಕ್ಕಾನುಸಾರವಾದ ಆಶೇರನ ಪುತ್ರರ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 53,400.
48ಕುಟುಂಬಗಳ ಪ್ರಕಾರ ನಫ್ತಾಲಿಯ ಪುತ್ರರು:
49ಯೇಚೆರನಿಂದ ಯೇಚೆರ್ಯರ ಕುಟುಂಬ;
50ಕುಟುಂಬಗಳ ಪ್ರಕಾರ ನಫ್ತಾಲಿಯ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರು 45,400.
51ಇಸ್ರಾಯೇಲರಲ್ಲಿ ಲೆಕ್ಕಿತರಾದವರ ಸಂಖ್ಯೆ 6,01,730.
52ಯೆಹೋವ ದೇವರು ಮೋಶೆಗೆ,
53“ಇವರಿಗೆ ನಾಡನ್ನು ಹೆಸರುಗಳ ಲೆಕ್ಕದ ಪ್ರಕಾರ ಸೊತ್ತಾಗಿ ಹಂಚಿಕೊಡು.
54ಹೆಚ್ಚು ಮಂದಿಯುಳ್ಳ ಗೋತ್ರಕ್ಕೆ ಹೆಚ್ಚಾಗಿಯೂ ಕಡಿಮೆ ಮಂದಿಯುಳ್ಳ ಗೋತ್ರಕ್ಕೆ ಕಡಿಮೆಯಾಗಿಯೂ ಕೊಡು. ಹೀಗೆ ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸೊತ್ತನ್ನು ಹಂಚಿಕೊಡು.
55ಇದಲ್ಲದೆ ಚೀಟು ಹಾಕುವುದರಿಂದ ದೇಶವನ್ನು ಪಾಲುಮಾಡಬೇಕು. ತಮ್ಮ ಗೋತ್ರಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ತಮ್ಮ ಪಾಲನ್ನು ಪಡೆಯಬೇಕು.
56ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿಯ ಪ್ರಕಾರ ಪಾಲಾಗಬೇಕು.”
57ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಕೆಯಾದವರು ಇವರೇ.
58ಲೇವಿಯರ ಕುಟುಂಬಗಳು ಇವೇ.
59ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಆಕೆಯು ಈಜಿಪ್ಟಿನಲ್ಲಿ ಲೇವಿಯಿಂದ ಹುಟ್ಟಿದ ಮಗಳು. ಆಕೆಯು ಅಮ್ರಾಮನಿಗೆ ಆರೋನನನ್ನೂ ಮೋಶೆಯನ್ನೂ ಅವರ ಸಹೋದರಿಯಾದ ಮಿರ್ಯಾಮಳನ್ನೂ ಹೆತ್ತಳು.
60ಆರೋನನಿಗೆ ನಾದಾಬನೂ ಅಬೀಹೂ ಎಲಿಯಾಜರನೂ ಈತಾಮಾರನೂ ಹುಟ್ಟಿದರು.
61ಆದರೆ ನಾದಾಬನೂ ಅಬೀಹೂ ಯೆಹೋವ ದೇವರ ಮುಂದೆ ಆಜ್ಞಾಪಿಸದೇ ಇದ್ದ ಬೇರೆ ಅಗ್ನಿಯನ್ನು ಅರ್ಪಿಸಿದ್ದರಿಂದ ಸತ್ತರು.
62ಇವರಲ್ಲಿ ಲೆಕ್ಕಿತರಾದವರು ಒಂದು ತಿಂಗಳೂ ಹಾಗೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 23,000 ಆಗಿತ್ತು. ಇವರಿಗೆ ಇಸ್ರಾಯೇಲರಲ್ಲಿ ಸೊತ್ತು ದೊರೆಯದ ಕಾರಣ ಅವರು ಇಸ್ರಾಯೇಲರೊಳಗೆ ಲೆಕ್ಕಿತರಾಗಲಿಲ್ಲ.
63ಇವರನ್ನು ಮೋಶೆಯೂ ಯಾಜಕನಾದ ಎಲಿಯಾಜರನೂ ಇಸ್ರಾಯೇಲರಲ್ಲಿ ಯೆರಿಕೋ ಪಟ್ಟಣಕ್ಕೆದುರಾಗಿ ಯೊರ್ದನ್ ನದಿಯ ಮೇಲಿರುವ ಮೋವಾಬಿನ ಬೈಲುಗಳಲ್ಲಿ ಎಣಿಸಿದರು.
64ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಮರುಭೂಮಿಯಲ್ಲಿ ಇಸ್ರಾಯೇಲರನ್ನು ಎಣಿಸಿದಾಗ, ಎಣಿಕೆಯಾದವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.
65ಏಕೆಂದರೆ ಅವರು ಮರುಭೂಮಿಯಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಯೆಹೋವ ದೇವರು ಅವರಿಗೆ ಹೇಳಿದ್ದರು. ಈ ಪ್ರಕಾರ ಯೆಫುನ್ನೆಯ ಮಗ ಕಾಲೇಬನೂ ನೂನನ ಮಗ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನೂ ಉಳಿಯಲಿಲ್ಲ.