1ಆದರೆ ಇಸ್ರಾಯೇಲನ್ನು ಆಶೀರ್ವದಿಸುವುದಕ್ಕೆ ಯೆಹೋವ ದೇವರ ದೃಷ್ಟಿಗೆ ಒಳ್ಳೆಯದೆಂದು ಬಿಳಾಮನು ನೋಡಿದಾಗ, ಅವನು ಮುಂಚಿನ ಹಾಗೆ ಶಕುನವನ್ನು ಕಂಡುಕೊಳ್ಳುವುದಕ್ಕೆ ಹೋಗದೆ, ತನ್ನ ಮುಖವನ್ನು ಮರುಭೂಮಿಯ ಕಡೆಗೆ ತಿರುಗಿಸಿಕೊಂಡನು.
2ಬಿಳಾಮನು ತನ್ನ ಕಣ್ಣೆತ್ತಿ ಇಸ್ರಾಯೇಲರು ಅವರವರ ಗೋತ್ರಗಳ ಪ್ರಕಾರ ತಮ್ಮ ಡೇರೆಗಳಲ್ಲಿ ವಾಸವಾಗಿರುವುದನ್ನು ನೋಡಿದಾಗ, ದೇವರಾತ್ಮ ಪ್ರೇರಿತನಾಗಿ
3ಹೀಗೆ ಪ್ರವಾದಿಸಿದನು:
4ದೇವರ ಮಾತುಗಳನ್ನು ಕೇಳಿದವನೂ,
5“ಯಾಕೋಬೇ, ನಿನ್ನ ಡೇರೆಗಳೂ; ಇಸ್ರಾಯೇಲರೇ,
6“ಅವು ಕಣಿವೆಗಳ ಹಾಗೆ ವಿಸ್ತರಿಸಿವೆ.
7ಅವರ ತೊಟ್ಟಿಗಳಿಂದ ನೀರು ಹರಿಯುವಂತೆ ಮಾಡುವರು.
8“ದೇವರು ಅವರನ್ನು ಈಜಿಪ್ಟಿನಿಂದ ಹೊರಗೆ ತಂದನು.
9ಅವರು ಸಿಂಹದ ಹಾಗೆಯೂ, ಸಿಂಹಣಿ ಹಾಗೆಯೂ ಬಾಗಿ ಮಲಗುತ್ತಾನೆ.
10ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು, ಚಪ್ಪಾಳೆ ಹೊಡೆದು ಬಿಳಾಮನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆದೆನು. ಆದರೆ ಇಗೋ, ನೀನು ಈ ಮೂರು ಸಾರಿಯೂ ಆಶೀರ್ವದಿಸಿದೆ.
11ಈಗ ನಿನ್ನ ಸ್ಥಳಕ್ಕೆ ಓಡಿಹೋಗು. ನಾನು ನಿನ್ನನ್ನು ಬಹು ಗೌರವಿಸಬೇಕೆಂದಿದ್ದೆ. ಆದರೆ ಇಗೋ, ಯೆಹೋವ ದೇವರು ನಿನಗೆ ಘನತೆ ಬಾರದಂತೆ ತಡೆದಿದ್ದಾನೆ,” ಎಂದನು.
12ಬಿಳಾಮನು ಬಾಲಾಕನಿಗೆ, “ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ,
13‘ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿಬಂಗಾರಗಳನ್ನು ಕೊಟ್ಟರೂ, ನನ್ನ ಹೃದಯದಿಂದ ಒಳ್ಳೆಯದನ್ನಾದರೂ, ಕೆಟ್ಟದ್ದನ್ನಾದರೂ ಮಾಡುವುದಕ್ಕೆ ಯೆಹೋವ ದೇವರ ಆಜ್ಞೆಯನ್ನು ಮೀರಲಾರೆನು. ಯೆಹೋವ ದೇವರು ಏನು ಹೇಳುತ್ತಾರೋ, ಅದನ್ನೇ ಹೇಳುವೆನೆಂದು ನಾನು ಹೇಳಲಿಲ್ಲವೋ’? ಈಗ, ನನ್ನ ಜನರ ಬಳಿಗೆ ಹೋಗುತ್ತೇನೆ.
14ಬಾ, ಈ ಜನರು ನಿನ್ನ ಜನರಿಗೆ ಕಡೇ ದಿವಸಗಳಲ್ಲಿ ಏನು ಮಾಡುವರೋ, ಅದನ್ನು ನಿನಗೆ ತಿಳಿಸುವೆನು,” ಎಂದನು.
15ಆಗ ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ:
16ದೇವರ ಮಾತುಗಳನ್ನು ಕೇಳಿದವನೂ,
17“ನಾನು ಅವನನ್ನು ನೋಡುವೆನು, ಈಗಲ್ಲ.
18ಎದೋಮು ಸ್ವಾಧೀನವಾಗುವುದು;
19ಯಾಕೋಬನೊಳಗಿಂದ ಒಬ್ಬನು ಬಂದು ಆಳುವನು,
20ಅನಂತರ ಬಿಳಾಮನು ಅಮಾಲೇಕ್ಯರನ್ನು ನೋಡಿ ಪದ್ಯರೂಪವಾಗಿ ಹೇಳಿದ್ದೇನೆಂದರೆ:
21ಬಳಿಕ ಕೇನ್ಯರನ್ನು ಅವನು ನೋಡಿ ಪದ್ಯರೂಪವಾಗಿ ಹೇಳಿದ್ದೇನೆಂದರೆ:
22ಆದರೂ ಅಸ್ಸೀರಿಯರು ನಿನ್ನನ್ನು ಸೆರೆಹಿಡಿಯುವಷ್ಟರಲ್ಲೇ
23ಇದಲ್ಲದೆ ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ:
24ಕಿತ್ತೀಮೆಂಬ ತೀರದಿಂದ ಹಡಗುಗಳು ಬಂದು,
25ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ತಿರುಗಿಹೋದನು. ಬಾಲಾಕನು ಸಹ ತನ್ನ ಮಾರ್ಗವಾಗಿ ಹೋದನು.