1ಗತಕಾಲದಲ್ಲಿ ನಮ್ಮ ಪಿತೃಗಳ ಸಂಗಡ ವಿವಿಧ ರೀತಿಯಲ್ಲಿಯೂ ಅನೇಕಬಾರಿ ಪ್ರವಾದಿಗಳ ಮುಖಾಂತರವೂ ಮಾತನಾಡಿದ ದೇವರು,
2ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ಮುಖಾಂತರ ಮಾತನಾಡಿದ್ದಾರೆ. ಈ ಕ್ರಿಸ್ತ ಯೇಸುವನ್ನೇ ದೇವರು ಎಲ್ಲಕ್ಕೂ ಬಾಧ್ಯರನ್ನಾಗಿ ನೇಮಿಸಿದರು. ಇವರ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದರು.
3ಈ ಕ್ರಿಸ್ತ ಯೇಸುವೇ ದೇವರ ಮಹಿಮೆಯ ಪ್ರಕಾಶವೂ ಅವರ ವ್ಯಕ್ತಿತ್ವದ ಪ್ರತಿರೂಪವಾಗಿರುವ ದೇವಪುತ್ರ ಆಗಿದ್ದಾರೆ. ಈ ಕ್ರಿಸ್ತ ಯೇಸುವೇ ತಮ್ಮ ಶಕ್ತಿಯುತ ವಾಕ್ಯದಿಂದ ಸಮಸ್ತಕ್ಕೂ ಆಧಾರವಾಗಿದ್ದಾರೆ. ಕ್ರಿಸ್ತ ಯೇಸು ತಾವಾಗಿಯೇ ನಮ್ಮ ಪಾಪಗಳನ್ನು ಶುದ್ಧಿಮಾಡಿ ಉನ್ನತದೊಳಗೆ ಮಹೋನ್ನತ ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ.
4ದೇವಪುತ್ರ ಆಗಿರುವ ಕ್ರಿಸ್ತ ಯೇಸುವು ದೇವದೂತರಿಗಿಂತಲೂ ಶ್ರೇಷ್ಠರಾಗಿದ್ದಾರೆ. ಅವರಿಗಿಂತ ಅತಿ ಶ್ರೇಷ್ಠ ಹೆಸರನ್ನು ಬಾಧ್ಯವಾಗಿ ಹೊಂದಿದವರೂ ಆಗಿದ್ದಾರೆ.
5ದೇವರು ತಮ್ಮ ದೂತರೊಳಗೆ ಯಾರಿಗಾದರೂ ಹೀಗೆ ಎಂದಾದರೂ ಹೇಳಿದ್ದುಂಟೋ,
6ಇದಲ್ಲದೆ ಮೊದಲು ಹುಟ್ಟಿದವರನ್ನು ದೇವರು ಲೋಕದೊಳಗೆ ಬರಮಾಡುವಾಗ,
7ದೂತರ ವಿಷಯದಲ್ಲಿ ದೇವರು ಮಾತನಾಡುವಾಗ,
8ತಂದೆ ದೇವರು ತಮ್ಮ ಪುತ್ರ ಆಗಿರುವವರ ವಿಷಯದಲ್ಲಿ ಹೀಗೆ ಹೇಳಿದ್ದಾರೆ:
9ನೀವು ನೀತಿಯನ್ನು ಪ್ರೀತಿಸಿದ್ದೀರಿ. ಅನೀತಿಯನ್ನು ದ್ವೇಷಿಸಿದ್ದೀರಿ;
10ಇದಲ್ಲದೆ ದೇವರು ಹೀಗೆಂದರು:
11ಅವು ನಾಶವಾಗುವವು. ಆದರೆ ನೀವು ಸದಾಕಾಲವೂ ಜೀವಿಸುತ್ತೀರಿ.
12ಅವುಗಳನ್ನು ಮೇಲಂಗಿಯಂತೆ ಮಡಿಸುತ್ತಿರಿ,
13ಆದರೆ ದೇವದೂತರಲ್ಲಿ ಯಾರ ವಿಷಯದಲ್ಲಿಯಾದರೂ,
14ಈ ದೇವದೂತರೆಲ್ಲರೂ ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲಾದ ಸೇವೆಯ ಆತ್ಮಗಳು ಅಲ್ಲವೇ?