1ಸ್ವಲ್ಪ ಸಮಯವಾದ ತರುವಾಯ, ಗೋಧಿಯ ಸುಗ್ಗಿಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡುವುದಕ್ಕೆ ಒಂದು ಮೇಕೆಯ ಮರಿಯನ್ನು ತೆಗೆದುಕೊಂಡುಹೋಗಿ, ಅವಳ ತಂದೆಗೆ, “ನನ್ನ ಹೆಂಡತಿಯ ಕೋಣೆಗೆ ಹೋಗುತ್ತೇನೆ,” ಎಂದನು.
2ಆದರೆ ಅವಳ ತಂದೆಯು ಅವನನ್ನು ಅನುಮತಿಸದೆ ಅವನಿಗೆ, “ನೀನು ಅವಳನ್ನು ಪೂರ್ಣವಾಗಿ ಹಗೆ ಮಾಡಿದೆ ಎಂದು ನಾನು ನಿಜವಾಗಿ ತಿಳಿದು, ಅವಳನ್ನು ನಿನ್ನ ಜೊತೆಯವನಿಗೆ ಮದುವೆ ಮಾಡಿಕೊಟ್ಟೆನು. ಅವಳ ತಂಗಿ ಅವಳಿಗಿಂತ ಸುಂದರಿಯಾಗಿದ್ದಾಳೆ. ಅವಳಿಗೆ ಬದಲಾಗಿ ಇವಳನ್ನು ಮದುವೆಯಾಗು,” ಎಂದನು.
3ಆಗ ಸಂಸೋನನು, “ಅವರನ್ನು ಕುರಿತು, ನಾನು ಈ ಸಾರಿ ನಿರಪರಾಧಿ ಫಿಲಿಷ್ಟಿಯರಿಗೆ ಕೇಡನ್ನು ಮಾಡುವ ಸರಿಯಾದ ಸಮಯವಿದು,” ಎಂದು ಹೇಳಿ, ಹೊರಟುಹೋಗಿ,
4ಮುನ್ನೂರು ನರಿಗಳನ್ನು ಹಿಡಿದು, ಪಂಜುಗಳನ್ನು ತೆಗೆದುಕೊಂಡು ಬಂದು, ಬಾಲಕ್ಕೆ ಬಾಲ ಸೇರಿಸಿ, ಎರಡು ಬಾಲಗಳ ನಡುವೆ ಒಂದು ಪಂಜನ್ನು ಕಟ್ಟಿದನು.
5ಬಾಲಗಳಿಗೆ ಬೆಂಕಿ ಹಚ್ಚಿ, ಅವುಗಳನ್ನು ಫಿಲಿಷ್ಟಿಯರ ಪೈರಿನಲ್ಲಿ ಕಳುಹಿಸಿಬಿಟ್ಟು, ತೆನೆ ಗೂಡುಗಳನ್ನೂ, ಪೈರುಗಳನ್ನೂ, ದ್ರಾಕ್ಷಿತೋಟಗಳನ್ನೂ, ಹಿಪ್ಪೆಯ ತೋಪುಗಳನ್ನೂ ಕೂಡ ಸುಟ್ಟುಬಿಟ್ಟನು.
6ಫಿಲಿಷ್ಟಿಯರು, “ಇದನ್ನು ಮಾಡಿದವರು ಯಾರು?” ಎಂದರು. ಅದಕ್ಕೆ ಅವರು, “ತಿಮ್ನಾದವನ ಅಳಿಯನಾದ ಸಂಸೋನನು ಮಾಡಿದನು. ಏಕೆಂದರೆ ಇವನು ಅವನ ಹೆಂಡತಿಯನ್ನು ತೆಗೆದುಕೊಂಡು, ಅವನ ಜೊತೆಗಾರನಿಗೆ ಕೊಟ್ಟನು,” ಎಂದರು.
7ಸಂಸೋನನು ಅವರಿಗೆ, “ನೀವು ಈ ಪ್ರಕಾರ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿಗೆ ಮುಯ್ಯಿ ತೀರಿಸದೆ ಬಿಡುವುದಿಲ್ಲ,” ಎಂದನು.
8ಅವರ ಮೇಲೆ ಬಲವಾಗಿ ಬಿದ್ದು, ಅವರಲ್ಲಿ ಅನೇಕರನ್ನು ಕೊಂದುಹಾಕಿ ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
9ಫಿಲಿಷ್ಟಿಯರು ಹೊರಟುಹೋಗಿ ಯೆಹೂದದಲ್ಲಿ ಇಳಿದು, ಲೇಹಿಯಲ್ಲಿ ವ್ಯಾಪಿಸಿದರು.
10ಯೆಹೂದದಲ್ಲಿ ವಾಸಿಸುವ ಜನರು ಅವರಿಗೆ, “ನೀವು ನಮಗೆ ವಿರೋಧವಾಗಿ ಬಂದದ್ದೇನು?” ಎಂದರು.
11ಆಗ ಯೆಹೂದದಲ್ಲಿ ಮೂರು ಸಾವಿರ ಜನರು ಏಟಾಮ್ ಬಂಡೆಯ ಮೇಲಕ್ಕೆ ಏರಿಹೋಗಿ, ಸಂಸೋನನಿಗೆ, “ಫಿಲಿಷ್ಟಿಯರು ನಮ್ಮನ್ನು ಆಳುತ್ತಾ ಇದ್ದಾರೆಂದು ನಿನಗೆ ಗೊತ್ತಿಲ್ಲವೋ? ನೀನು ನಮಗೆ ಹೀಗೆ ಏಕೆ ಮಾಡಿದೆ?” ಎಂದರು.
12ಆಗ ಅವರು ಅವನಿಗೆ, “ನಾವು ನಿನ್ನನ್ನು ಕಟ್ಟಿ, ಫಿಲಿಷ್ಟಿಯರ ಕೈಗೆ ಒಪ್ಪಿಸಿಕೊಡಲು ಬಂದೆವು,” ಎಂದರು.
13ಅದಕ್ಕವರು, “ಇಲ್ಲ; ಆದರೆ ನಿನ್ನನ್ನು ಭದ್ರವಾಗಿ ಕಟ್ಟಿ, ಅವರ ಕೈಯಲ್ಲಿ ಒಪ್ಪಿಸಿಕೊಡುವೆವು. ನಾವು ನಿನ್ನನ್ನು ನಿಜವಾಗಿ ಕೊಲ್ಲುವುದೇ ಇಲ್ಲ,” ಎಂದರು. ಎರಡು ಹೊಸ ಹಗ್ಗಗಳಿಂದ ಅವನನ್ನು ಕಟ್ಟಿ, ಬಂಡೆಯ ಮೇಲಿನಿಂದ ತಂದರು.
14ಅವನು ಲೇಹಿಗೆ ಬಂದಾಗ, ಫಿಲಿಷ್ಟಿಯರು ಅವನ ಎದುರಾಗಿ ಆರ್ಭಟಿಸುತ್ತಾ ಬಂದರು. ಯೆಹೋವ ದೇವರ ಆತ್ಮ ಅವನ ಮೇಲೆ ಬಲವಾಗಿ ಬಂದದ್ದರಿಂದ, ಅವನ ತೋಳುಗಳಲ್ಲಿ ಕಟ್ಟಿದ್ದ ಸೆಣಬಿನ ಹಗ್ಗಗಳು ಬೆಂಕಿಯಲ್ಲಿ ಸುಟ್ಟುಹೋದ ದಾರದ ಹಾಗೆ ಆದವು. ಅವನ ಕೈಯಲ್ಲಿ ಇದ್ದ ಕಟ್ಟುಗಳು ಬಿಚ್ಚಿಬಿದ್ದವು.
15ಅವನು ಒಂದು ಕತ್ತೆಯ ದವಡೆಯ ಹೊಸ ಎಲುಬನ್ನು ಕಂಡುಕೊಂಡು, ತನ್ನ ಕೈಯನ್ನು ಚಾಚಿ ತೆಗೆದುಕೊಂಡು, ಅದರಿಂದ ಸಾವಿರ ಜನರನ್ನು ವಧಿಸಿಬಿಟ್ಟನು.
16ಆಗ ಸಂಸೋನನು ಹೇಳಿದ್ದೇನೆಂದರೆ,
17ಅವನು ಮಾತನಾಡಿ ತೀರಿಸಿದಾಗ, ತನ್ನ ಕೈಯಲ್ಲಿದ್ದ ದವಡೆಯ ಎಲುಬನ್ನು ಎಸೆದುಬಿಟ್ಟನು. ಆ ಸ್ಥಳಕ್ಕೆ ರಾಮತ್ ಲೇಹಿ15:17 ರಾಮತ್ ಲೇಹಿ ಅರ್ಥ ದವಡೆಯ ಎಲುಬು ಎಂಬ ಹೆಸರಾಯಿತು.
18ಅವನಿಗೆ ಬಹಳ ಬಾಯಾರಿಕೆಯಾದದರಿಂದ ಅವನು ಯೆಹೋವ ದೇವರಿಗೆ ಮೊರೆಯಿಟ್ಟನು, “ನಿಮ್ಮ ಸೇವಕನಿಗೆ ನೀವು ಈ ಮಹಾ ರಕ್ಷಣೆಯನ್ನು ಕೊಟ್ಟಿದ್ದೀರಿ. ಈಗ ಬಾಯಾರಿಕೆಯಿಂದ ಬಳಲಿ, ಸುನ್ನತಿಯಾಗದ ಈ ಜನರ ಕೈಯಲ್ಲಿ ನಾನು ಬೀಳಬೇಕೋ?” ಎಂದನು.
19ಆಗ ದೇವರು ಲೇಹಿಯಲ್ಲಿ ಟೊಳ್ಳಾದ ಸ್ಥಳವನ್ನು ಸೀಳಿಬಿಟ್ಟರು. ಅದರೊಳಗಿಂದ ನೀರು ಹೊರಟು ಬಂತು. ಸಂಸೋನನು ಆ ನೀರನ್ನು ಕುಡಿದದ್ದರಿಂದ ಅವನ ಬಲ ತಿರುಗಿಬಂದು, ಅವನು ಚೇತರಿಸಿಕೊಂಡನು. ಆದ್ದರಿಂದ ಏನ್ ಹಕ್ಕೋರೇ15:19 ಏನ್ ಹಕ್ಕೋರೇ ಅರ್ಥ ಮೊರೆಯಿಡುವವನ ಬುಗ್ಗೆ ಎಂದು ಅದಕ್ಕೆ ಹೆಸರಾಯಿತು. ಈ ದಿವಸದವರೆಗೂ ಅದು ಲೇಹಿಯಲ್ಲಿ ಇದೆ.
20ಸಂಸೋನನು ಫಿಲಿಷ್ಟಿಯರ ದಿವಸಗಳಲ್ಲಿ ಇಪ್ಪತ್ತು ವರ್ಷ ಇಸ್ರಾಯೇಲಿಗೆ ನ್ಯಾಯತೀರಿಸಿದನು.