We Believe JesusFé, Esperança e Nova Vida

ಯೋಹಾನ 19

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಯೋಹಾನ 18 ಯೋಹಾನ ಯೋಹಾನ 20 →

1ಆಗ ಪಿಲಾತನು ಯೇಸುವನ್ನು ತೆಗೆದುಕೊಂಡು ಕೊರಡೆಯಿಂದ ಹೊಡೆಸಿದನು.

2ಸೈನಿಕರು ಮುಳ್ಳಿನ ಕಿರೀಟವನ್ನು ಹೆಣೆದು ಅವರ ತಲೆಯ ಮೇಲಿಟ್ಟು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ತೊಡಿಸಿ,

3“ಯೆಹೂದ್ಯರ ಅರಸನೇ, ನಮಸ್ಕಾರ!” ಎಂದು ಹೇಳಿ ಯೇಸುವಿನ ಕೆನ್ನೆಗೆ ಹೊಡೆದರು.

4ಆಗ ಪಿಲಾತನು ತಿರುಗಿ ಹೊರಗೆ ಹೋಗಿ ಯೆಹೂದ್ಯರ ಗುಂಪಿಗೆ, “ಇಗೋ, ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲವೆಂದು ನೀವು ತಿಳಿದುಕೊಳ್ಳುವಂತೆ ಆತನನ್ನು ನಿಮ್ಮ ಬಳಿಗೆ ತರುತ್ತೇನೆ,” ಎಂದನು.

5ಯೇಸು ಮುಳ್ಳಿನ ಕಿರೀಟವನ್ನು ಮತ್ತು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಧರಿಸಿಕೊಂಡವರಾಗಿ ಹೊರಗೆ ಬಂದರು. ಪಿಲಾತನು ಅವರಿಗೆ, “ಇಗೋ, ಆ ಮನುಷ್ಯನು ಇವನೇ!” ಎಂದನು.

6ಮುಖ್ಯಯಾಜಕರೂ ಕಾವಲಾಳುಗಳೂ ಯೇಸುವನ್ನು ನೋಡಿದಾಗ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು!” ಎಂದು ಕೂಗಿದರು.

7ಯೆಹೂದ್ಯ ನಾಯಕರು ಅವನಿಗೆ, “ನಮಗೆ ಒಂದು ನಿಯಮವಿದೆ, ಆ ನಿಯಮದ ಪ್ರಕಾರ ಅವನು ಸಾಯಲೇಬೇಕು. ಏಕೆಂದರೆ ಅವನು ತನ್ನನ್ನು ದೇವರ ಪುತ್ರನನ್ನಾಗಿ ಮಾಡಿಕೊಂಡಿದ್ದಾನೆ,” ಎಂದರು.

8ಪಿಲಾತನು ಈ ಮಾತನ್ನು ಕೇಳಿದಾಗ ಬಹಳವಾಗಿ ಭಯಪಟ್ಟನು.

9ತಿರುಗಿ ತನ್ನ ನಿವಾಸದೊಳಗೆ ಹೋಗಿ, “ನೀನು ಎಲ್ಲಿಂದ ಬಂದವನು?” ಎಂದು ಯೇಸುವನ್ನು ಕೇಳಿದನು. ಆದರೆ ಯೇಸು ಅವನಿಗೆ ಉತ್ತರ ಕೊಡಲಿಲ್ಲ.

10ಆಗ ಪಿಲಾತನು ಯೇಸುವಿಗೆ, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವುದಕ್ಕೂ ನಿನ್ನನ್ನು ಶಿಲುಬೆಗೆ ಹಾಕಿಸುವುದಕ್ಕೂ ನನಗೆ ಅಧಿಕಾರವು ಉಂಟೆಂದು ನಿನಗೆ ತಿಳಿಯದೋ?” ಎಂದು ಕೇಳಿದನು.

11ಅದಕ್ಕೆ ಯೇಸು, “ಪರಲೋಕದಿಂದ ನಿನಗೆ ಕೊಟ್ಟ ಹೊರತು ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ,” ಎಂದು ಉತ್ತರಕೊಟ್ಟರು.

12ಇದನ್ನು ಕೇಳಿದಾಗಿಂದ ಪಿಲಾತನು ಯೇಸುವನ್ನು ಬಿಡಿಸಲು ಪ್ರಯತ್ನಿಸಿದನು. ಆದರೆ ಯೆಹೂದ್ಯ ನಾಯಕರು, “ನೀನು ಈ ಮನುಷ್ಯನನ್ನು ಬಿಡುಗಡೆ ಮಾಡಿದರೆ, ನೀನು ಕೈಸರನ ಮಿತ್ರನಲ್ಲ. ತನ್ನನ್ನು ತಾನೇ ಅರಸನನ್ನಾಗಿ ಮಾಡಿಕೊಳ್ಳುವವನು, ಕೈಸರನಿಗೆ ವಿರೋಧವಾಗಿ ಮಾತನಾಡುವವನಾಗಿದ್ದಾನೆ,” ಎಂದು ಕೂಗಿ ಹೇಳಿದರು.

13ಪಿಲಾತನು ಆ ಮಾತುಗಳನ್ನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದನು. ಹೀಬ್ರೂ ಭಾಷೆಯಲ್ಲಿ “ಗಬ್ಬಥಾ” ಎಂದು ಕರೆಯಲಾದ “ಕಲ್ಲು ಹಾಸಿದ ಕಟ್ಟೆ” ಎಂಬ ಕಟ್ಟೆಯ ಮೇಲಿದ್ದ ನ್ಯಾಯಾಸನದ ಮೇಲೆ ಕುಳಿತುಕೊಂಡನು.

14ಅದು ಪಸ್ಕಹಬ್ಬಕ್ಕೆ ಸಿದ್ಧಮಾಡುವ ದಿನದ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು.

15ಆದರೆ ಅವರು, “ಆತನನ್ನು ಕೊಲ್ಲಿಸು ಕೊಲ್ಲಿಸು! ಆತನನ್ನು ಶಿಲುಬೆಗೆ ಹಾಕು!” ಎಂದು ಕೂಗಿದರು.

16ಆಗ ಪಿಲಾತನು ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕಾಗಿ ಅವರಿಗೆ ಒಪ್ಪಿಸಿದನು. ಅವರು ಯೇಸುವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹೋದರು.

17ಯೇಸು ತಮ್ಮ ಶಿಲುಬೆಯನ್ನು ತಾವೇ ಹೊತ್ತುಕೊಂಡು “ತಲೆಬುರುಡೆಯ ಸ್ಥಳ”19:17 ಲ್ಯಾಟಿನ್ ಭಾಷೆಯಲ್ಲಿ ಕಲ್ವರಿ ಎಂಬ ಸ್ಥಳಕ್ಕೆ ಹೋದರು. ಅದು ಅರಮಾಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಅರ್ಥ.

18ಅಲ್ಲಿ ಯೇಸುವನ್ನೂ ಅವರ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಒಬ್ಬನನ್ನು ಯೇಸುವಿನ ಬಲಗಡೆಗೂ ಮತ್ತೊಬ್ಬನನ್ನು ಅವರ ಎಡಗಡೆಗೂ ಇಟ್ಟರು.

19ಪಿಲಾತನು ಒಂದು ಫಲಕದ ಮೇಲೆ ಶಿರೋನಾಮವನ್ನು ಬರೆಸಿ, ಅದನ್ನು ಶಿಲುಬೆಯ ಮೇಲಿಟ್ಟಿದ್ದನು. ಅದೇನಂದರೆ:

20ಈ ಫಲಕವನ್ನು ಯೆಹೂದ್ಯರಲ್ಲಿ ಅನೇಕರು ಓದಿದರು. ಏಕೆಂದರೆ ಯೇಸುವನ್ನು ಶಿಲುಬೆಗೇರಿಸಿದ ಆ ಸ್ಥಳವು ಪಟ್ಟಣಕ್ಕೆ ಸಮೀಪವಾಗಿತ್ತು. ಇದು ಹೀಬ್ರೂ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು.

21ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ, “ಯೆಹೂದ್ಯರ ಅರಸನೆಂದು ಬರೆಯಬೇಡ, ‘ತಾನು ಯೆಹೂದ್ಯರ ಅರಸನು ಎಂದು ಹೇಳಿಕೊಂಡವನು’ ಎಂದು ಬರೆ,” ಎಂದರು.

22ಪಿಲಾತನು, “ನಾನು ಬರೆದದ್ದು ಬರೆದಾಯಿತು,” ಎಂದು ಉತ್ತರಕೊಟ್ಟನು.

23ಸೈನಿಕರು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರ ವಸ್ತ್ರಗಳನ್ನು ತೆಗೆದು ಪ್ರತಿಯೊಬ್ಬ ಸೈನಿಕನಿಗೆ ಒಂದೊಂದು ಭಾಗದಂತೆ ನಾಲ್ಕು ಭಾಗಗಳನ್ನಾಗಿ ಹಂಚಿಕೊಂಡರು. ಅವರ ಒಳ ಅಂಗಿಯನ್ನು ಸಹ ತೆಗೆದುಕೊಂಡರು. ಆ ಒಳ ಅಂಗಿಯು ಹೊಲಿಗೆ ಇಲ್ಲದೆ ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು.

24ಆದ್ದರಿಂದ ಅವರು, “ನಾವು ಅದನ್ನು ಹರಿಯುವುದು ಬೇಡ. ಆದರೆ ಅದು ಯಾರಿಗಾಗುವುದೋ ಎಂದು ನೋಡುವುದಕ್ಕಾಗಿ ಚೀಟು ಹಾಕಿಕೊಳ್ಳೋಣ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಹೀಗೆ,

25ಯೇಸುವಿನ ಶಿಲುಬೆಯ ಬಳಿಯಲ್ಲಿ ಅವರ ತಾಯಿಯೂ ಅವರ ತಾಯಿಯ ಸಹೋದರಿಯೂ ಕ್ಲೋಪನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತಿದ್ದರು.

26ಯೇಸು ತಮ್ಮ ತಾಯಿಯೂ ತಾವು ಪ್ರೀತಿಸಿದ ಶಿಷ್ಯನೂ ಹತ್ತಿರದಲ್ಲಿ ನಿಂತಿರುವುದನ್ನು ಕಂಡು ತಮ್ಮ ತಾಯಿಗೆ, “ಅಮ್ಮಾ, ಇಗೋ, ನಿನ್ನ ಮಗನು,” ಎಂದರು.

27ಆಮೇಲೆ ಯೇಸು ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿಯು,” ಎಂದರು. ಆ ಸಮಯದಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲಿ ಇರಿಸಿಕೊಂಡನು.

28ಇದಾದ ಮೇಲೆ ಯೇಸು ಈಗ ಎಲ್ಲವೂ ಪೂರ್ತಿಯಾಗಿದೆಯೆಂದು ತಿಳಿದು, ಪವಿತ್ರ ವೇದದ ವಾಕ್ಯವು ನೆರವೇರುವಂತೆ, “ನನಗೆ ನೀರಡಿಕೆಯಾಗಿದೆ” ಎಂದರು.

29ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು. ಅವರು ಹೀರುವ ಪದಾರ್ಥವನ್ನು ಹುಳಿರಸದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಯೇಸುವಿನ ಬಾಯಿಗೆ ಇಟ್ಟರು.

30ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆಬಾಗಿ ತಮ್ಮ ಆತ್ಮವನ್ನು ಒಪ್ಪಿಸಿಕೊಟ್ಟರು.

31ಅದು ಪಸ್ಕಹಬ್ಬದ ಸಿದ್ಧತೆಯ ದಿನವಾಗಿತ್ತು. ಮರುದಿನ ವಿಶೇಷ ಸಬ್ಬತ್ ದಿನದಲ್ಲಿ ದೇಹಗಳು ಶಿಲುಬೆಯ ಮೇಲೆ ಇರಬಾರದೆಂದು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಯೆಹೂದ್ಯ ನಾಯಕರು ಪಿಲಾತನನ್ನು ಕೇಳಿಕೊಂಡರು.

32ಅದರಂತೆ ಸೈನಿಕರು ಬಂದು ಯೇಸುವಿನ ಜೊತೆಯಲ್ಲಿ ಶಿಲುಬೆಗೇರಿಸಲಾಗಿದ್ದ ಮೊದಲನೆಯವನ ಕಾಲುಗಳನ್ನೂ ಮತ್ತೊಬ್ಬನ ಕಾಲುಗಳನ್ನೂ ಮುರಿದರು.

33ಆದರೆ ಅವರು ಯೇಸುವಿನ ಬಳಿಗೆ ಬಂದಾಗ ಯೇಸು ಆಗಲೇ ಸತ್ತಿರುವುದನ್ನು ಕಂಡು ಅವರ ಕಾಲುಗಳನ್ನು ಮುರಿಯಲಿಲ್ಲ.

34ಆದರೆ ಸೈನಿಕರಲ್ಲಿ ಒಬ್ಬನು ಈಟಿಯಿಂದ ಯೇಸುವಿನ ಪಕ್ಕೆಯನ್ನು ತಿವಿದನು. ಕೂಡಲೇ ರಕ್ತವೂ ನೀರೂ ಹೊರಗೆ ಬಂದವು.

35ಇದನ್ನು ಕಣ್ಣಾರೆ ಕಂಡವನೇ ಸಾಕ್ಷಿ ಕೊಟ್ಟಿದ್ದಾನೆ. ಅವನ ಸಾಕ್ಷಿಯು ಸತ್ಯವಾದದ್ದು, ನೀವು ಸಹ ನಂಬುವಂತೆ ತಾನು ಹೇಳಿರುವುದು ಸತ್ಯವೆಂದು ಅವನು ಬಲ್ಲನು.

36ಏಕೆಂದರೆ, “ಯೇಸುವಿನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು,”19:36 ವಿಮೋ 12:46; ಅರಣ್ಯ 9:12; ಕೀರ್ತನೆ 34:20 ಎಂಬ ಪವಿತ್ರ ವೇದದ ವಾಕ್ಯವು ನೆರವೇರುವಂತೆಯೇ ಇವೆಲ್ಲಾ ಸಂಭವಿಸಿದವು.

37ಮತ್ತೊಂದು ಪವಿತ್ರ ವೇದದ ವಾಕ್ಯವು, “ತಾವು ಇರಿದವನನ್ನು ಅವರು ನೋಡುವರು,”19:37 ಜೆಕರ್ಯ 12:10 ಎಂದು ಹೇಳುತ್ತದೆ.

38ತರುವಾಯ ಯೆಹೂದ್ಯರ ಭಯದ ನಿಮಿತ್ತದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವುದಕ್ಕೆ ಪಿಲಾತನನ್ನು ಕೇಳಿಕೊಂಡನು. ಆಗ ಪಿಲಾತನು ಅಪ್ಪಣೆಕೊಡಲು ಅವನು ಬಂದು ಯೇಸುವಿನ ದೇಹವನ್ನು ತೆಗೆದುಕೊಂಡು ಹೋದನು.

39ಇದಲ್ಲದೆ ಮೊದಲು ಒಂದು ಸಾರಿ ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ, ಅಗರುಗಳನ್ನು,19:39 ಇದು ಸುವಾಸನೆಯುಳ್ಳ ಗಿಡದ ತೊಗಟೆ ಸುಗಂಧದ್ರವ್ಯ ಬೆರೆಸಿದ ಮಿಶ್ರಣವನ್ನು, ಮೂವತ್ತು ಕಿಲೋಗ್ರಾಮಿನಷ್ಟು ತೆಗೆದುಕೊಂಡು ಅಲ್ಲಿಗೆ ಬಂದನು.

40ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಳುವ ಪದ್ಧತಿಯ ಪ್ರಕಾರ ಅದನ್ನು ಸುಗಂಧದ್ರವ್ಯಗಳೊಂದಿಗೆ ನಾರುಬಟ್ಟೆಗಳಲ್ಲಿ ಸುತ್ತಿದರು.

41ಯೇಸು ಶಿಲುಬೆಗೇರಿಸಿದ ಸ್ಥಳದಲ್ಲಿ ಒಂದು ತೋಟವಿತ್ತು. ಆ ತೋಟದಲ್ಲಿ ಯಾರನ್ನೂ ಇಡದೆ ಇದ್ದ ಒಂದು ಹೊಸ ಸಮಾಧಿಯಿತ್ತು.

42ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದದ್ದರಿಂದಲೂ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವನ್ನು ಅಲ್ಲಿಯೇ ಸಮಾಧಿಮಾಡಿದರು.

← ಯೋಹಾನ 18 ಯೋಹಾನ ಯೋಹಾನ 20 →

ಯೋಹಾನ 19 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019