1ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೇಳಿದ್ದೇನೆಂದರೆ:
2“ಅಧಿಕಾರ ಮತ್ತು ವಿಸ್ಮಯ ದೇವರಿಗೆ ಸೇರಿದೆ;
3ದೇವರ ಸೈನ್ಯಗಳಿಗೆ ಲೆಕ್ಕ ಉಂಟೋ?
4ಮನುಷ್ಯನು ದೇವರ ಮುಂದೆ ನೀತಿವಂತನಾಗುವುದು ಹೇಗೆ?
5ಇಗೋ, ಚಂದ್ರನೂ ಪ್ರಕಾಶಮಾನವಾಗಿರುವದಿಲ್ಲ;
6ಹೀಗಿರುವಲ್ಲಿ ಹುಳುವಿನಂಥ ಮನುಷ್ಯನು ದೇವರ ದೃಷ್ಟಿಯಲ್ಲಿ ಎಷ್ಟೋ ಕಡಿಮೆ!