We Believe JesusFé, Esperança e Nova Vida

ಯೆಶಾಯ 19

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಯೆಶಾಯ 18 ಯೆಶಾಯ ಯೆಶಾಯ 20 →

1ಈಜಿಪ್ಟಿನವರ ವಿಷಯವಾದ ಪ್ರವಾದನೆ:

2ಇದಲ್ಲದೆ ನಾನು ಈಜಿಪ್ಟಿನವನಿಗೆ ವಿರೋಧವಾಗಿ ಈಜಿಪ್ಟಿನವನನ್ನು ಎಬ್ಬಿಸುವೆನು.

3ಈಜಿಪ್ಟಿನವರ ಮನಸ್ಸು ಭಯಗೊಳ್ಳುವುದು

4ಈಜಿಪ್ಟಿನವರನ್ನು ಕ್ರೂರನಾದ

5ನೈಲ್ ನದಿಯ ನೀರು ಬತ್ತಿಹೋಗುವುದು.

6ಕಾಲುವೆಗಳು ನಾರುವುವು.

7ನೈಲ್ ನದಿಯ ಹತ್ತಿರದ

8ಮೀನುಗಾರರು ಕೂಡ ದುಃಖಿಸುವರು

9ನಯವಾದ ನಾರಿನ ಕೆಲಸದವರು

10ಬಟ್ಟೆಯಲ್ಲಿ ಕೆಲಸ ಮಾಡುವವರು ಖಿನ್ನರಾಗುತ್ತಾರೆ,

11ಚೋವನ್ ಪಟ್ಟಣದ ಅಧಿಪತಿಗಳು ಕೇವಲ ಬುದ್ಧಿಹೀನರು;

12ನಿನ್ನ ಜ್ಞಾನಿಗಳು ಎಲ್ಲಿ?

13ಚೋವನಿನ ಶ್ರೇಷ್ಠರು ಮೂರ್ಖರಾಗಿದ್ದಾರೆ.

14ಯೆಹೋವ ದೇವರು ಅವರ ಮಧ್ಯದಲ್ಲಿ

15ಈಜಿಪ್ಟಿನಲ್ಲಿ ತಲೆಯಾಗಲಿ, ಬಾಲವಾಗಲಿ, ಕೊಂಬೆಯಾಗಲಿ,

16ಆ ದಿನದಲ್ಲಿ ಈಜಿಪ್ಟಿನವರು ಹೆಂಗಸರ ಹಾಗೆ ಇರುವರು. ಸೇನಾಧೀಶ್ವರ ಯೆಹೋವ ದೇವರು ಅದರ ಮೇಲೆ ಎತ್ತಿದ ಕೈಯನ್ನು ಬೀಸುತ್ತಿರುವುದರಿಂದ ಅವರು ಹೆದರಿ ಭಯಪಡುವರು.

17ಈಜಿಪ್ಟ್ ಬೆಚ್ಚಿ ಬೀಳುವುದಕ್ಕೆ ಯೆಹೂದ ದೇಶವು ಕಾರಣವಾಗುವುದು, ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನು ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿಗೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಆಲೋಚನೆಯನ್ನು ತಿಳಿದು ಬೆರಗಾಗುವನು.

18ಆ ದಿವಸದಲ್ಲಿ ಈಜಿಪ್ಟಿನ ಐದು ಪಟ್ಟಣಗಳು ಸೇನಾಧೀಶ್ವರ ಯೆಹೋವ ದೇವರಿಗೆ ಆಣೆಯಿಟ್ಟುಕೊಳ್ಳುವವು. ಕಾನಾನಿನ ಭಾಷೆಯನ್ನಾಡುವವರಿಂದ ತುಂಬಿದ ಐದು ಪಟ್ಟಣಗಳು ಈಜಿಪ್ಟ್ ದೇಶದಲ್ಲಿರುವುವು. ಅವುಗಳಲ್ಲಿ ಒಂದರ ಹೆಸರು “ನಾಶಪುರ19:18 ನಾಶಪುರ ಕೆಲವು ಹಸ್ತಪ್ರತಿಗಳಲ್ಲಿ ರವಿಪುರ.”

19ಆ ದಿನದಲ್ಲಿ ಈಜಿಪ್ಟ್ ದೇಶದ ಮಧ್ಯದಲ್ಲಿ ಯೆಹೋವ ದೇವರಿಗೆ ಬಲಿಪೀಠವು ದೇಶದ ಎಲ್ಲೆಯಲ್ಲಿ ಯೆಹೋವ ದೇವರಿಗೆ ಒಂದು ಸ್ತಂಭವು ಇರುವುದು.

20ಅದು ಸೇನಾಧೀಶ್ವರ ಯೆಹೋವ ದೇವರಿಗೆ ಈಜಿಪ್ಟ್ ದೇಶದಲ್ಲಿ ಗುರುತಾಗಿ ಸಾಕ್ಷಿಯಾಗಿರುವುದು. ಏಕೆಂದರೆ ಹಿಂಸಕರ ದೆಸೆಯಿಂದ ಯೆಹೋವ ದೇವರನ್ನು ಕೂಗಿಕೊಳ್ಳಲು, ದೇವರು ಅವರಿಗೆ ಒಬ್ಬ ಶೂರನಾದ ರಕ್ಷಕನನ್ನು ಕಳುಹಿಸಿ, ಅವರನ್ನು ಬಿಡುಗಡೆ ಮಾಡುವರು.

21ಯೆಹೋವ ದೇವರು ತಮ್ಮನ್ನು ಈಜಿಪ್ಟಿನವರಿಗೆ ತಿಳಿಯಪಡಿಸಲು, ಅವರು ಆ ದಿನದಲ್ಲಿ ಯೆಹೋವ ದೇವರನ್ನು ತಿಳಿದುಕೊಳ್ಳುವರು ಮತ್ತು ಬಲಿಕಾಣಿಕೆಗಳಿಂದ ಸೇವೆಮಾಡುವರು. ಹೌದು, ಅವರು ಯೆಹೋವ ದೇವರಿಗೆ ಪ್ರಮಾಣ ಮಾಡಿಕೊಂಡು ನೆರವೇರಿಸುವರು.

22ಇದಲ್ಲದೆ ಯೆಹೋವ ದೇವರು ಈಜಿಪ್ಟಿನವರನ್ನು ಹೊಡೆಯುವರು; ಗಾಯಮಾಡಿ ಸ್ವಸ್ಥ ಮಾಡುವರು. ಅವರು ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು, ದೇವರು ಅವರನ್ನು ಆಲೈಸಿ ಸ್ವಸ್ಥ ಮಾಡುವರು.

23ಆ ದಿವಸದಲ್ಲಿ ಈಜಿಪ್ಟಿನಿಂದ ಅಸ್ಸೀರಿಯಕ್ಕೆ ಹೋಗುವ ಒಂದು ರಾಜ ಮಾರ್ಗವಿರುವುದು. ಅಸ್ಸೀರಿಯದವರು ಈಜಿಪ್ಟಿಗೂ, ಈಜಿಪ್ಟಿನವರು ಅಸ್ಸೀರಿಯಕ್ಕೂ ಹೋಗಿ ಬರುವರು. ಈಜಿಪ್ಟಿನವರು, ಅಸ್ಸೀರಿಯರೊಂದಿಗೆ ಯೆಹೋವ ದೇವರನ್ನು ಆರಾಧಿಸುವರು.

24ಆ ದಿನದಲ್ಲಿ ಇಸ್ರಾಯೇಲು ಈಜಿಪ್ಟಿನವರ ಮತ್ತು ಅಸ್ಸೀರಿಯದವರ ಸಂಗಡ ಮೂರನೆಯದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವುದು.

25ನನ್ನ ಪ್ರಜೆಯಾದ ಈಜಿಪ್ಟಿಗೂ, ನನ್ನ ಕೈಕೆಲಸವಾದ ಅಸ್ಸೀರಿಯಕ್ಕೂ ಮತ್ತು ನನ್ನ ಸೊತ್ತಾದ ಇಸ್ರಾಯೇಲಿಗೂ, “ನಿಮಗೆ ಆಶೀರ್ವಾದ,” ಎಂದು ಸೇನಾಧೀಶ್ವರ ಯೆಹೋವ ದೇವರು ಅವುಗಳನ್ನು ಆಶೀರ್ವಾದ ಮಾಡುವರು.

← ಯೆಶಾಯ 18 ಯೆಶಾಯ ಯೆಶಾಯ 20 →

ಯೆಶಾಯ 19 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019