We Believe JesusFé, Esperança e Nova Vida

ಆದಿಕಾಂಡ 36

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಆದಿಕಾಂಡ 35 ಆದಿಕಾಂಡ ಆದಿಕಾಂಡ 37 →

1ಎದೋಮ್ ಎಂಬ ಏಸಾವನ ವಂಶಾವಳಿ ಇದು:

2ಏಸಾವನು ಕಾನಾನ್ಯರ ಪುತ್ರಿಯರನ್ನು ಅಂದರೆ, ಹಿತ್ತಿಯನಾದ ಏಲೋನನ ಮಗಳಾದ ಆದಾ, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿದ್ದ ಒಹೊಲೀಬಾಮ,

3ಇಷ್ಮಾಯೇಲನ ಮಗಳೂ ನೆಬಾಯೋತನ ಸಹೋದರಿಯೂ ಆಗಿದ್ದ ಬಾಸೆಮತ್ ಇವರನ್ನು ಮದುವೆಯಾಗಿದ್ದನು.

4ಆದಾಳು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಯೂವೇಲನನ್ನು ಹೆತ್ತಳು.

5ಒಹೊಲೀಬಾಮಳು ಯೆಯೂಷನನ್ನು, ಯಳಾಮನನ್ನು, ಕೋರಹ ಇವರನ್ನು ಹೆತ್ತಳು. ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಪುತ್ರರು.

6ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಪುತ್ರಪುತ್ರಿಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು, ತನ್ನ ಸಹೋದರನಾದ ಯಾಕೋಬನ ಬಳಿಯಿಂದ ಸ್ವಲ್ಪ ದೂರವಿದ್ದ ಮತ್ತೊಂದು ಊರಿಗೆ ಹೋದನು.

7ಏಕೆಂದರೆ ಅವರ ಸಂಪತ್ತು ಅವರು ಕೂಡಿ ಇರುವುದಕ್ಕೆ ಆಗದಷ್ಟು ಅಭಿವೃದ್ಧಿಯಾಗಿತ್ತು. ಅವರ ಪಶುಪ್ರಾಣಿಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.

8ಹೀಗೆ ಎದೋಮನು ಎಂಬ ಏಸಾವನು ಸೇಯೀರ್ ಪರ್ವತದಲ್ಲಿ ವಾಸವಾಗಿದ್ದನು.

9ಸೇಯೀರ್ ಪರ್ವತದಲ್ಲಿರುವ ಎದೋಮ್ಯರ ತಂದೆ ಏಸಾವನ ವಂಶಾವಳಿಗಳು ಇವೇ:

10ಏಸಾವನ ಪುತ್ರರ ಹೆಸರುಗಳು ಯಾವುವೆಂದರೆ:

11ಎಲೀಫಜನ ಮಕ್ಕಳು ಯಾರೆಂದರೆ:

12ತಿಮ್ನಾಳು ಏಸಾವನ ಮಗ ಎಲೀಫಜನಿಗೆ ಉಪಪತ್ನಿಯಾಗಿದ್ದು, ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾ ಎಂಬಾಕೆಯ ಪುತ್ರರು ಇವರೇ.

13ರೆಯೂವೇಲನ ಮಕ್ಕಳು ಯಾರೆಂದರೆ:

14ಏಸಾವನ ಹೆಂಡತಿಯಾಗಿದ್ದ ಸಿಬೆಯೋನನ ಮಗಳಾಗಿರುವ ಅನಾಹಳ ಮಗಳಾದ ಒಹೊಲೀಬಾಮಳ ಪುತ್ರರು ಯಾರೆಂದರೆ: ಆಕೆಯು ಏಸಾವನಿಗೆ

15ಏಸಾವನ ಪುತ್ರರ ಮುಖಂಡರು ಯಾರೆಂದರೆ:

16ಕೋರಹ, ಗತಾಮ್, ಅಮಾಲೇಕ್, ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾ ಎಂಬಾಕೆಯ ಮೊಮ್ಮಕ್ಕಳು.

17ಏಸಾವನ ಮಗ ರೆಯೂವೇಲನ ಪುತ್ರರು ಯಾರೆಂದರೆ:

18ಏಸಾವನ ಹೆಂಡತಿ ಒಹೊಲೀಬಾಮಳ ಪುತ್ರರು ಯಾರೆಂದರೆ:

19ಇವರು ಎದೋಮ್ ಎಂಬ ಏಸಾವನ ಪುತ್ರರು. ಇವರು ಮುಖಂಡರಾಗಿದ್ದರು.

20ದೇಶದಲ್ಲಿ ವಾಸಿಸುತ್ತಿದ್ದ ಹೋರಿಯನಾದ ಸೇಯೀರನ ಪುತ್ರರು ಯಾರೆಂದರೆ:

21ದೀಶೋನ್, ಏಚೆರ್, ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯೀರನ ಮಕ್ಕಳಾದ ಹೋರಿಯರ ಮುಖಂಡರು.

22ಲೋಟಾನನ ಪುತ್ರರು ಯಾರೆಂದರೆ:

23ಶೋಬಾಲನ ಮಕ್ಕಳು ಯಾರೆಂದರೆ:

24ಸಿಬೆಯೋನನ ಮಕ್ಕಳು:

25ಅನಾಹನ ಮಕ್ಕಳು ಯಾರೆಂದರೆ:

26ದೀಶೋನನ ಮಕ್ಕಳು ಯಾರೆಂದರೆ:

27ಏಚೆರನ ಮಕ್ಕಳು ಯಾರೆಂದರೆ:

28ದೀಶಾನನ ಮಕ್ಕಳು ಯಾರೆಂದರೆ:

29ಹೋರಿಯರಿಂದ ಬಂದ ಮುಖಂಡರು ಯಾರೆಂದರೆ:

30ದೀಶೋನ್, ಏಚೆರ್, ದೀಶಾನ್.

31ಇಸ್ರಾಯೇಲರನ್ನು ಯಾವ ಅರಸನೂ ಆಳುವುದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.

32ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು. ಅವನ ಪಟ್ಟಣದ ಹೆಸರು ದಿನ್ಹಾಬಾ.

33ಬೆಲಗನ ಮರಣದ ನಂತರ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗ ಯೋಬಾಬನು ಉತ್ತರಾಧಿಕಾರಿಯಾದನು.

34ಯೋಬಾಬನ ಮರಣದ ನಂತರ ಅವನ ಬದಲಾಗಿ ತೇಮಾನೀಯರ ದೇಶದ ಹುಷಾಮನು ಅರಸನಾದನು.

35ಹುಷಾಮನ ಮರಣದ ನಂತರ ಅವೀತದ ಬೆದದನ ಮಗ ಹದದ ಅರಸನಾದನು. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್.

36ಹದದ ಮೃತನಾದ ಮೇಲೆ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಅರಸನಾದನು.

37ಸಮ್ಲಾಹನ ಮರಣದ ನಂತರ ಅವನ ಬದಲಾಗಿ ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.

38ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ ಹಾನಾನ್ ಅರಸನಾದನು.

39ಅಕ್ಬೋರನ ಮಗ ಬಾಳ್ ಹಾನಾನನು ಮೃತನಾದ ಮೇಲೆ ಅವನ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾವು. ಅವನ ಹೆಂಡತಿಯ ಹೆಸರು ಮೆಹೇಟಬೇಲ್. ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.

40ಕುಟುಂಬ, ಸ್ಥಳ, ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವುವೆಂದರೆ:

41ಒಹೊಲೀಬಾಮ, ಏಲಾ, ಪೀನೋನ್,

42ಕೆನಜ್, ತೇಮಾನ್, ಮಿಬ್ಜಾರ,

43ಮಗ್ದೀಯೇಲ್ ಮತ್ತು ಗೀರಾಮ್

← ಆದಿಕಾಂಡ 35 ಆದಿಕಾಂಡ ಆದಿಕಾಂಡ 37 →

ಆದಿಕಾಂಡ 36 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019