We Believe JesusFé, Esperança e Nova Vida

ಆದಿಕಾಂಡ 10

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಆದಿಕಾಂಡ 9 ಆದಿಕಾಂಡ ಆದಿಕಾಂಡ 11 →

1ನೋಹನ ಪುತ್ರರಾದ ಶೇಮ್, ಹಾಮ್, ಯೆಫೆತರಿಗೆ ಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು. ಅವರ ವಂಶಾವಳಿ ಇದು:

2ಯೆಫೆತನ ಪುತ್ರರು:

3ಗೋಮೆರನ ಪುತ್ರರು:

4ಯಾವಾನನ ಮಕ್ಕಳು:

5ಇವರಿಂದ ಕಡಲತೀರದ ಹಾಗೂ ದ್ವೀಪಗಳ ನಿವಾಸಿಯರು ತಮ್ಮ ಸ್ವಂತ ದೇಶ, ಭಾಷೆ, ಕುಲ ಜನಾಂಗಗಳ ಪ್ರಕಾರ ಹರಡುತ್ತಿದ್ದರು.

6ಹಾಮನ ಪುತ್ರರು:

7ಕೂಷನ ಪುತ್ರರು:

8ಕೂಷನು ನಿಮ್ರೋದನ ತಂದೆಯಾಗಿದ್ದನು, ಇವನು ಭೂಮಿಯ ಮೇಲೆ ಬಲಿಷ್ಠ ಯುದ್ಧವೀರನಾದನು.

9ಅವನು ಯೆಹೋವ ದೇವರ ಮುಂದೆ ಬಲಿಷ್ಠ ಬೇಟೆಗಾರನಾದನು. ಆದ್ದರಿಂದ, “ನಿಮ್ರೋದನಂತೆ ಯೆಹೋವ ದೇವರ ಮುಂದೆ ಬಲಿಷ್ಠ ಬೇಟೆಗಾರ” ಎಂಬ ಹೇಳಿಕೆ ಇಂದಿಗೂ ಇದೆ.

10ಶಿನಾರ್ ದೇಶದಲ್ಲಿರುವ ಬಾಬಿಲೋನ್, ಯೆರೆಕ್, ಅಕ್ಕದ್, ಕಲ್ನೇ ಎಂಬವು ಅವನ ರಾಜ್ಯದ ಪ್ರಾರಂಭದ ಕೇಂದ್ರಗಳು.

11ಆ ದೇಶದಿಂದ ಅವನು ಅಸ್ಸೀರಿಯಕ್ಕೆ ಹೋಗಿ ನಿನೆವೆ, ರೆಹೋಬೋತೀರ್, ಕೆಲಹ ಪಟ್ಟಣಗಳನ್ನೂ

12ಮತ್ತು ನಿನೆವೆ ಹಾಗೂ ಕೆಲಹ ಮಧ್ಯದಲ್ಲಿರುವ ರೆಸೆನ್ ಮಹಾಪಟ್ಟಣವನ್ನು ಕಟ್ಟಿಸಿದನು.

13ಈಜಿಪ್ಟನವರಿಂದ

14ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದವರು,

15ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್;

16ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು

17ಹಿವ್ವಿಯರು, ಅರ್ಕಿಯರು, ಸೀನಿಯರು,

18ಅರ್ವಾದಿಯರು, ಚೆಮಾರಿಯರು, ಹಮಾತಿಯರು, ಕಾನಾನನಿಂದ ಹುಟ್ಟಿದರು.

19ಕಾನಾನ್ಯರ ಮೇರೆಯು ಸೀದೋನ್ ಪಟ್ಟಣದಿಂದ ಗೆರಾರಿನ ಮಾರ್ಗವಾಗಿ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳ ಮಾರ್ಗವಾಗಿ ಲೆಷಾ ಊರಿನವರೆಗೂ ಇರುತ್ತದೆ.

20ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ, ತಮ್ಮ ಸೀಮೆ ಹಾಗು ದೇಶಗಳಲ್ಲಿಯೂ ಇರುವ ಹಾಮನ ಪುತ್ರರು.

21ಯೆಫೆತನ ಹಿರಿಯ ಸಹೋದರನೂ ಏಬೆರನ ಮಕ್ಕಳ ಮೂಲಪುರುಷನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು.

22ಶೇಮನ ಪುತ್ರರು:

23ಅರಾಮನ ಪುತ್ರರು:

24ಅರ್ಪಕ್ಷದ್ ಶೆಲಹನ ತಂದೆ;

25ಏಬೆರನಿಗೆ ಇಬ್ಬರು ಪುತ್ರರು ಹುಟ್ಟಿದರು.

26ಯೊಕ್ತಾನನ ಸಂತಾನದವರು:

27ಹದೋರಾಮ್, ಊಜಾಲ್, ದಿಕ್ಲಾ,

28ಓಬಾಲ್, ಅಬೀಮಯೇಲ್, ಶೆಬಾ,

29ಓಫೀರ್, ಹವೀಲಾ ಹಾಗೂ ಯೋಬಾಬ್ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಪುತ್ರರು.

30ಅವರ ನಿವಾಸವು ಮೇಶಾ ನಾಡು ಮೊದಲುಗೊಂಡು ಪೂರ್ವದಿಕ್ಕಿನ ಸೆಫಾರ್ ಎಂಬ ಬೆಟ್ಟದವರೆಗೂ ಹರಡಿತ್ತು.

31ಇವರೇ ತಮ್ಮ ಕುಟುಂಬಗಳ, ತಮ್ಮ ಭಾಷೆಗಳ ಪ್ರಕಾರ, ತಮ್ಮ ದೇಶಗಳಲ್ಲಿ, ತಮ್ಮ ಜನಾಂಗಗಳ ಪ್ರಕಾರ ಶೇಮನ ಪುತ್ರರು.

32ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರವಾಗಿ ನೋಹನ ಪುತ್ರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ಹರಡಿಕೊಂಡವು.

← ಆದಿಕಾಂಡ 9 ಆದಿಕಾಂಡ ಆದಿಕಾಂಡ 11 →

ಆದಿಕಾಂಡ 10 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019