We Believe JesusFé, Esperança e Nova Vida

ಎಜ್ರ 2

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಎಜ್ರ 1 ಎಜ್ರ ಎಜ್ರ 3 →

1ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ, ಬಾಬಿಲೋನಿಗೆ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ

2ಜೆರುಬ್ಬಾಬೆಲನ ಸಂಗಡ ಹಿಂದಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಸೆರಾಯ, ರೆಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಹಾಗೂ ಬಾಣ.

3ಪರೋಷನ ವಂಶಜರು 2,172

4ಶೆಫಟ್ಯನ ವಂಶಜರು 372

5ಆರಹನ ವಂಶಜರು 775

6ಯೇಷೂವ, ಯೋವಾಬ್ ಎಂಬವರ ಮಕ್ಕಳಲ್ಲಿ ಪಹತ್ ಮೋವಾಬನ ವಂಶಜರು 2,812

7ಏಲಾಮನ ವಂಶಜರು 1,254

8ಜತ್ತೂವಿನ ವಂಶಜರು 945

9ಜಕ್ಕೈನ ವಂಶಜರು 760

10ಬಾನೀಯ ವಂಶಜರು 642

11ಬೇಬೈನ ವಂಶಜರು 623

12ಅಜ್ಗಾದನ ವಂಶಜರು 1,222

13ಅದೋನೀಕಾಮಿನ ವಂಶಜರು 666

14ಬಿಗ್ವೈ ವಂಶಜರು 2,056

15ಅದೀನನ ವಂಶಜರು 454

16ಹಿಜ್ಕೀಯನ ಮಗನಾದ ಆಟೇರ್ ವಂಶಜರು 98

17ಬೇಚೈಯ ವಂಶಜರು 323

18ಯೋರನ ವಂಶಜರು 112

19ಹಾಷುಮನ ವಂಶಜರು 223

20ಗಿಬ್ಬಾರನ ವಂಶಜರು 95

21ಬೇತ್ಲೆಹೇಮನ ವಂಶಜರು 123

22ನೆಟೋಫದ ಜನರು 56

23ಅನಾತೋತ್ ಊರಿನವರು 128

24ಅಜ್ಮಾವೆತಿನವರು 42

25ಕಿರ್ಯತ್ ಯಾರೀಮ್, ಕೆಫೀರಾ, ಬೇರೋತ್ ಎಂಬ ಪಟ್ಟಣದವರು 743

26ರಾಮಾ ಗೆಬ ಎಂಬ ಪಟ್ಟಣದವರು 621

27ಮಿಕ್ಮಾಷದ ಜನರು 122

28ಬೇತೇಲ್ ಮತ್ತು ಆಯಿ ಎಂಬ ಪಟ್ಟಣದವರು 223

29ನೆಬೋ ಊರಿನವರು 52

30ಮಗ್ಬೀಷನ ಜನರು 156

31ಮತ್ತೊಬ್ಬ ಏಲಾಮನ ವಂಶಜರು 1,254

32ಹಾರಿಮನ ವಂಶಜರು 320

33ಲೋದ್, ಹಾದೀದ್, ಓನೋ ಎಂಬ ಊರಿನ ಜನರು 725

34ಯೆರಿಕೋವಿನ ವಂಶಜರು 345

35ಸೆನಾಹನ ವಂಶಜರು 3,630.

36ಯಾಜಕರು:

37ಇಮ್ಮೇರನ ವಂಶಜರು 1,052

38ಪಷ್ಹೂರನ ವಂಶಜರು 1,247

39ಹಾರಿಮನ ವಂಶಜರು 1,017.

40ಲೇವಿಯರು: ಹೋದವ್ಯನ ಸಂತತಿಯಾದ ಯೇಷೂವನ, ಕದ್ಮಿಯೇಲನ ವಂಶಜರು 74.

41ಹಾಡುಗಾರರು: ಆಸಾಫನ ವಂಶಜರು 128.

42ದೇವಾಲಯದ ದ್ವಾರಪಾಲಕರಾದ ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ ಮುಂತಾದವರ ಮಕ್ಕಳು ಒಟ್ಟು 139.

43ದೇವಾಲಯದ ಸೇವಕರು: ಜೀಹ, ಹಸೂಫ, ಟಬ್ಬಾವೋತ್ ಇವರ ವಂಶಜರು.

44ಕೆರೋಸ್, ಸೀಯಹಾ, ಪದೋನ್,

45ಲೆಬಾನ, ಹಗಾಬ, ಅಕ್ಕೂಬ್

46ಹಗಾಬ್, ಶಲ್ಮೈ, ಹಾನಾನ್,

47ಗಿದ್ದೇಲ್, ಗಹರ್, ರೆವಾಯ,

48ರೆಚೀನ್, ನೆಕೋದ, ಗಜ್ಜಾಮ್,

49ಉಜ್ಜ, ಪಾಸೇಹ, ಬೇಸೈ,

50ಅಸ್ನ, ಮೆಯನೀಮ್, ನೆಫೀಸೀಮ್,

51ಬಕ್ಬೂಕ್, ಹಕ್ಕೂಫ, ಹರ್ಹೂರ್,

52ಬಚ್ಲೂತ್, ಮೆಹೀದ, ಹರ್ಷ,

53ಬರ್ಕೋಸ್, ಸೀಸೆರ, ತೆಮಹ,

54ನೆಚೀಹ, ಹಟೀಫ, ಇವರ ವಂಶಜರು.

55ಸೊಲೊಮೋನನ ಸೇವಕರ ವಂಶಜರು: ಸೋಟೈ, ಹಸ್ಸೋಫೆರೆತ್, ಪೆರೂದ,

56ಯಾಲ, ದರ್ಕೋನ್, ಗಿದ್ದೇಲ್,

57ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಮತ್ತು ಆಮೀ ಇವರ ವಂಶಜರು.

58ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ.

59ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಹೊರಟುಬಂದವರಾಗಿದ್ದು, ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ, ತಾವು ಇಸ್ರಾಯೇಲರೆಂಬುದನ್ನು ರುಜುಪಡಿಸಲಾಗದೇ ಇದ್ದವರು ಯಾರೆಂದರೆ:

60ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು ಒಟ್ಟು 652 ಮಂದಿ.

61ಯಾಜಕರಲ್ಲಿ:

62ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು.

63ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು.

64ಹೀಗೆ ಹಿಂದಿರುಗಿ ಬಂದು, ಸಭೆ ಸೇರಿದ ಸರ್ವಸಮೂಹದ ಒಟ್ಟು ಸಂಖ್ಯೆ 42,360.

65ಅವರ ಹೊರತಾಗಿ ಅವರ ದಾಸರೂ, ದಾಸಿಯರೂ 7,337 ಮಂದಿಯೂ, ಅವರ ಹಾಡುಗಾರರೂ, ಹಾಡುಗಾರ್ತಿಯರೂ 200 ಮಂದಿ ಇದ್ದರು.

66ಅವರ 736 ಕುದುರೆಗಳು, ಅವರ 245 ಹೇಸರಕತ್ತೆಗಳು,

67ಅವರ 435 ಒಂಟೆಗಳು, ಅವರ ಒಟ್ಟು 6,720 ಕತ್ತೆಗಳು.

68ಅವರು ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದ ತರುವಾಯ, ಕುಟುಂಬಗಳ ಕೆಲವು ಮುಖ್ಯಸ್ಥರು ದೇವರ ಆಲಯವನ್ನು ಅದರ ಸ್ಥಳದಲ್ಲಿ ಕಟ್ಟುವುದಕ್ಕೆ ಉಚಿತವಾದ ಕಾಣಿಕೆಗಳನ್ನು ಕೊಟ್ಟರು.

69ಅವರು ತಮ್ಮ ಶಕ್ತಿಗೆ ತಕ್ಕ ಹಾಗೆ ಕೆಲಸಕ್ಕಾಗಿ ಬೊಕ್ಕಸಕ್ಕೆ 400 ಕಿಲೋಗ್ರಾಂ ಬಂಗಾರವನ್ನೂ, 2,800 ಕಿಲೋಗ್ರಾಂ ಬೆಳ್ಳಿಯನ್ನೂ, ನೂರು ಯಾಜಕರ ಅಂಗಿಗಳನ್ನೂ ಕೊಟ್ಟರು.

70ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಉಳಿದ ಇಸ್ರಾಯೇಲರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು.

← ಎಜ್ರ 1 ಎಜ್ರ ಎಜ್ರ 3 →

ಎಜ್ರ 2 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019