1ಇದಾದನಂತರ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೂತನು ಪರಲೋಕದಿಂದ ಕೆಳಗೆ ಇಳಿದು ಬರುವುದನ್ನು ಕಂಡೆನು. ಅವನ ತೇಜಸ್ಸಿನಿಂದ ಭೂಮಿಯು ಬೆಳಗಿತು.
2ಅವನು ಮಹಾಧ್ವನಿಯಿಂದ:
3ಏಕೆಂದರೆ ಎಲ್ಲಾ ದೇಶಗಳೂ
4ಅನಂತರ ಪರಲೋಕದಿಂದ ಇನ್ನೊಂದು ಧ್ವನಿಯು:
5ಏಕೆಂದರೆ ಆಕೆಯ ಪಾಪಗಳು ಒಂದಕ್ಕೊಂದು ಸೇರಿ ಆಕಾಶದಷ್ಟಾಗಿವೆ.
6ಆಕೆಯು ನಿಮಗೆ ಕೊಟ್ಟಿದ್ದಕ್ಕೆ ಸರಿಯಾಗಿ ಹಿಂದಕ್ಕೆ ಕೊಡಿರಿ.
7ಆಕೆಯು ಯಾವುದರಿಂದ ತನ್ನನ್ನು ಘನಪಡಿಸಿಕೊಂಡು ಭೋಗಿನಿಯಾಗಿದ್ದಳೋ ಅದಕ್ಕೆ
8ಆದ್ದರಿಂದ ಒಂದೇ ದಿನದಲ್ಲಿ ಆಕೆಯ ಉಪದ್ರವಗಳಾಗಿರುವ
9“ಆಕೆಯೊಂದಿಗೆ ಜಾರತ್ವ ಮಾಡಿರುವ ಭೂರಾಜರು, ಆಕೆಯ ದಹನದಿಂದ ಏರುವ ಹೊಗೆಯನ್ನು ಕಂಡಾಗೆಲ್ಲಾ ಆಕೆಗಾಗಿ ಅಳುತ್ತಾ ಗೋಳಾಡುವರು.
10ಆಕೆಯ ಯಾತನೆಯ ದೆಸೆಯಿಂದ ಹೆದರಿ, ದೂರದಲ್ಲಿ ನಿಂತು:
11“ಭೂಮಿಯ ವರ್ತಕರು ಆಕೆಗಾಗಿ ದುಃಖಿಸಿ ಗೋಳಾಡುತ್ತಾ ತಮ್ಮ ಸರಕು ಸಾಮಗ್ರಿಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ದುಃಖಿಸುವರು.
12ಅವರ ಸರಕುಗಳಾದ ಚಿನ್ನ, ಬೆಳ್ಳಿ, ಬೆಲೆಬಾಳುವ ಕಲ್ಲು ಹಾಗೂ ಮುತ್ತುಗಳು, ನಯವಾದ ನಾರುಮಡಿ, ಕಡುಗೆಂಪು ವಸ್ತ್ರ, ರೇಷ್ಮೆ, ಊದಾವರ್ಣದ ವಸ್ತ್ರ, ಅಗಿಲು ಮರ ಮತ್ತು ದಂತ ಪಾತ್ರೆಗಳು, ಬೆಲೆಬಾಳುವ ಮರ, ತಾಮ್ರ, ಕಬ್ಬಿಣ ಮತ್ತು ಚಂದ್ರಕಾಂತ ಶಿಲೆ,
13ಸರಕುಗಳಾದ ದಾಲ್ಚಿನ್ನಿ ಮತ್ತು ಮಸಾಲೆ, ಧೂಪ, ಸುಗಂಧ ತೈಲ, ರಕ್ತಬೋಳ, ದ್ರಾಕ್ಷಾರಸ ಮತ್ತು ಓಲಿವ್ ಎಣ್ಣೆ, ನಯವಾದ ಹಿಟ್ಟು, ಗೋಧಿ, ದನಕರು ಮತ್ತು ಕುರಿಗಳು, ಕುದುರೆಗಳು, ವಾಹನಗಳು, ಗುಲಾಮರು ಹಾಗೂ ಮನುಷ್ಯರು ಇವುಗಳನ್ನೆಲ್ಲಾ ಆ ವರ್ತಕರು ಅವಳಿಗೆ ಮಾರುತ್ತಿದ್ದರು.
14“ನೀನು ಬಯಸಿದ ನಿನ್ನ ಪ್ರಾಣ ಫಲವು ನಿನ್ನಿಂದ ತೊಲಗಿಹೋಗಿದೆ. ನಿನ್ನ ಎಲ್ಲಾ ವೈಭವವು ಹಾಗೂ ನಿನ್ನ ಶೋಭೆಯ ಸೊಗಸುಗಳೆಲ್ಲಾ ನಿನ್ನಿಂದ ನಾಶವಾದವು. ಅವರು ಅವುಗಳನ್ನು ಇನ್ನೆಂದೂ ಕಾಣಲಾರರು.
15ಆಕೆಯಿಂದ ಸಿರಿವಂತರಾದ ಆ ಸರಕುಗಳ ವರ್ತಕರು ದೂರದಲ್ಲಿ ನಿಂತು ಆಕೆಯ ಯಾತನೆಯ ದೆಸೆಯಿಂದ ಭಯಪಟ್ಟು, ದುಃಖಿಸಿ,
16“ ‘ಅಯ್ಯೋ! ಅಯ್ಯೋ! ಶೋಕಭರಿತ ಮಹಾನಗರಿಯೇ,
17ಒಂದೇ ತಾಸಿನಲ್ಲಿ ಅಂಥ ಮಹಾ ಐಶ್ವರ್ಯವು ನಾಶವಾಗಿ ಹೋಯಿತಲ್ಲಾ?’ ”
18ಆಕೆಯ ದಹನದ ಹೊಗೆಯನ್ನು ನೋಡಿ, ‘ಈ ಮಹಾಪಟ್ಟಣಕ್ಕೆ ಸಮಾನವಾದದ್ದು ಯಾವುದು?’ ಎಂದು ಕೂಗುವರು.
19ಆಗ ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು ಅಳುತ್ತಾ ದುಃಖಿಸುತ್ತಾ ಹೀಗೆ ಕೂಗುವರು:
20“ಪರಲೋಕವೇ ಸಂಭ್ರಮಿಸಿರಿ,
21ಅನಂತರ ಒಬ್ಬ ಬಲಿಷ್ಠನಾದ ದೂತನು, ಬೀಸುವ ಕಲ್ಲಿನಷ್ಟಿರುವ ದೊಡ್ಡ ಕಲ್ಲೊಂದನ್ನು ತೆಗೆದುಕೊಂಡು ಅದನ್ನು ಸಮುದ್ರದೊಳಗೆ ಬಿಸಾಡಿ:
22ಬಾಬಿಲೋನೇ, ನಿನ್ನಲ್ಲಿ ಮತ್ತೆ ತಂತಿವಾದ್ಯ ನುಡಿಸುವವರು,
23ದೀಪದ ಬೆಳಕು
24ಆಕೆಯಲ್ಲಿ ಪ್ರವಾದಿಗಳ ಮತ್ತು ಪರಿಶುದ್ಧರ ರಕ್ತವೂ