1ಯೆಹೋವ ದೇವರು ದಾವೀದನನ್ನು ಅವನ ಎಲ್ಲಾ ಶತ್ರುಗಳಿಂದಲೂ, ಸೌಲನ ಕೈಯಿಂದಲೂ ತಪ್ಪಿಸಿಕೊಂಡಾಗ ಯೆಹೋವ ದೇವರಿಗೆ ಈ ಪದ್ಯವನ್ನು ಹಾಡಿದ್ದು.
2ಅವನು ಹೇಳಿದನು:
3ನನ್ನ ಬಂಡೆಯಾದ ದೇವರಲ್ಲಿ, ನಾನು ಭರವಸವಿಡುವೆನು;
4“ಸ್ತುತಿ ಪಾತ್ರರಾಗಿರುವ ಯೆಹೋವ ದೇವರನ್ನು ನಾನು ಮೊರೆಯಿಟ್ಟದ್ದರಿಂದ,
5ಮರಣದಲೆಗಳು ನನ್ನನ್ನು ಆವರಿಸಿಕೊಂಡವು.
6ಪಾತಾಳದ ಪಾಶಗಳು ನನ್ನನ್ನು ಸುತ್ತಿಕೊಂಡವು;
7“ನನ್ನ ಇಕ್ಕಟ್ಟಿನಲ್ಲಿ ಯೆಹೋವ ದೇವರನ್ನು ಕರೆದೆನು;
8ಆಗ ದೇವರು ಬೇಸರಗೊಂಡಿದ್ದರಿಂದ
9ಮೂಗಿನಿಂದ ಹೊಗೆ ಬಂದಂತೆಯೂ,
10ದೇವರು ಆಕಾಶಗಳನ್ನು ಬಾಗಿಸಿ ಕೆಳಗಿಳಿದು ಬಂದರು;
11ಅವರು ಕೆರೂಬಿಯ ಮೇಲೆ ಕೂತು ಹಾರಿದರು,
12ಕತ್ತಲನ್ನೂ, ಮಳೆ ತರುವ ಆಕಾಶದ ಕಾರ್ಮೋಡಗಳನ್ನೂ
13ಅವರ ಸನ್ನಿಧಿಯ ಪ್ರಕಾಶದಿಂದ
14ಯೆಹೋವ ದೇವರು ಆಕಾಶಗಳಲ್ಲಿ ಗುಡುಗಿದರು.
15ಅವರು ತಮ್ಮ ಬಾಣಗಳನ್ನು ಎಸೆದು ವೈರಿಗಳನ್ನು ಚದರಿಸಿದರು,
16ಆಗ ಯೆಹೋವ ದೇವರ ಗದರಿಕೆಯಿಂದಲೂ,
17“ಅವರು ಮೇಲಿನಿಂದ ಕೈಚಾಚಿ ನನ್ನನ್ನು ಹಿಡಿದು,
18ಅವರು ನನಗಿಂತ ಶಕ್ತಿಶಾಲಿಯಾದ ಶತ್ರುಗಳಿಂದ,
19ನನ್ನ ಆಪತ್ತಿನ ದಿನದಲ್ಲಿ ನನ್ನನ್ನು ಆ ಶತ್ರುಗಳು ದಾಳಿಮಾಡಿದರು;
20ಅವರು ನನ್ನನ್ನು ಹೊರಗೆ ವಿಶಾಲ ಸ್ಥಳಕ್ಕೆ ತಂದರು;
21“ಯೆಹೋವ ದೇವರು ನನ್ನ ನೀತಿಯ ಪ್ರಕಾರ ನನ್ನೊಂದಿಗೆ ವ್ಯವಹರಿಸಿದರು;
22ಏಕೆಂದರೆ ನಾನು ಯೆಹೋವ ದೇವರ ಮಾರ್ಗಗಳನ್ನು ಅನುಸರಿಸಿದ್ದೇನೆ,
23ಅವರ ಆಜ್ಞೆಗಳೆಲ್ಲಾ ನನ್ನ ಮುಂದೆ ಇಟ್ಟುಕೊಂಡೆನು;
24ನಾನು ಅವರ ದೃಷ್ಟಿಯಲ್ಲಿ ನಿರ್ದೋಷಿಯು,
25ಆದ್ದರಿಂದ ಯೆಹೋವ ದೇವರು ನನ್ನ ನೀತಿಯ ಪ್ರಕಾರವೂ,
26“ದಯವಂತರಿಗೆ ನೀವು ನಿಮ್ಮನ್ನು ದಯವಂತರಾಗಿ ತೋರಿಸುತ್ತೀರಿ;
27ಶುದ್ಧರಿಗೆ ನೀವು ಶುದ್ಧರಾಗಿ ತೋರಿಸುತ್ತೀರಿ,
28ದೀನರನ್ನು ರಕ್ಷಿಸುತ್ತೀರಿ;
29ಯೆಹೋವ ದೇವರೇ, ನನ್ನ ದೀಪವು ನೀವೇ;
30ನಿಮ್ಮ ಸಹಾಯದಿಂದ ವೈರಿಸೇನೆಯ ವಿರುದ್ಧ ಹೋಗುವೆನು.
31“ದೇವರ ಮಾರ್ಗವು ಪರಿಪೂರ್ಣವಾದದ್ದು;
32ಏಕೆಂದರೆ ಯೆಹೋವ ದೇವರಲ್ಲದೆ ಬೇರೆ ದೇವರು ಯಾರು?
33ಬಲದಿಂದ ನನಗೆ ಆಯುಧವನ್ನು ಧರಿಸುವಂತೆ ಮಾಡಿ;
34ನನ್ನ ಕಾಲುಗಳನ್ನು ಜಿಂಕೆಗಳ ಕಾಲುಗಳಂತೆ ಚುರುಕು ಮಾಡಿ,
35ಅವರು ಯುದ್ಧಕ್ಕಾಗಿ ನನ್ನ ಕೈಗಳಿಗೆ ತರಬೇತುಕೊಟ್ಟು.
36ನಿಮ್ಮ ರಕ್ಷಣೆಯ ಸಹಾಯವನ್ನು ನನಗೆ ಗುರಾಣಿಯನ್ನಾಗಿ ಮಾಡಿದ್ದೀರಿ,
37ನೀವು ನನ್ನ ಕಾಲಡಿಗಳಿಗೆ ವಿಶಾಲಸ್ಥಳ ಒದಗಿಸಿದ್ದೀರಿ,
38“ನನ್ನ ಶತ್ರುಗಳನ್ನು ಹಿಂದಟ್ಟಿ ಅವರನ್ನು ನಾಶಮಾಡಿದೆನು.
39ಏಳಲಾರದಂತೆ ಅವರನ್ನು ಸಂಪೂರ್ಣವಾಗಿ ತುಳಿದುಬಿಟ್ಟೆನು;
40ನೀವು ಯುದ್ಧಕ್ಕಾಗಿ ನನಗೆ ಬಲವನ್ನು ಆಯುಧವನ್ನಾಗಿ ನೀಡಿ;
41ನನ್ನ ಶತ್ರುಗಳು ನನಗೆ ಬೆನ್ನುಮಾಡಿ ಓಡಿಹೋಗುವಂತೆ ಮಾಡಿದಿರಿ;
42ಅವರು ಸಹಾಯಕ್ಕಾಗಿ ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇರಲಿಲ್ಲ;
43ನಾನು ಅವರನ್ನು ನೆಲದ ಧೂಳಿನಂತೆ ಪುಡಿಪುಡಿ ಮಾಡಿದೆನು;
44“ನೀವು ನನ್ನ ಜನರ ಒಳಕಲಹದಿಂದ ನನ್ನನ್ನು ತಪ್ಪಿಸಿದ್ದೀರಿ,
45ವಿದೇಶಿಯರು ನನಗೆ ಅಧೀನರಾದರು;
46ಅವರು ಭಯಗೊಳ್ಳುವರು;
47“ಯೆಹೋವ ದೇವರು ಜೀವಿಸುವ ದೇವರು! ನನ್ನ ಆಶ್ರಯವಾಗಿರುವ ದೇವರಿಗೆ ಸ್ತೋತ್ರ.
48ದೇವರೇ ನನಗೋಸ್ಕರ ಮುಯ್ಯಿಗೆ ಮುಯ್ಯಿ ತೀರಿಸುವವರೂ
49ಅವರು ನನ್ನ ಶತ್ರುಗಳಿಂದ ನನ್ನನ್ನು ಬಿಡಿಸುತ್ತಾರೆ.
50ಆದ್ದರಿಂದ ಯೆಹೋವ ದೇವರೇ, ನಾನು ಜನಾಂಗಗಳಲ್ಲಿ ನಿಮ್ಮನ್ನು ಕೊಂಡಾಡುವೆನು.
51“ಅವರು ತಮ್ಮ ಅರಸನಿಗೆ ವಿಶೇಷ ರಕ್ಷಣೆಯನ್ನು ಕೊಡುವರು;