We Believe JesusFé, Esperança e Nova Vida

2 ಸಮುಯೇಲ 14

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← 2 ಸಮುಯೇಲ 13 2 ಸಮುಯೇಲ 2 ಸಮುಯೇಲ 15 →

1ಅರಸನಾದ ದಾವೀದನ ಹೃದಯವು ಅಬ್ಷಾಲೋಮನ ಕಡೆಗೆ ಇರುವುದನ್ನು ಚೆರೂಯಳ ಮಗ ಯೋವಾಬನಿಗೆ ತಿಳಿಯಿತು.

2ಆದುದರಿಂದ ಯೋವಾಬನು ತೆಕೋವಗೆ ಮನುಷ್ಯರನ್ನು ಕಳುಹಿಸಿ, ಅಲ್ಲಿಂದ ಒಬ್ಬ ಜ್ಞಾನವುಳ್ಳ ಸ್ತ್ರೀಯನ್ನು ಕರಿಸಿ ಅವಳಿಗೆ, “ನೀನು ಗೋಳಾಡುವವಳ ಹಾಗೆ ನಟಿಸಿ, ದುಃಖ ವಸ್ತ್ರಗಳನ್ನು ಧರಿಸಿಕೋ; ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳದೆ, ಸತ್ತವನಿಗೋಸ್ಕರ ಅನೇಕ ದಿವಸಗಳಿಂದ ದುಃಖಿಸುವವಳ ಹಾಗಿದ್ದು,

3ಅರಸನ ಬಳಿಗೆ ಹೋಗಿ ಅವನ ಸಂಗಡ ಈ ಪ್ರಕಾರ ಮಾತನಾಡು,” ಎಂದು ಹೇಳಿ ಯೋವಾಬನು ಅವಳಿಗೆ ಕಲಿಸಿಕೊಟ್ಟನು.

4ಹಾಗೆಯೇ ತೆಕೋವದ ಆ ಸ್ತ್ರೀಯು ಅರಸನ ಸಂಗಡ ಮಾತನಾಡಿದಳು. ಮೋರೆ ಕೆಳಗಾಗಿ ನೆಲಕ್ಕೆ ಬಿದ್ದು ವಂದಿಸಿ, “ಅರಸನೇ, ಸಹಾಯಮಾಡು,” ಎಂದಳು.

5ಅರಸನು ಅವಳಿಗೆ, “ನಿನಗೆ ಏನಾಯಿತು?” ಎಂದನು.

6ಆದರೆ ನಿನ್ನ ಸೇವಕಳಿಗೆ ಇಬ್ಬರು ಪುತ್ರರಿದ್ದರು. ಅವರಿಬ್ಬರೂ ಹೊಲದಲ್ಲಿ ಹೊಡೆದಾಡಿದರು. ಅವರನ್ನು ಬಿಡಿಸುವವರು ಯಾರೂ ಇಲ್ಲದ್ದರಿಂದ, ಒಬ್ಬನು ಮತ್ತೊಬ್ಬನನ್ನು ಹೊಡೆದು ಕೊಂದುಹಾಕಿದನು.

7ಆದ್ದರಿಂದ ಕುಟುಂಬದವರೆಲ್ಲರು ನಿನ್ನ ಸೇವಕಿಯ ವಿರೋಧವಾಗಿ ಎದ್ದು, ‘ತನ್ನ ಸಹೋದರನನ್ನು ಕೊಂದವನನ್ನು ಅವನ ಸಹೋದರನ ಪ್ರಾಣಕ್ಕೋಸ್ಕರ ಅವನನ್ನು ಒಪ್ಪಿಸಿಕೊಡು, ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನೂ ತೆಗೆದುಬಿಟ್ಟು ನಿನ್ನನ್ನು ಬಾಧ್ಯಸ್ಥವಿಲ್ಲದ ಹಾಗೆ ಮಾಡಿಬಿಡುತ್ತೇವೆ’ ಎನ್ನುತ್ತಾರೆ. ಹೀಗೆಯೇ ಅವರು ನನಗೆ ಉಳಿದಿರುವ ಒಂದು ಕೆಂಡವನ್ನು ಆರಿಸಿ, ಭೂಮಿಯ ಮೇಲೆ ನನ್ನ ಗಂಡನ ಹೆಸರನ್ನೂ, ಸಂತಾನವನ್ನೂ ಅಳಿಸಬೇಕೆಂದಿದ್ದಾರೆ,” ಎಂದಳು.

8ಆಗ ಅರಸನು ಆ ಸ್ತ್ರೀಗೆ, “ನೀನು ನಿನ್ನ ಮನೆಗೆ ಹೋಗು; ನಾನು ನಿನ್ನ ವಿಷಯವಾಗಿ ಆಜ್ಞಾಪಿಸುತ್ತೇನೆ,” ಎಂದನು.

9ಆದರೆ ತೆಕೋವದ ಸ್ತ್ರೀಯು ಅರಸನಿಗೆ, “ಅರಸನಾದ ನನ್ನ ಒಡೆಯನೇ, ಆ ಅಕ್ರಮವು ನನ್ನ ಮೇಲೆಯೂ, ನನ್ನ ತಂದೆಯ ಮನೆಯ ಮೇಲೆಯೂ ಇರಲಿ. ಅರಸನೂ, ಅವನ ಸಿಂಹಾಸನವೂ ನಿರಪರಾಧವಾಗಿರಲಿ,” ಎಂದಳು.

10ಅದಕ್ಕೆ ಅರಸನು, “ಯಾವನಾದರೂ ನಿನಗೆ ಏನಾದರೂ ಹೇಳಿದರೆ, ಅವನನ್ನು ನನ್ನ ಬಳಿಗೆ ಕರೆದುಕೊಂಡು ಬಾ. ಅವನು ಇನ್ನು ನಿನ್ನನ್ನು ಎಂದಿಗೂ ಮುಟ್ಟದೆ ಇರುವನು,” ಎಂದನು.

11ಆಕೆ, “ಹಾಗಾದರೆ ನನ್ನ ಮಗನು ಸಾಯದಂತೆ ನಾಶನಕ್ಕೆ ನಾಶನವನ್ನು ಕೂಡಿಸುವ ಸೇಡುತೀರಿಸುವವರನ್ನು ತಡೆಯಲು ಅರಸನು ತನ್ನ ದೇವರಾದ ಯೆಹೋವ ದೇವರನ್ನು ಬೇಡಿಕೊಳ್ಳಲಿ,” ಎಂದಳು.

12ಆಗ ಆ ಸ್ತ್ರೀಯು, “ಅರಸನಾದ ನನ್ನ ಒಡೆಯನ ಸಂಗಡ ನಿನ್ನ ದಾಸಿಯು ಒಂದು ಮಾತನ್ನು ಹೇಳುವುದಕ್ಕೆ ಅಪ್ಪಣೆ ಆಗಬೇಕು,” ಎಂದಳು.

13ಆಗ ಆ ಸ್ತ್ರೀಯು, “ಹಾಗಾದರೆ, ಏಕೆ ದೇವಜನರಿಗೆ ವಿರೋಧವಾಗಿ ಅಂಥಾ ಕಾರ್ಯವನ್ನು ನೀನು ನಡೆಸುವುದೇನು? ಅರಸನು ತಾನು ಬಹಿಷ್ಕರಿಸಿದ ಮಗನನ್ನು ತಿರುಗಿ ಸೇರಿಸಿಕೊಳ್ಳದೆ ಹೋದದ್ದರಿಂದ, ತನ್ನನ್ನು ತಾನೇ ಅಪರಾಧಿ ಎಂದು ತೀರ್ಪುಮಾಡಿದ ಹಾಗಾಯಿತು.

14ನಾವೆಲ್ಲರೂ ಸಾಯುವುದು ಅವಶ್ಯವೇ. ನಾವು ನೆಲದ ಮೇಲೆ ಚೆಲ್ಲಿ ತಿರುಗಿ ತುಂಬಿಕೊಳ್ಳಲಾಗದ ನೀರಿನ ಹಾಗೆ ಇದ್ದೇವೆ. ಆದರೆ ದೇವರು ಹಾಗೆ ಯಾರ ಪ್ರಾಣವನ್ನೂ ತೆಗೆಯ ಬಯಸುವವರಲ್ಲ. ಅದಕ್ಕೆ ಬದಲಾಗಿ ಬಹಿಷ್ಕಾರವಾದವವರನ್ನು ತಿರುಗಿ ತಮ್ಮ ಬಳಿಗೆ ಬರುವಂತೆ ದೇವರು ಸದುಪಾಯಗಳನ್ನು ಕಲ್ಪಿಸುವವರಾಗಿದ್ದಾರೆ.

15“ಆದ್ದರಿಂದ ಈಗ ಜನರು ನನ್ನನ್ನು ಭಯಪಡಿಸಿದ್ದರಿಂದ, ಈ ಕಾರ್ಯವನ್ನು ಕುರಿತು ನನ್ನ ಒಡೆಯನಾದ ಅರಸನ ಸಂಗಡ ನಿನ್ನ ದಾಸಿಯಾದ ನಾನು ಮಾತಾನಾಡುವುದಕ್ಕೆ ಬಂದೆನು. ‘ನಿನ್ನ ದಾಸಿಯಾದ ನಾನು ಅರಸನ ಬಳಿಗೆ ಹೋಗುತ್ತೇನೆ. ಒಂದು ವೇಳೆ ಅರಸನು ತನ್ನ ದಾಸಿಯ ಕಾರ್ಯವನ್ನು ನೆರವೇರಿಸಿಯಾನು.

16ಏಕೆಂದರೆ ಅರಸನು ಕೇಳಿ ನನ್ನನ್ನೂ, ನನ್ನ ಮಗನನ್ನೂ ದೇವರ ಬಾಧ್ಯತೆಯಲ್ಲಿಂದ ನಾಶಮಾಡಬೇಕೆಂದಿರುವ ಮನುಷ್ಯರ ಕೈಯಿಂದ ದಾಸಿಯನ್ನು ತಪ್ಪಿಸುವನು,’ ಎಂದುಕೊಂಡೆನು.

17“ನಿನ್ನ ದಾಸಿಯು, ‘ಅರಸನಾದ ನನ್ನ ಒಡೆಯನ ಮಾತು ಆದರಣೆಯಾಗಿರಲಿ. ಏಕೆಂದರೆ ಒಳ್ಳೆಯದನ್ನೂ, ಕೆಟ್ಟದ್ದನ್ನೂ ಕೇಳುವುದಕ್ಕೆ ಅರಸನಾದ ನನ್ನ ಒಡೆಯನು ದೇವದೂತನ ಹಾಗೆ ಇದ್ದಾನೆ ಮತ್ತು ನಿನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇರಲಿ,’ ಎಂದಳು.”

18ಆಗ ಅರಸನು ಉತ್ತರವಾಗಿ ಆ ಸ್ತ್ರೀಗೆ, “ನಾನು ನಿನ್ನಿಂದ ಕೇಳುವುದನ್ನು ನನಗೆ ಮರೆಮಾಡಬೇಡ,” ಎಂದನು.

19ಅದಕ್ಕೆ ಅರಸನು, “ಇದೆಲ್ಲಾದರಲ್ಲಿ ಯೋವಾಬನ ಕೈ ನಿನ್ನ ಸಂಗಡ ಉಂಟಲ್ಲವೋ?” ಎಂದು ಕೇಳಿದನು.

20ಈ ಮಾತನ್ನು ರೂಪಕವಾಗಿ ತಿರುಗಿಸುವುದಕ್ಕೆ ನಿನ್ನ ಸೇವಕನಾದ ಯೋವಾಬನು ಇದನ್ನು ಮಾಡಿದ್ದಾನೆ. ಆದರೆ ಭೂಮಿಯಲ್ಲಿ ನಡೆಯುವುದನ್ನೆಲ್ಲಾ ತಿಳಿದುಕೊಳ್ಳುವುದಕ್ಕೆ ದೇವದೂತನ ಜ್ಞಾನದ ಹಾಗೆಯೇ ನನ್ನ ಒಡೆಯನು ಜ್ಞಾನವುಳ್ಳವನಾಗಿದ್ದಾನೆ,” ಎಂದಳು.

21ಆದ್ದರಿಂದ ಅರಸನು ಯೋವಾಬನಿಗೆ, “ನಾನು ಈ ಕಾರ್ಯವನ್ನು ಮಾಡಿದೆನು. ನೀನು ಹೋಗಿ ಯೌವನಸ್ಥನಾದ ಅಬ್ಷಾಲೋಮನನ್ನು ತಿರುಗಿ ಕರೆದುಕೊಂಡು ಬಾ,” ಎಂದನು.

22ಆಗ ಯೋವಾಬನು ಮೋರೆ ಕೆಳಗಾಗಿ ನೆಲದ ಮೇಲೆ ಬಿದ್ದು ವಂದಿಸಿದನು. ಯೋವಾಬನು, “ಅರಸನು ತನ್ನ ಸೇವಕನ ಮಾತಿನ ಪ್ರಕಾರ ಮಾಡಿದ್ದರಿಂದ, ನನ್ನ ಒಡೆಯನಾದ ಅರಸನೇ ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತೆಂಬುದು ಈ ಹೊತ್ತು ನಿನ್ನ ಸೇವಕನಿಗೆ ತಿಳಿಯಿತು,” ಎಂದನು.

23ಹಾಗೆಯೇ ಯೋವಾಬನು ಎದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದನು.

24ಆದರೆ ಅರಸನು, “ಅವನು ತನ್ನ ಮನೆಗೆ ತಿರುಗಿ ಹೋಗಲಿ. ಅವನು ನನ್ನ ಮುಖವನ್ನು ನೋಡಬಾರದು,” ಎಂದನು. ಆದ್ದರಿಂದ ಅಬ್ಷಾಲೋಮನು ಅರಸನ ಮುಖವನ್ನು ನೋಡದೆ ತನ್ನ ಮನೆಗೆ ತಿರುಗಿಹೋದನು.

25ಸಮಸ್ತ ಇಸ್ರಾಯೇಲಿನಲ್ಲಿ ಬಹಳ ಹೊಗಳಿಕೆಗೆ ಪಾತ್ರನಾದ ಅಬ್ಷಾಲೋಮನಂಥ ಸೌಂದರ್ಯವುಳ್ಳವನು ಒಬ್ಬನೂ ಇರಲಿಲ್ಲ. ಅವನ ಅಂಗಾಲು ಮೊದಲ್ಗೊಂಡು ನಡುನೆತ್ತಿಯವರೆಗೂ ಅವನಲ್ಲಿ ಒಂದು ಕಳಂಕವಾದರೂ ಇಲ್ಲದೆ ಇತ್ತು.

26ಅವನು ತನ್ನ ತಲೆಯ ಕೂದಲು ಭಾರವಾಗಿದೆ ಎಂದು ಪ್ರತಿವರ್ಷದ ಕೊನೆಯಲ್ಲಿ ಬೋಳಿಸಿಕೊಳ್ಳುತ್ತಿದ್ದನು. ಬೋಳಿಸಿಕೊಳ್ಳುವಾಗ ಅವನ ತಲೆಯ ಕೂದಲು ರಾಜರ ತೂಕದ ಪ್ರಕಾರ ಎರಡು ಕಿಲೋಗ್ರಾಂ ತೂಕವಾಗಿರುತ್ತಿತ್ತು.

27ಅಬ್ಷಾಲೋಮನಿಗೆ ಮೂರು ಮಂದಿ ಪುತ್ರರೂ, ತಾಮಾರ್ ಎಂಬ ಒಬ್ಬ ಪುತ್ರಿಯೂ ಹುಟ್ಟಿದರು. ತಾಮಾರಳು ಸೌಂದರ್ಯವುಳ್ಳ ಸ್ತ್ರೀ ಆಗಿದ್ದಳು.

28ಅಬ್ಷಾಲೋಮನು ಅರಸನ ಮುಖವನ್ನು ಕಾಣದೆ, ಪೂರ್ಣವಾಗಿ ಎರಡು ವರ್ಷ ಯೆರೂಸಲೇಮಿನಲ್ಲಿ ವಾಸವಾಗಿದ್ದನು.

29ಆದ್ದರಿಂದ ಅಬ್ಷಾಲೋಮನು ಅರಸನ ಬಳಿಗೆ ತನ್ನನ್ನು ಕಳುಹಿಸುವುದಕ್ಕೆ ಯೋವಾಬನನ್ನು ಕರೆಕಳುಹಿಸಿದನು. ಆದರೆ ಅವನು ಅವನ ಬಳಿಗೆ ಬರಲೊಲ್ಲದೆ ಹೋದನು. ಎರಡನೆಯ ಸಾರಿ ಅವನನ್ನು ಕರೆಕಳುಹಿಸಿದನು. ಅವನು ಬರಲೊಲ್ಲದೆ ಹೋದನು.

30ಆದ್ದರಿಂದ ಅವನು ತನ್ನ ಸೇವಕರಿಗೆ, “ನೋಡಿರಿ, ನನ್ನ ಹೊಲಕ್ಕೆ ಸಮೀಪವಾಗಿ ಯೋವಾಬನ ಹೊಲವಿದೆ. ಅದರಲ್ಲಿ ಜವೆಗೋಧಿ ಇದೆ. ನೀವು ಹೋಗಿ ಅದನ್ನು ಬೆಂಕಿಯಿಂದ ಸುಟ್ಟುಬಿಡಿರಿ,” ಎಂದನು. ಹಾಗೆಯೇ ಅಬ್ಷಾಲೋಮನ ಸೇವಕರು ಆ ಹೊಲಕ್ಕೆ ಬೆಂಕಿಯನ್ನು ಹಚ್ಚಿದರು.

31ಆಗ ಯೋವಾಬನು ಎದ್ದು ಅಬ್ಷಾಲೋಮನ ಮನೆಗೆ ಬಂದು ಅವನಿಗೆ, “ನನ್ನ ಹೊಲವನ್ನು ನಿನ್ನ ಸೇವಕರು ಬೆಂಕಿಯಿಂದ ಸುಟ್ಟುಬಿಟ್ಟಿದ್ದೇಕೆ?” ಎಂದು ಕೇಳಿದನು.

32ಅಬ್ಷಾಲೋಮನು ಯೋವಾಬನಿಗೆ, “ನಾನು ಗೆಷೂರಿನಿಂದ ಏಕೆ ಬಂದೆನೆಂದು ಅರಸನಿಗೆ ಹೇಳುವುದಕ್ಕೆ ನಿನ್ನನ್ನು ಕಳುಹಿಸುವ ಹಾಗೆ ‘ಇಲ್ಲಿಗೆ ಬಾ’ ಎಂದು ನಿನ್ನನ್ನು ಕರೆಕಳುಹಿಸಿದೆನು. ನಾನು ಇನ್ನೂ ಅಲ್ಲಿಯೇ ಇದ್ದಿದ್ದರೆ ನನಗೆ ಉತ್ತಮವಾಗಿತ್ತು. ಈಗ ನಾನು ಅರಸನ ಮುಖವನ್ನು ನೋಡಬೇಕು. ನನ್ನಲ್ಲಿ ಅಕ್ರಮ ಇದ್ದರೆ, ಅವನು ನನ್ನನ್ನು ಕೊಂದು ಹಾಕಲಿ,” ಎಂದನು.

33ಹಾಗೆಯೇ ಯೋವಾಬನು ಅರಸನ ಬಳಿಗೆ ಹೋಗಿ ತಿಳಿಸಿದ್ದರಿಂದ, ಅರಸನು ಅಬ್ಷಾಲೋಮನನ್ನು ಕರೆಸಿದನು. ಆಗ ಅವನು ಅರಸನ ಬಳಿಗೆ ಬಂದು ಸಾಷ್ಟಾಂಗ ನಮಸ್ಕಾರಮಾಡಿದನು. ಆಗ ಅರಸನು ಅಬ್ಷಾಲೋಮನಿಗೆ ಮುದ್ದಿಟ್ಟನು.

← 2 ಸಮುಯೇಲ 13 2 ಸಮುಯೇಲ 2 ಸಮುಯೇಲ 15 →

2 ಸಮುಯೇಲ 14 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019