We Believe JesusFé, Esperança e Nova Vida

2 ಪೂರ್ವಕಾಲ ವೃತ್ತಾಂತ 4

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← 2 ಪೂರ್ವಕಾಲ ವೃತ್ತಾಂತ 3 2 ಪೂರ್ವಕಾಲ ವೃತ್ತಾಂತ 2 ಪೂರ್ವಕಾಲ ವೃತ್ತಾಂತ 5 →

1ಇವುಗಳಲ್ಲದೆ, ಸೊಲೊಮೋನನು ಕಂಚಿನ ಬಲಿಪೀಠವನ್ನು ಮಾಡಿಸಿದನು; ಅದರ ಉದ್ದ ಒಂಬತ್ತು ಮೀಟರ್, ಅಗಲ ಒಂಬತ್ತು ಮೀಟರ್, ಎತ್ತರ ಸುಮಾರು ಐದು ಮೀಟರ್.

2ಅನಂತರ ಅವನು ಸಮುದ್ರಪಾತ್ರೆ ಎಂದು ಕರೆಯಲಾಗುವ ಎರಕದ ದೊಡ್ಡ ಪಾತ್ರೆಯನ್ನು ಮಾಡಿಸಿದನು; ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಸುಮಾರು ನಾಲ್ಕು ಮೀಟರ್; ಅದರ ಎತ್ತರ ಸುಮಾರು ಎರಡು ಮೀಟರ್; ಸುತ್ತಳತೆ ಸುಮಾರು ಹದಿನಾಲ್ಕು ಮೀಟರಾಗಿತ್ತು;

3ಅದರ ಅಂಚಿನ ಕೆಳಭಾಗದಲ್ಲಿ ಅದರ ಸುತ್ತಲೂ ಎತ್ತುಗಳ ರೂಪಗಳಿದ್ದವು; ಅವು ಒಂದೊಂದು ಮೀಟರಿಗೆ ಹತ್ತರಂತೆ, ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು; ಇದು ಎರಕ ಹೊಯ್ಯುವಾಗ, ಎತ್ತುಗಳ ರೂಪಗಳು ಎರಡು ಸಾಲಾಗಿ ಎರಕ ಹೊಯ್ಸಿದನು.

4ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು.

5ಅದರ ದಪ್ಪವು ಅಂಗೈ ಅಗಲದಷ್ಟಾಗಿಯೂ, ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ, ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ಅರವತ್ತಾರು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.

6ಇದಲ್ಲದೆ ಹತ್ತು ತೊಟ್ಟಿಗಳನ್ನು ಮಾಡಿಸಿ, ಅವುಗಳಲ್ಲಿ ತೊಳೆಯುವ ನಿಮಿತ್ತವಾಗಿ ಬಲಗಡೆಯಲ್ಲಿ ಐದನ್ನೂ, ಎಡಗಡೆಯಲ್ಲಿ ಐದನ್ನೂ ಇರಿಸಿದನು. ದಹನಬಲಿಗೋಸ್ಕರ ಅರ್ಪಿಸುವವುಗಳನ್ನು ಅವುಗಳಲ್ಲಿ ತೊಳೆಯುತ್ತಿದ್ದರು. ಆದರೆ ಆ ಕೊಳವು ಯಾಜಕರು ತೊಳೆದುಕೊಳ್ಳುವುದಕ್ಕೆ ಇತ್ತು.

7ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ, ಮಂದಿರದಲ್ಲಿ ಬಲಗಡೆ ಐದನ್ನೂ, ಎಡಗಡೆ ಐದನ್ನೂ ಇರಿಸಿದನು.

8ಹಾಗೆಯೇ ಅವನು ಹತ್ತು ಮೇಜುಗಳನ್ನು ಮಾಡಿಸಿ, ಮಂದಿರದಲ್ಲಿ ಬಲಗಡೆ ಐದನ್ನೂ, ಎಡಗಡೆ ಐದನ್ನೂ ಇರಿಸಿದನು. ನೂರು ಬಂಗಾರದ ಬಟ್ಟಲುಗಳನ್ನು ಮಾಡಿಸಿದನು.

9ಯಾಜಕರ ಅಂಗಳವನ್ನೂ, ದೊಡ್ಡ ಅಂಗಳವನ್ನೂ, ಅಂಗಳಗಳಿಗೋಸ್ಕರ ಬಾಗಿಲುಗಳನ್ನೂ ಮಾಡಿಸಿ, ಆ ಬಾಗಿಲುಗಳನ್ನು ಕಂಚಿನಿಂದ ಹೊದಿಸಿದನು.

10ಸಮುದ್ರ ಎಂದು ಕರೆಯಲಾದ ದೊಡ್ಡ ಪಾತ್ರೆಯನ್ನು ಬಲಗಡೆಯಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು.

11ಇದಲ್ಲದೆ ಹೂರಾಮನು4:11 ಹೂರಾಮನು ಅಥವಾ ಹೀರಾಮ ಪಾತ್ರೆಗಳನ್ನೂ, ಸಲಿಕೆಗಳನ್ನೂ, ಬಟ್ಟಲುಗಳನ್ನೂ ಮಾಡಿದನು.

12ಅವು ಯಾವುವೆಂದರೆ, ಎರಡು ಸ್ತಂಭಗಳು,

13ಎರಡು ಜಾಲರಿ ಸಾಮಾನುಗಳಿಗೆ ನಾನೂರು ದಾಳಿಂಬೆ ಹಣ್ಣುಗಳು, ಸ್ತಂಭಗಳ ಮೇಲೆ ಇರುವ ಎರಡು ಕುಂಭಗಳನ್ನು ಮುಚ್ಚುವಂತೆ ಒಂದು ಜಾಲರಿ ಸಲಕರಣೆಗಳಿಗೆ ಎರಡು ಸಾಲಿನ ದಾಳಿಂಬೆ ಹಣ್ಣುಗಳನ್ನು ಮಾಡಿದನು.

14ಇದಲ್ಲದೆ ಅವನು ಪೀಠಗಳನ್ನು ಅವುಗಳ ಮೇಲಿರುವ ತೊಟ್ಟಿಗಳನ್ನು ಮಾಡಿದನು.

15ಸಮುದ್ರಪಾತ್ರೆಯು ಅದರ ಕೆಳಗಿರುವ ಹನ್ನೆರಡು ಎತ್ತುಗಳು,

16ಪಾತ್ರೆಗಳು, ಸಲಿಕೆಗಳು, ಮುಳ್ಳುಗಳು.

17ಯೊರ್ದನಿಗೆ ಸೇರಿದ ಬಯಲಾದ ಸುಕ್ಕೋತಿಗೂ ಚರೇದನಿಗೂ ನಡುವೆ ಇರುವ ಜೇಡಿಮಣ್ಣಿನ ಅಚ್ಚುಗಳಲ್ಲಿ ಅರಸನು ಅವುಗಳನ್ನು ಎರಕ ಹೊಯ್ಯಿಸಿದನು.

18ಸೊಲೊಮೋನನು ಮಾಡಿಸಿದ ಈ ಸಲಕರಣೆಗಳೆಲ್ಲಾ ಬಹು ಹೆಚ್ಚಾಗಿದ್ದರಿಂದ ಆ ಕಂಚಿನ ತೂಕವು ಎಷ್ಟೆಂದು ನಿರ್ಧರಿಸಲಾಗಲಿಲ್ಲ.

19ಸೊಲೊಮೋನನು ದೇವರ ಆಲಯದ ಎಲ್ಲಾ ಸಲಕರಣೆಗಳನ್ನು ಮಾಡಿಸಿದನು. ಅವು ಯಾವುವೆಂದರೆ:

20ನಿಯಮದ ಪ್ರಕಾರ ಮಹಾಪರಿಶುದ್ಧ ಸ್ಥಳದ ಮುಂಭಾಗದಲ್ಲಿ ಶುದ್ಧ ಬಂಗಾರದ ದೀಪಸ್ತಂಭಗಳನ್ನೂ ಅವುಗಳ ದೀಪಗಳನ್ನೂ,

21ಹೂವುಗಳನ್ನೂ, ದೀಪಗಳ ಚಿಮಟಿಗಳನ್ನೂ ಶುದ್ಧ ಬಂಗಾರದಿಂದ ಮಾಡಿಸಿದನು.

22ಶುದ್ಧ ಬಂಗಾರದಿಂದ ಕತ್ತರಿಗಳು, ಬೋಗುಣಿಗಳು, ಅಗ್ನಿಪಾತ್ರೆಗಳು, ಅಗ್ಗಿಷ್ಟಿಗೆ ಇವುಗಳನ್ನು ಮಾಡಿಸಿದನು. ಇದಲ್ಲದೆ ಆಲಯದ ಪ್ರವೇಶ ದ್ವಾರವೂ, ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯ ಬಾಗಿಲುಗಳೂ, ಮಂದಿರದ ಮನೆ ಬಾಗಿಲುಗಳೂ ಬಂಗಾರದವುಗಳಾಗಿದ್ದವು.

← 2 ಪೂರ್ವಕಾಲ ವೃತ್ತಾಂತ 3 2 ಪೂರ್ವಕಾಲ ವೃತ್ತಾಂತ 2 ಪೂರ್ವಕಾಲ ವೃತ್ತಾಂತ 5 →

2 ಪೂರ್ವಕಾಲ ವೃತ್ತಾಂತ 4 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019