We Believe JesusFé, Esperança e Nova Vida

1 ಪೂರ್ವಕಾಲ ವೃತ್ತಾಂತ 7

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← 1 ಪೂರ್ವಕಾಲ ವೃತ್ತಾಂತ 6 1 ಪೂರ್ವಕಾಲ ವೃತ್ತಾಂತ 1 ಪೂರ್ವಕಾಲ ವೃತ್ತಾಂತ 8 →

1ಇಸ್ಸಾಕಾರನ ಪುತ್ರರು:

2ತೋಲನ ಪುತ್ರರು:

3ಉಜ್ಜೀಯನ ಪುತ್ರನು

4ಇವರ ಸಂಗಡ ಅವರ ವಂಶಗಳ ಪ್ರಕಾರವೂ, ಅವರ ಪಿತೃಗಳ ಮನೆಯ ಪ್ರಕಾರವೂ ಯುದ್ಧಕ್ಕೋಸ್ಕರ 36,000 ಮಂದಿ ಯುದ್ಧವೀರರ ಗುಂಪುಗಳಿದ್ದವು. ಏಕೆಂದರೆ ಅವರ ಹೆಂಡತಿಯರು, ಮಕ್ಕಳು ಬಹಳ ಮಂದಿ ಇದ್ದರು.

5ಇಸ್ಸಾಕಾರನ ಕುಟುಂಬಗಳಾಗಿರುವ ಸಹೋದರರೊಳಗೆ ಅವರ ವಂಶಾವಳಿಗಳಲ್ಲಿ ಲೆಕ್ಕಿಸಿದಾಗ ಯುದ್ಧವೀರರೆಲ್ಲರೂ 87,000 ಮಂದಿಯಾಗಿದ್ದರು.

6ಬೆನ್ಯಾಮೀನನ ಪುತ್ರರು:

7ಬೆಳನ ಪುತ್ರರು:

8ಬೆಕೆರನ ಪುತ್ರರು:

9ಪ್ರತಿಯೊಬ್ಬರೂ ಪೂರ್ವಜರ ಕುಲದ ನಾಯಕರಾಗಿದ್ದರು. ಅವರ ವಂಶಾವಳಿಯ ದಾಖಲೆಗಳಲ್ಲಿ ಪಟ್ಟಿ ಮಾಡಲಾಗಿರುವಂತೆ ಈ ಕುಲಗಳ ಪ್ರಬಲ ಯೋಧರು ಮತ್ತು ನಾಯಕರ ಒಟ್ಟು ಸಂಖ್ಯೆ 20,200 ಆಗಿತ್ತು.

10ಯೆದೀಯಯೇಲನ ಪುತ್ರನು

11ಇವರೆಲ್ಲರು ಯೆದೀಯಯೇಲನ ಪುತ್ರರು. ಪ್ರತಿಯೊಬ್ಬರೂ ಪೂರ್ವಜರ ಕುಲದ ನಾಯಕರಾಗಿದ್ದರು. ಯುದ್ಧದ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡತಕ್ಕವರು 17,200 ಮಂದಿಯಾಗಿದ್ದರು.

12ಅಹೇರನ ಪುತ್ರರಾದ ಈರನೂ, ಹುಶೀಮನೂ ಎಂಬವರ ಮಕ್ಕಳು ಶುಪ್ಪೀಮನೂ, ಹುಪ್ಪೀಮನೂ ಇದ್ದರು.

13ನಫ್ತಾಲಿಯ ಪುತ್ರರು:

14ಮನಸ್ಸೆಯ ವಂಶಜರು:

15ಆದರೆ ಈ ಮಾಕೀರನು ಹುಪ್ಪೀಮ್ ಮತ್ತು ಶುಪ್ಪೀಮರ ಸಹೋದರಿಯಾದ ಮಾಕಳನ್ನು ಹೆಂಡತಿಯಾಗಿ ತೆಗೆದುಕೊಂಡನು. ಅವನ ಮೊಮ್ಮಗನ ಹೆಸರು ಚೆಲೊಫಾದನು; ಈ ಚೆಲೋಫಾದನಿಗೆ ಪುತ್ರಿಯರು ಮಾತ್ರ ಇದ್ದರು.

16ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು, ಪೆರೆಷ್ ಎಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್. ಇವನಿಗೆ ಊಲಾಮ್, ರೆಕೆಮ್ ಎಂಬ ಇಬ್ಬರು ಪುತ್ರರಿದ್ದರು.

17ಊಲಾಮ್ ಮಗನು

18ಅವನ ಸಹೋದರಿ ಹಮ್ಮೋಲೆಕೆತಳು ಈಷ್ಹೋದನನ್ನೂ, ಅಬೀಯೆಜೆರನನ್ನೂ, ಮಹ್ಲನನ್ನೂ ಹೆತ್ತಳು.

19ಶೆಮೀದನನ ಪುತ್ರರು:

20ಎಫ್ರಾಯೀಮನ ವಂಶಜರು:

21ಅವನ ಮಗನು ಜಾಬಾದ್;

22ಅವರ ತಂದೆಯಾದ ಎಫ್ರಾಯೀಮನು ಅನೇಕ ದಿವಸಗಳು ದುಃಖಪಟ್ಟದ್ದರಿಂದ, ಅವನ ಸಹೋದರರು ಅವನನ್ನು ಆದರಿಸಲು ಬಂದರು.

23ಅವನು ತನ್ನ ಹೆಂಡತಿಯ ಬಳಿಗೆ ಸೇರಿದಾಗ, ಅವಳು ಗರ್ಭಧರಿಸಿ ಮಗನನ್ನು ಹೆತ್ತಳು. ಆಗ ತನ್ನ ಮನೆಯಲ್ಲಿ ಕೇಡು ಉಂಟಾದದ್ದರಿಂದ ಅವನಿಗೆ ಬೆರೀಯ ಎಂದು ಹೆಸರಿಟ್ಟನು.

24ಇವನ ಪುತ್ರಿಯ ಹೆಸರು ಶೇರಳು. ಇವಳು ಕೆಳಗಿನ ಬೇತ್ ಹೋರೋನ್, ಮೇಲಿನ ಬೇತ್ ಹೋರೋನ್ ಮತ್ತು ಉಜ್ಜೇನ್ ಶೇರವನ್ನೂ ಕಟ್ಟಿಸಿದಳು.

25ಇವರ ಪುತ್ರರು: ರೆಫಹನ ಮಗನು ರೆಷೆಫನು, ರೆಷೆಫನ ಮಗನು

26ಅವನ ಮಗನು ಲದ್ದಾನ್, ಅವನ ಮಗನು ಅಮ್ಮೀಹೂದ,

27ಅವನ ಮಗನು ನೂನನು,

28ಅವರ ವಶಪಡಿಸಿಕೊಂಡು ನಿವಾಸಮಾಡಿದ ಬೇತೇಲೂ, ಅದರ ಗ್ರಾಮಗಳೂ ಪೂರ್ವದಿಕ್ಕಿನಲ್ಲಿ ನಾರಾನನೂ, ಪಶ್ಚಿಮ ದಿಕ್ಕಿನಲ್ಲಿ ಗೆಜೆರ್, ಅದರ ಗ್ರಾಮಗಳೂ ಒಳಗೊಂಡಿತ್ತು; ಶೆಕೆಮ್, ಅಯ್ಯಾ ಪಟ್ಟಣಗಳೂ ಅದರ ಗ್ರಾಮಗಳೂ ಇವೇ.

29ಗಾಜವೂ, ಮನಸ್ಸೆಯ ಸಂತಾನದವರ ಮೇರೆಯಲ್ಲಿರುವ ಬೇತ್ ಷೆಯಾನೂ, ತಾನಕವೂ, ಮೆಗಿದ್ದೋ, ದೋರ್ ಮತ್ತು ಇವುಗಳ ಗ್ರಾಮಗಳು ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಸಂತಾನದವರು ವಾಸವಾಗಿದ್ದರು.

30ಆಶೇರನ ಪುತ್ರರು:

31ಬೆರೀಯನ ಪುತ್ರರು:

32ಹೆಬೆರನು ಯಫ್ಲೇಟನನ್ನೂ, ಶೋಮೇರನನ್ನೂ, ಹೋತಾಮನನ್ನೂ, ಅವರ ಸಹೋದರಿಯಾದ ಶೂವಳನ್ನೂ ಪಡೆದನು.

33ಯಫ್ಲೇಟನ ಪುತ್ರರು:

34ಶೆಮೆರನ ಪುತ್ರರು:

35ಅವನ ಸಹೋದರನಾದ ಹೆಲೆಮನ ಪುತ್ರರು:

36ಚೋಫಹನ ಪುತ್ರರು:

37ಬೆಚೆರ್, ಹೋದ್, ಶಮ್ಮ, ಶಿಲ್ಷ, ಇತ್ರಾನ್, ಬೇರನು.

38ಯೆತೆರನ ಪುತ್ರರು:

39ಉಲ್ಲನ ಪುತ್ರರು:

40ಇವರೆಲ್ಲರು ಆಶೇರನ ಮಕ್ಕಳಾಗಿದ್ದು, ತಮ್ಮ ತಂದೆಯ ಕುಟುಂಬದಲ್ಲಿ ಯಜಮಾನರಾಗಿಯೂ, ಯುದ್ಧ ಪರಾಕ್ರಮಶಾಲಿಗಳಲ್ಲಿ ಮುಖ್ಯಸ್ಥರಾಗಿಯೂ, ಪ್ರಭುಗಳಲ್ಲಿ ಶ್ರೇಷ್ಠರಾಗಿಯೂ ಇದ್ದರು. ಅವರ ವಂಶಾವಳಿಯಲ್ಲಿ ದಾಖಲಿಸಿದ ಲೆಕ್ಕದ ಪ್ರಕಾರ ಯುದ್ಧಕ್ಕೆ ಸಿದ್ಧವಿರುವ 26,000 ಮಂದಿ ಇದ್ದರು.

← 1 ಪೂರ್ವಕಾಲ ವೃತ್ತಾಂತ 6 1 ಪೂರ್ವಕಾಲ ವೃತ್ತಾಂತ 1 ಪೂರ್ವಕಾಲ ವೃತ್ತಾಂತ 8 →

1 ಪೂರ್ವಕಾಲ ವೃತ್ತಾಂತ 7 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019