We Believe JesusFé, Esperança e Nova Vida

ಯೆಶಾ 46

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 · georgiano

← ಯೆಶಾ 45 ಯೆಶಾ ಯೆಶಾ 47 →

1ಬೇಲ್ ದೇವತೆಯು ಬಾಗಿದೆ, ನೆಬೋ ದೇವತೆಯು ಕುಗ್ಗಿದೆ,46:1 ಬೇಲ್ ದೇವತೆಯು ಬಾಗಿದೆ, ನೆಬೋ ದೇವತೆಯು ಕುಗ್ಗಿದೆ, ಮರ್ದುಕ್ ಎಂದೂ ಕರೆಯಲ್ಪಡುವ ಬೇಲ್, ಬಾಬೆಲಿನ ಮುಖ್ಯ ದೇವರುಗಳಲ್ಲಿ ಒಬ್ಬನಾಗಿದ್ದಾನೆ. ನೆಬೋ ಸಹ ಮತ್ತೊಬ್ಬನಾಗಿದ್ದಾನೆ; ಇವನು ಮರ್ದುಕ್ ನ ಮಗನು.

2ಒಟ್ಟಿಗೆ ಕುಗ್ಗಿ, ಬಗ್ಗಿವೆ, ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ,

3ಯಾಕೋಬವಂಶವೇ, ಇಸ್ರಾಯೇಲ್ ಮನೆತೆನದವರಲ್ಲಿ ಉಳಿದ ಸಂತಾನವೇ,

4ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು.

5ನನ್ನನ್ನು ಯಾರಿಗೆ ಸಮಾನ ಎಂದು ತಿಳಿದಿದ್ದೀರಿ? ನಾನು ಯಾರಿಗೆ ಸಮಾನನೆಂದು, ನನ್ನನ್ನು ಯಾರೊಡನೆ ಹೊಲಿಸುತ್ತೀರಿ?

6ಚೀಲದಿಂದ ಚಿನ್ನವನ್ನು ಸುರಿದು, ತಕ್ಕಡಿಯಲ್ಲಿ ಬೆಳ್ಳಿಯನ್ನು ತೂಗಿ,

7ಅವರು ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ, ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅಲ್ಲಿಂದ ಜರುಗದು.

8“ದ್ರೋಹಿಗಳೇ, ಇದನ್ನು ಜ್ಞಾಪಕದಲ್ಲಿಟ್ಟುಕೊಂಡು ಗಮನಿಸಿ ಮನುಷ್ಯರಿಗೆ ತಕ್ಕಂತೆ ನಡೆಯಿರಿ!

9ಪುರಾತನವಾದ ಹಳೆಯ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ;

10ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ. ‘ನನ್ನ ಸಂಕಲ್ಪವು ನಿಲ್ಲುವುದು,

11ಮೂಡಲಿಂದ ಒಂದು ಪಕ್ಷಿಯನ್ನು ಬರಮಾಡು, ದೂರದೇಶದಿಂದ ನನ್ನ ಸಂಕಲ್ಪವನ್ನು ನೆರವೇರಿಸುವ ಮನುಷ್ಯನು ಬರಲಿ ಎಂದು ಕರೆದಿದ್ದೇನೆ.

12ಕಠಿಣ ಹೃದಯದವರೇ, ನೀತಿಗೆ ದೂರವಾದವರೇ, ನನ್ನ ಮಾತಿಗೆ ಕಿವಿಗೊಡಿರಿ.

13ನನ್ನ ನೀತಿಯನ್ನು ಹತ್ತಿರಕ್ಕೆ ಬರ ಮಾಡುವೆನು. ಅದು ಇನ್ನು ದೂರವಾಗಿರದು, ನನ್ನ ರಕ್ಷಣೆಯು ತಡವಾಗದು,

← ಯೆಶಾ 45 ಯೆಶಾ ಯೆಶಾ 47 →

ಯೆಶಾ 46 — georgiano:

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ