We Believe JesusFé, Esperança e Nova Vida

ಯೆಶಾ 31

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 · georgiano

← ಯೆಶಾ 30 ಯೆಶಾ ಯೆಶಾ 32 →

1ಅಯ್ಯೋ, ಸಹಾಯಕ್ಕಾಗಿ ಐಗುಪ್ತವನ್ನು ಸೇರಿ ಅಶ್ವಬಲವನ್ನು ಆಶ್ರಯಿಸುವವರ ಗತಿಯನ್ನು ಏನು ಹೇಳಲಿ!

2ಇಗೋ, ಆತನು ವಿವೇಕಿ, ತನ್ನ ಮಾತನ್ನು ಹಿಂದಕ್ಕೆ ತೆಗೆಯದೆ ಕೇಡನ್ನು ಬರಮಾಡುವನು.

3ಐಗುಪ್ತ್ಯರು ಮನುಷ್ಯ ಮಾತ್ರದವರೇ, ದೇವರಲ್ಲ. ಅವರ ಅಶ್ವಗಳು ಆತ್ಮವಲ್ಲ, ಮಾಂಸಮಯವಾದವುಗಳು.

4ಯೆಹೋವನು ನನಗೆ ಹೀಗೆ ಹೇಳಿದ್ದಾನೆ,

5ಹಾರುವ ಪಕ್ಷಿಯಂತೆ ಸೇನಾಧೀಶ್ವರನಾದ ಯೆಹೋವನು ಯೆರೂಸಲೇಮನ್ನು ಕಾಪಾಡುವನು.

6“ಇಸ್ರಾಯೇಲರೇ, ನೀವು ಯಾರಿಗೆ ಅಗಾಧ ದ್ರೋಹವನ್ನು ಮಾಡಿದಿರೋ ಆತನ ಕಡೆಗೆ ತಿರುಗಿಕೊಳ್ಳಿರಿ.

7ಏಕೆಂದರೆ ನೀವು ನಿಮ್ಮ ಸ್ವಂತ ಕೈಯಿಂದ ರೂಪಿಸಿಕೊಂಡಿರುವ ಪಾಪದ ಗುರುತಾದ ಬೆಳ್ಳಿಯ ಮತ್ತು ಬಂಗಾರದ ವಿಗ್ರಹಗಳನ್ನು ಆ ದಿನದಲ್ಲಿ ಪ್ರತಿಯೊಬ್ಬನೂ ಬಿಸಾಡುವನು.

8ಆಗ ಅಶ್ಶೂರ್ಯರು ಕತ್ತಿಯಿಂದ ಬೀಳುವರು. ಅದು ಮನುಷ್ಯರ ಕತ್ತಿಯಲ್ಲ, ಖಡ್ಗವು ಅವರನ್ನು ನುಂಗುವುದು, ಅದು ಮಾನವ ಖಡ್ಗವಲ್ಲ.

9ಅವರು ಭಯದಿಂದ ತಮ್ಮ ಭರವಸೆಯನ್ನು ಕಳೆದುಕೊಳ್ಳುವರು. ಅವರ ಪ್ರಧಾನರು ಹೆದರಿ ಧ್ವಜಸ್ಥಾನದಿಂದ ದಿಕ್ಕಾಪಾಲಾಗುವರು”

← ಯೆಶಾ 30 ಯೆಶಾ ಯೆಶಾ 32 →

ಯೆಶಾ 31 — georgiano:

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ