We Believe JesusFé, Esperança e Nova Vida

ಗಲಾ 5

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 · georgiano

← ಗಲಾ 4 ಗಲಾ ಗಲಾ 6 →

1ಕ್ರಿಸ್ತನು ನಮ್ಮನ್ನು 5:1 ಗಲಾ. 2:4; 5:13ಸ್ವತಂತ್ರರಾಗಿರಿಸಬೇಕೆಂದೇ ನಮಗೆ ಬಿಡುಗಡೆ ಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ, 5:1 ಅ. ಕೃ. 15:10ದಾಸತ್ವದ ನೊಗದಲ್ಲಿ ತಿರುಗಿ ಸಿಕ್ಕಿಕೊಳ್ಳಬೇಡಿರಿ.

2ನೋಡಿರಿ, ಪೌಲನೆಂಬ ನಾನು ನಿಮಗೆ ಹೇಳುತ್ತೇನೆ, 5:2 ಅ. ಕೃ. 15:1; 1 ಕೊರಿ 7:18; ಗಲಾ. 5:3-11ನೀವು ಸುನ್ನತಿಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನೂ ಪ್ರಯೋಜನವಿಲ್ಲ.

35:3 ರೋಮಾ. 2:25ಸುನ್ನತಿ ಮಾಡಿಸಿಕೊಳ್ಳುವ ಪ್ರತಿಯೊಬ್ಬನಿಗೆ, ನೀನು ಧರ್ಮಶಾಸ್ತ್ರದಲ್ಲಿ ಹೇಳಿರುವುದನ್ನೆಲ್ಲಾ ಮಾಡುವ ಹಂಗಿನಲ್ಲಿದ್ದೀ ಎಂದು ತಿರುಗಿ ಪ್ರಮಾಣವಾಗಿ ಹೇಳುತ್ತೇನೆ.

45:4 ಗಲಾ. 2:21; 3:10; ರೋಮಾ. 9:31,32ನಿಮ್ಮಲ್ಲಿ ಯಾರಾರು ಧರ್ಮಶಾಸ್ತ್ರದಿಂದ ನೀತಿವಂತರಾಗಬೇಕೆಂದು ಬಯಸಿದ್ದೀರೋ ಅವರು ಕ್ರಿಸ್ತನಿಂದ ಅಗಲಿಹೋದವರಾಗಿದ್ದೀರಿ. ಕೃಪೆಯಿಂದ ಬಿದ್ದಹೋದವರಾಗಿದ್ದೀರಿ.

5ನಾವಾದರೋ ದೇವರಾತ್ಮನ ಮೂಲಕ ನಂಬಿಕೆಯಿಂದ ನೀತಿವಂತರಾಗುತ್ತೇವೆಂಬುವ 5:5 ರೋಮಾ. 8:23,25ನಿರೀಕ್ಷೆ ಸಫಲವಾಗುವುದೆಂದು ಎದುರುನೋಡುವವರಾಗಿದ್ದೇವೆ.

6ಕ್ರಿಸ್ತ ಯೇಸುವಿನಲ್ಲಿರುವವರಿಗೆ 5:6 ಗಲಾ. 6:15; 1 ಕೊರಿ 7:19; ಕೊಲೊ 3:11; ಗಲಾ. 3:28ಸುನ್ನತಿಯಾದರೂ ಆಗದಿದ್ದರೂ ಪ್ರಯೋಜನವಿಲ್ಲ, ಆದರೆ 5:6 ಎಫೆ 6:23; 1 ಥೆಸ. 1:3; ಯಾಕೋಬ 2:18,20,22ಅವರಲ್ಲಿ ಪ್ರೀತಿಯಿಂದ ಹೊರಹೊಮ್ಮುವ ನಂಬಿಕೆಯೇ ಪ್ರಯೋಜನವಾಗಿದೆ.

7ಚೆನ್ನಾಗಿ ಓಡುತ್ತಾ ಇದ್ದೀರಿ. ಆದರೆ ನೀವು ಸತ್ಯವನ್ನು ಅನುಸರಿಸದಂತೆ ನಿಮ್ಮನ್ನು ತಡೆದವರು ಯಾರು?

8ಈ ಮನವೊಲಿಕೆಯು ನಿಮ್ಮನ್ನು ಕರೆದಾತನಿಂದ ಹುಟ್ಟಿದ್ದಲ್ಲ.

95:9 1 ಕೊರಿ 5:6ಸ್ವಲ್ಪ ಹುಳಿಯಿಂದ ಕಣಕವೆಲ್ಲಾ ಹುಳಿಯಾಗುವುದು.

10ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲವೆಂದು ಕರ್ತನಲ್ಲಿ ನಿಮ್ಮನ್ನು ಕುರಿತಾಗಿ ನನಗೆ ಭರವಸೆ ಉಂಟು. 5:10 ಗಲಾ. 1:; 5:12ನಿಮ್ಮಲ್ಲಿ ಬೇಧವನ್ನು ಹುಟ್ಟಿಸುವವನು ಯಾವನಾದರೂ ಸರಿಯೇ, ಅವನು ದಂಡನೆಯನ್ನು ಅನುಭವಿಸುವನು.

11ಸಹೋದರರೇ, ನಾನಾದರೋ ಸುನ್ನತಿಯಾಗಬೇಕೆಂದು ಇನ್ನೂ ಸಾರುವವನಾಗಿದ್ದರೆ 5:11 ಗಲಾ. 4:29; 6:12ನನಗೆ ಹಿಂಸೆಯಾಗುವುದಾದರೂ ಯಾಕೆ? 5:11 1 ಕೊರಿ 1:23ಹಾಗಿದ್ದ ಪಕ್ಷದಲ್ಲಿ ಶಿಲುಬೆಯ ದೆಸೆಯಿಂದ ಉಂಟಾಗುವ ತೊಂದರೆಗಳು ನೀಗಿ ಹೋಯಿತಲ್ಲಾ?

125:12 ಗಲಾ. 5:10, 2:4ನಿಮ್ಮನ್ನು ಕಳವಳಪಡಿಸುವವರು ತಮ್ಮನೇ ತಾವು 5:12 ಕಸಿ ಮಾಡುವುದುಅಂಗಚ್ಛೇದನೆಯನ್ನಾದರೂ ಮಾಡಿಕೊಂಡರೆ ಚೆನ್ನಾಗಿತ್ತು.

13ಸಹೋದರರೇ, 5:13 ಗಲಾ. 5:1ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ 5:13 1 ಪೇತ್ರ. 2:1; ಯೂದ. 4ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನ ಸ್ವಭಾವಕ್ಕೆ ಆಸ್ಪದವಾಗಿ ಬಳಸದೆ, 5:13 1 ಕೊರಿ 9:19ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.

14“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು” ಎಂಬ ಒಂದೇ ಮಾತಿನಲ್ಲಿ ಧರ್ಮಶಾಸ್ತ್ರವೆಲ್ಲಾ ಅಡಗಿದೆ.

15ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಾಡಿ, ಹರಕೊಂಡು, ತಿನ್ನುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ.

16ನಾನು ಹೇಳುವುದೇನಂದರೆ 5:16 ಗಲಾ. 5:24,25; ರೋಮಾ. 8:4ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ, ಆಗ ನೀವು 5:16 ಎಫೆ 2:3ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ.

17ಏಕೆಂದರೆ ಶರೀರಾಭಿಲಾಷೆಯೂ ಆತ್ಮನಿಗೆ ವಿರುದ್ಧವಾಗಿದೆ, ಆತ್ಮನ ಅಭಿಲಾಷೆಯು ಶರೀರಭಾವಕ್ಕೆ ವಿರುದ್ಧವಾಗಿದೆ. 5:17 ರೋಮಾ. 7:15, 18-20ನೀವು ಮಾಡಲಿಚ್ಚಿಸುವುದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ.

18ಆದರೆ 5:18 ರೋಮಾ. 8:14ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ 5:18 ರೋಮಾ. 7:4ಧರ್ಮಶಾಸ್ತ್ರಕ್ಕೆ ಅಧೀನರಲ್ಲ.

19ಶರೀರಭಾವದ ಸ್ವಭಾವಗಳು ಪ್ರತ್ಯಕ್ಷವಾಗಿಯೇ ಇವೆ, ಅದು ಯಾವುವೆಂದರೆ, ಜಾರತ್ವ, ಬಂಡುತನ, ನಾಚಿಕೆಗೇಡಿತನ,

20ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಪಕ್ಷಪಾತ, 5:20 1 ಕೊರಿ 11:19ಭಿನ್ನಮತ,

21ಮತ್ಸರ, ಕುಡುಕುತನ, ಗಲಭೆ, ಢಂಭಾಚಾರ ಇಂಥವುಗಳೇ. 5:21 ಕೊಲೊ 3:6; 1 ಕೊರಿ 6:9ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂದು ನಾನು ಈ ಮೊದಲು ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ.

22ಆದರೆ 5:22 ರೋಮಾ. 7:4; 8:5; ಎಫೆ 5:9ದೇವರಾತ್ಮನಿಂದ ಉಂಟಾಗುವ ಫಲವೇನಂದರೆ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, 5:22 2 ಕೊರಿ 6:6ದಯೆ, ಪರೋಪಕಾರ, ನಂಬಿಕೆ,

23ಸಾಧುತ್ವ, 5:23 ಅ. ಕೃ. 24:5; 2 ಪೇತ್ರ 1:6ಶಮೆದಮೆ ಇಂಥವುಗಳೇ. 5:23 1 ತಿಮೊ. 1:9ಇವುಗಳಿಗೆ ವಿರುದ್ಧವಾಗಿ ಯಾವ ಧರ್ಮಶಾಸ್ತ್ರವೂ ಇಲ್ಲ.

24ಕ್ರಿಸ್ತ ಯೇಸುವಿನಲ್ಲಿರುವವರು 5:24 ಗಲಾ. 5:16; ರೋಮಾ. 6:6ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ.

25ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ.

265:26 ಫಿಲಿ. 2:3ಅಹಂಕಾರಿಗಳೂ, ಒಬ್ಬರನ್ನೊಬ್ಬರು ಕೆಣಕುವವರೂ, ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.

← ಗಲಾ 4 ಗಲಾ ಗಲಾ 6 →

ಗಲಾ 5 — georgiano:

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ