We Believe JesusFé, Esperança e Nova Vida

ಪ್ರಕ 22

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 · georgiano

← ಪ್ರಕ 21 ಪ್ರಕ

1ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ 22:1 ಯೆಹೆ. 47:1-12; ಜೆಕ. 14:8:ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು,

2ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. 22:2 ಯೆಹೆ. 47:12:ಆ ನದಿಯ ಎರಡು ದಡಗಳಲ್ಲಿ 22:2 ಆದಿ 2:9; ಪ್ರಕ 22:14, 19; 2:7:ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ 22:2 ಅಥವಾ, ಹನ್ನೆರಡು ಸಾರಿ ಬಿಡುತ್ತವೆ; ಯೆಹೆ. 47:12:ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ. 22:2 ಪ್ರಕ 21:24:ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು.

322:3 ಯೆಹೆ. 14:11; ಆದಿ 3:17:ಇನ್ನೂ ಯಾವ ಶಾಪವು ಇರುವುದಿಲ್ಲ. 22:3 ಯೆಹೆ. 48:35; ಪ್ರಕ 21:3, 23:ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನವಿರುವುದು. 22:3 ಪ್ರಕ 7:15:ಆತನ ಸೇವಕರು ಆತನಿಗೆ ಸೇವೆ ಮಾಡುವರು.

422:4 ಮತ್ತಾ 5:8; 1 ಕೊರಿ 13:12; 1 ಯೋಹಾ 3:2:ಅವರು ಆತನ ಮುಖವನ್ನು ನೋಡುವರು. 22:4 ಪ್ರಕ 3:12; 7:3; 14:1:ಅವರ ಹಣೆಯ ಮೇಲೆ ಆತನ ಹೆಸರು ಇರುವುದು.

5ಇನ್ನು ರಾತ್ರಿಯೇ ಇರುವುದಿಲ್ಲ. ಅವರಿಗೆ 22:5 ಕೀರ್ತ 36:9; ಪ್ರಕ 21:11, 23-25:ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗಿರುವುದಿಲ್ಲ. ದೇವರಾದ ಕರ್ತನೇ ಅವರಿಗೆ ಬೆಳಕಾಗಿರುವನು. 22:5 ದಾನಿ. 7:18, 27; ರೋಮಾ. 5:17; 2 ತಿಮೊ. 2:12; ಪ್ರಕ 20:4:ಅವರು ಯುಗಯುಗಾಂತರಗಳಲ್ಲಿಯೂ ಆಳುವರು.

6ಆ ಮೇಲೆ ದೇವದೂತನು ನನಗೆ, 22:6 ಪ್ರಕ 21:5 “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳನ್ನು ಪ್ರೇರೇಪಿಸುವ ದೇವರಾದ ಕರ್ತನು ಅತಿಶೀಘ್ರದಲ್ಲಿ ಸಂಭವಿಸತಕ್ಕ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ 22:6 ಪ್ರಕ 1:1:ತನ್ನ ದೇವದೂತನನ್ನು ಕಳುಹಿಸಿಕೊಟ್ಟನು.

7“ಇಗೋ ನೋಡು! ನಾನು 22:7 ಪ್ರಕ 3:11; 22:12, 20:ಅತಿಬೇಗನೆ ಬರುತ್ತೇನೆ! 22:7 ಪ್ರಕ 1:3.ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಕೊಂಡು ನಡೆಯುವವನು ಧನ್ಯನು” ಎಂದು ಹೇಳಿದನು.

8ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿದವನೂ ನೋಡಿದವನೂ ಆಗಿದ್ದೇನೆ. ನಾನು ಈ ಸಂಗತಿಗಳನ್ನು ಕೇಳಿ ಕಂಡಾಗ, ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು.

9ಆದರೆ 22:9 ಪ್ರಕ 9:10ಅವನು ನನಗೆ, “ನೀನು ಹಾಗೆ ಮಾಡಬೇಡ! ನೋಡು. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ, 22:9 ಪ್ರಕ 1:3:ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಕೊಂಡು ನಡೆಯುವವರಿಗೂ ಸೇವೆಯನ್ನು ಮಾಡುವ ಸೇವಕನಾಗಿದ್ದೇನೆ. ದೇವರನ್ನೇ ಆರಾಧಿಸು” ಎಂದು ಹೇಳಿದನು.

10ಇದಲ್ಲದೆ ಅವನು ನನಗೆ ಈ ಪುಸ್ತಕದಲ್ಲಿರುವ 22:10 ಮೂಲ: ವಾಕ್ಯಗಳನ್ನು ಗುಪ್ತವಾಗಿಡಬೇಡ. “ಪ್ರವಾದನಾ ವಾಕ್ಯಗಳಿಗೆ ಮುದ್ರೆಹಾಕಬೇಡ. ಏಕೆಂದರೆ ಇವು ನೆರವೇರುವ ಕಾಲವು ಸಮೀಪವಾಗಿದೆ.

1122:11 ಯೆಹೆ. 3 27; ದಾನಿ. 12:10; 2 ತಿಮೊ. 3:13:ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ. ಮೈಲಿಗೆಯಾಗಿರುವವನು ತನ್ನನ್ನು ಇನ್ನು ಮೈಲಿಗೆಯ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ನೀತಿವಂತನಾಗಲಿ ಮತ್ತು ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ.”

12“ನೋಡು! ನಾನು ಬೇಗನೇ ಬರುತ್ತೇನೆ. 22:12 ಮತ್ತಾ 16:27; ರೋಮಾ. 2:6; 14 12; ಇಬ್ರಿ. 9:27:ನಾನು ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕಂತೆ ಕೊಡತಕ್ಕ 22:12 ಯೆಶಾ 40. 10; 62:11:ಪ್ರತಿಫಲವು ನನ್ನಲ್ಲಿದೆ.

13ನಾನೇ 22:13 ಪ್ರಕ 1:8:ಆದಿಯೂ, ಅಂತ್ಯವೂ, 22:13 ಪ್ರಕ 1:17; 1:4:ಮೊದಲನೆಯವನೂ, ಕಡೆಯವನೂ, 22:13 ಪ್ರಕ 21:6:ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ.

14“ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು ಶುದ್ಧರಾಗಿರುವವರು ಧನ್ಯರು. ಅವರಿಗೆ 22:14 ಪ್ರಕ 22:2, 19:ಜೀವವೃಕ್ಷದ ಹಕ್ಕು ಇರುವುದು. 22:14 ಕೀರ್ತ 118:20; ಪ್ರಕ 21:27:ಅವರು ಬಾಗಿಲುಗಳ ಮೂಲಕ ಆ ಪಟ್ಟಣದೊಳಗೆ ಬಂದು ಸೇರುವರು.

15ಆದರೆ ನಾಯಿಗಳಂತಿರುವವರೂ, ಮಾಟಗಾರರೂ, ಜಾರರೂ, ಕೊಲೆಗಾರರೂ, ವಿಗ್ರಹಾರಾಧಕರೂ, ಸುಳ್ಳನ್ನು ಪ್ರೀತಿಸಿ ಅದನ್ನು ಅಭ್ಯಾಸಮಾಡುವವರೆಲ್ಲರೂ 22:15 ಮತ್ತಾ 8:12; ಗಲಾ. 5:19-21; ಪ್ರಕ 21:8:ಹೊರಗಿರುವರು” ಎಂದು ಹೇಳಿದನು.

16“ಯೇಸುವೆಂಬ ನಾನು 22:16 ಪ್ರಕ 1:4:ನನ್ನ ಸಭೆಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವುದಕ್ಕೆ 22:16 ಪ್ರಕ 1:1:ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು 22:16 ಪ್ರಕ 5:5:ದಾವೀದನ ವಂಶವೆಂಬ ಬುಡದಿಂದ ಹುಟ್ಟಿದ ಬೇರೂ 22:16 2 ಸಮು 7:12-16; ಯೆಶಾ 11:1; ರೋಮಾ. 1:3:ಅವನ ಸಂತತಿಯೂ 22:16 ಅರಣ್ಯ 24:17; ಯೆಶಾ 60. 3; ಮತ್ತಾ 2:2; ಪ್ರಕ 2:28:ಪ್ರಕಾಶಮಾನವಾದ ಉದಯ ನಕ್ಷತ್ರವೂ ಆಗಿದ್ದೇನೆ.”

17ಆತ್ಮನು ಮತ್ತು 22:17 ಪ್ರಕ 21:2, 9:ಮದಲಗಿತ್ತಿಯು, “ಬಾ” ಎನ್ನುತ್ತಾರೆ. ಕೇಳುವವನು, “ಬಾ” ಎನ್ನಲಿ. ಬಾಯಾರಿದವನು ಬರಲಿ, 22:17 ಯೆಶಾ 55:1; ಯೋಹಾ 7:37; ಪ್ರಕ 21:6:ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ.

18ಈ ಪುಸ್ತಕದ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನೆಂದರೆ, 22:18 ಧರ್ಮೋ 4:2; 12:32; ಜ್ಞಾ. 30. 6:ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ಕೂಡಿಸಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಕೊಡುವನು.

19ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ಮಾತುಗಳಲ್ಲಿ ಒಂದನ್ನಾದರೂ ತೆಗೆದುಬಿಟ್ಟರೆ ಈ ಪುಸ್ತಕದಲ್ಲಿ ಬರೆದಿರುವ 22:19 ಪ್ರಕ 21:2:ಪರಿಶುದ್ಧ ಪಟ್ಟಣದಲ್ಲಿಯೂ 22:19 ಪ್ರಕ 22:2, 14:ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು.

20ಈ ವಿಷಯಗಳಲ್ಲಿ ಸಾಕ್ಷಿ ಹೇಳುವವನು, “ಹೌದು ನಾನು ನಿಜವಾಗಿ 22:20 ಪ್ರಕ 22:7,12:ಬೇಗನೇ ಬರುತ್ತೇನೆ!” ಎಂದು ಹೇಳುತ್ತಾನೆ. ಆಮೆನ್. 22:20 2 ತಿಮೊ. 4:8:ಕರ್ತನಾದ ಯೇಸುವೇ ಬಾ.

21ಕರ್ತನಾದ ಯೇಸುವಿನ ಕೃಪೆಯು 22:21 ಕೆಲವು ಪ್ರತಿಗಳಲ್ಲಿ ದೇವಜನರೆಲ್ಲರೊಂದಿಗೆ ಇರಲಿ ಎಂದು ಇದೆ.ಎಲ್ಲರೊಂದಿಗೆ ಇರಲಿ. ಆಮೆನ್!

← ಪ್ರಕ 21 ಪ್ರಕ

ಪ್ರಕ 22 — georgiano:

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ