We Believe JesusFé, Esperança e Nova Vida

ಪ್ರಕ 11

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 · georgiano

← ಪ್ರಕ 10 ಪ್ರಕ ಪ್ರಕ 12 →

1ತರುವಾಯ 11:1 ಜೆಕ. 2:1, 2; ಯೆಹೆ. 40. 3:5; ಪ್ರಕ 21:15, 16:ಅಳತೆಗೊಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು, “ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆಮಾಡುವವರನ್ನು ಎಣಿಕೆಮಾಡು.

211:2 ಯೆಹೆ. 40. 17, 20:ಆಲಯದ ಹೊರಗಿರುವ ಹೊರಾಂಗಣವನ್ನು ಅಳೆಯದೆ ಬಿಟ್ಟುಬಿಡು, 11:2 ಲೂಕ 21:24:ಅದು ಅನ್ಯಜನರಿಗಾಗಿ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು 11:2 ಪ್ರಕ 12:6; 13:5:ನಲವತ್ತೆರಡು ತಿಂಗಳು ತುಳಿದಾಡುವರು.

3ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು 11:3 ಯೆಶಾ 20:2:ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.”

4ಭೂಲೋಕದ ಒಡೆಯನ ಮುಂದೆ ನಿಂತಿರುವ 11:4 ಜೆಕ. 4:3, 11, 14:ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪಸ್ತಂಭಗಳೂ ಇವರೇ.

5ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ 11:5 2 ಅರಸು. 1:10, 12; ಯೆರೆ 5:14:ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಕೇಡನ್ನು 11:5 ಅರಣ್ಯ 16:29, 35:ಉಂಟುಮಾಡಬಯಸುವವರಿಗೆ ಆ ರೀತಿಯಾಗಿ ಹತರಾಗಬೇಕು.

611:6 ಅರಣ್ಯ 17:1; ಲೂಕ 4:25; ಯಾಕೋಬ. 5:17:ಅವರು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಅವರಿಗೆ ಇರುವುದು. ಇದಲ್ಲದೆ ಅವರಿಗೆ ಇಷ್ಟಬಂದಾಗೆಲ್ಲಾ 11:6 ವಿಮೋ 7:19:ನೀರು ರಕ್ತವಾಗುವಂತೆ ಮಾಡುವುದಕ್ಕೂ 11:6 ವಿಮೋ 7-10; 1 ಸಮು 4:8:ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹಿಂಸಿಸುವುದಕ್ಕೂ ಅಧಿಕಾರವುಂಟು.

7ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, 11:7 ಪ್ರಕ 9:1:ಅಧೋಲೋಕದಿಂದ ಬರುವ 11:7 ಪ್ರಕ 17:8; ಪ್ರಕ 13:1:ಮೃಗವು 11:7 ದಾನಿ. 7:21:ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು.

8ಈ ಸಾಕ್ಷಿಗಳ ಶವಗಳು 11:8 ಪ್ರಕ 16:19; 17:18; 18:10:ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಸಾಂಕೇತಿಕವಾಗಿ 11:8 ಯೆಶಾ 1:9, 10; 3:9:ಸೊದೋಮ್ ಎಂದು, 11:8 ಯೆಹೆ. 23:3, 8, 19:27:ಐಗುಪ್ತ ಎಂದೂ ಹೆಸರುಗಳುಂಟು. ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು.

9ಸಕಲ ಜನ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ 11:9 ಕೀರ್ತ 79:2, 3:ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ.

10ಈ ಇಬ್ಬರು ಪ್ರವಾದಿಗಳು 11:10 ಪ್ರಕ 11:5, 6; 1 ಅರಸು. 18:17:ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು 11:10 ಯೋಹಾ 16:20; ಪ್ರಕ 3:10:ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು.

11ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು, 11:11 ಆದಿ 2:7; ಯೆಹೆ. 37:5, 9, 10, 14:ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು.

12ಅನಂತರ ಅವರಿಗೆ, 11:12 ಪ್ರಕ 4:1:“ಇಲ್ಲಿ ಮೇಲಕ್ಕೆ ಏರಿ ಬನ್ನಿರಿ!” ಎಂದು ಆಕಾಶದಿಂದ ಮಹಾ ವಾಣಿಯು ತಿಳಿಸಿತು. ಅದನ್ನು ಕೇಳಿ ಅವರು 11:12 ಅ. ಕೃ. 1:9; 1 ಥೆಸ. 4:17:ಮೇಘದಲ್ಲಿ 11:12 ಪ್ರಕ 12:5; 2 ಅರಸು. 2:11:ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು.

13ಅದೇ ಗಳಿಗೆಯಲ್ಲಿ 11:13 ಪ್ರಕ 6:12:ಮಹಾ ಭೂಕಂಪವುಂಟಾಗಿ 11:13 ಪ್ರಕ 16:19:ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು. ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತು ಹೋದರು. ಉಳಿದವರು ಭಯಗ್ರಸ್ತರಾಗಿ 11:13 2 ಪೂರ್ವ 36:23; ಯೋನ. 1:9:ಪರಲೋಕದ ದೇವರನ್ನು 11:13 ಯೆಹೋ. 7:19; ಪ್ರಕ 14:7; 16:9, 19:7:ಘನಪಡಿಸಿದರು.

14ಎರಡನೆಯ ವಿಪತ್ತು ಕಳೆದುಹೋಯಿತು. ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತಿದೆ.

15ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ 11:15 ಪ್ರಕ 16:17; 19:1:ಮಹಾಶಬ್ದಗಳುಂಟಾಗಿ, 11:15 ಪ್ರಕ 12:10:“ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ 11:15 ಕೀರ್ತ 2:2; ಲೂಕ 9:20; ಅ. ಕೃ. 4:26:ಆತನ ಕ್ರಿಸ್ತನಿಗೂ ಬಂದಿದೆ, 11:15 ದಾನಿ. 2:44; 7:14, 18, 27; ಲೂಕ 1:33; ಇಬ್ರಿ. 1:8; ಯೋಹಾ 12:34:ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು” ಎಂಬ ಮಹಾಘೋಷಣೆಯಾಯಿತು.

16ತರುವಾಯ 11:16 ಪ್ರಕ 4:4:ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ 11:16 ಪ್ರಕ 4:10:ಅಡ್ಡಬಿದ್ದು,

17“ಕರ್ತನೇ, ಸರ್ವಶಕ್ತನಾದ ದೇವರೇ, 11:17 ಮೂಲ. ಇರುವಾತನೇ, ಇದ್ದಾತನೇ. ಪ್ರಕ 16:5; ಪ್ರಕ 1:4, 8; 4:8:ಇರುವಾತನೇ ಇದ್ದಾತನೇ,

18ಜನಾಂಗಗಳು ಕೋಪಿಸಿಕೊಂಡವು.

19ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. 11:19 ಇಬ್ರಿ. 9:4:ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು, 11:19 ಪ್ರಕ 16:21:ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು.

← ಪ್ರಕ 10 ಪ್ರಕ ಪ್ರಕ 12 →

ಪ್ರಕ 11 — georgiano:

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ