1ಆದುದರಿಂದ ನಾನು ಇನ್ನು ತಾಳಲಾರದೆ 3:1 ಅ. ಕೃ. 17:15, 16:ಅಥೇನೆಯಲ್ಲಿ ಒಬ್ಬಂಟಿಗನಾಗಿಯೇ ಇರುವುದು ಒಳ್ಳೆಯದೆಂದು ಯೋಚಿಸಿ,
2ನಿಮ್ಮ ಮೇಲೆ ಬಂದಿರುವ ಸಂಕಟಗಳಲ್ಲಿ ಒಬ್ಬರೂ ಚಂಚಲರಾಗದಂತೆ ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ಉತ್ತೇಜನಪಡಿಸುವುದಕ್ಕೂ 3:2 2 ಕೊರಿ 1:1; ಕೊಲೊ 1:1; ಫಿಲೆ. 1; ಇಬ್ರಿ. 13:23:ನಮ್ಮ ಸಹೋದರನೂ, ಕ್ರಿಸ್ತನ ಸುವಾರ್ತೆಯ ಕಾರ್ಯದಲ್ಲಿ ದೇವರ ಸೇವಕನೂ ಆಗಿರುವ 3:2 ಫಿಲಿ. 2:19:ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು.
33:3 ಅ. ಕೃ. 9:16; 14:22:ಸಂಕಟಗಳನ್ನು ಅನುಭವಿಸುವುದಕ್ಕಾಗಿಯೇ ನಾವು ನೇಮಿಸಲ್ಪಟ್ಟವರೆಂದು ನೀವೇ ಬಲ್ಲಿರಷ್ಟೆ.
4ನಾವು ನಿಮ್ಮ ಬಳಿಯಲ್ಲಿದ್ದಾಗ ಸಂಕಟವನ್ನು ಅನುಭವಿಸಲೇಬೇಕೆಂದು ಈ ಮೊದಲೇ ಹೇಳಿದ್ದೆವಲ್ಲಾ. 3:4 1 ಥೆಸ. 2:14:ಅದರಂತೆಯೇ ಆಯಿತು, ಅದು ನಿಮ್ಮ ಅನುಭವಕ್ಕೂ ಬಂದಿತು.
5ಆದ್ದರಿಂದ ಇನ್ನು ತಡೆಯಲಾರದೆ ಒಂದು ವೇಳೆ ಶೋಧಕನು ನಿಮ್ಮನ್ನು ಶೋಧಿಸಿದ್ದರಿಂದ 3:5 ಫಿಲಿ. 2:16:ನಮ್ಮ ಪ್ರಯಾಸವು ವ್ಯರ್ಥವಾಯಿತೋ ಏನೋ ಎಂದು ನಿಮ್ಮ ನಂಬಿಕೆಯನ್ನು ಕುರಿತು ನಾನು ತಿಳಿದುಕೊಳ್ಳುವುದಕ್ಕಾಗಿ ಅವನನ್ನು ನಿಮ್ಮ ಬಳಿಗೆ ಕಳುಹಿಸಿದೆನು.
6ಆದರೆ ತಿಮೊಥೆಯನು ನಿಮ್ಮ ಬಳಿಯಿಂದ ಬಂದು 3:6 1 ಥೆಸ 1:3:ನಿಮ್ಮ ನಂಬಿಕೆ ಮತ್ತು ಪ್ರೀತಿಯ ಕುರಿತಾಗಿ ಶುಭವರ್ತಮಾನವನ್ನು ಹೇಳಿ, 3:6 1 ಕೊರಿ 11:2:ನೀವು ನಮ್ಮನ್ನು ಯಾವಾಗಲೂ ಪ್ರೀತಿಪೂರ್ವಕವಾಗಿ ನೆನಪುಮಾಡಿಕೊಂಡು ನಾವು ನಿಮ್ಮನ್ನು ಹೇಗೋ ಹಾಗೆಯೇ ನೀವೂ ಸಹ ನಮ್ಮನ್ನು ನೋಡುವುದಕ್ಕಾಗಿ ಅಪೇಕ್ಷಿಸುತ್ತಿದ್ದೀರೆಂಬುದನ್ನು ತಿಳಿಸಿದ್ದಾನೆ.
7ಸಹೋದರರೇ, ಈ ವಾರ್ತೆಯನ್ನು ಕೇಳಿ 3:7 2 ಕೊರಿ 1:4:ನಮ್ಮ ಎಲ್ಲಾ ಕಷ್ಟದಲ್ಲಿಯೂ ಸಂಕಟದಲ್ಲಿಯೂ ನಿಮ್ಮ ನಂಬಿಕೆಯ ಮುಖಾಂತರ ನಮಗೆ ಸಮಾಧಾನವಾಯಿತು.
83:8 1 ಕೊರಿ 16:13:ನೀವು ಕರ್ತನಲ್ಲಿ ದೃಢವಾಗಿ ನಿಂತಿದ್ದರೆ ನಮಗೆ ಜೀವಕಳೆ.
9ನಿಮ್ಮ ನಿಮಿತ್ತ ನಮ್ಮ ದೇವರ ಮುಂದೆ ನಮಗಿರುವ ಎಲ್ಲಾ ಸಂತೋಷಗಳಿಗಾಗಿ 3:9 1 ಥೆಸ. 1:2:ದೇವರಿಗೆ ಅಷ್ಟೊಂದು ಸ್ತೋತ್ರ ಮಾಡುವುದು ನಮ್ಮಿಂದಾದಿತೇ?
103:10 1 ಥೆಸ. 2:17:ನಿಮ್ಮ ಮುಖವನ್ನು ನೋಡುವುದಕ್ಕೂ 3:10 ಎಫೆ 4:12,13:ನಿಮ್ಮ ನಂಬಿಕೆಯ ಕೊರತೆಗಳನ್ನು ನೀಗುವುದಕ್ಕೂ ನಾವು 3:10 2 ತಿಮೊ. 1:3:ಹಗಲಿರುಳು ದೇವರನ್ನು ತುಂಬಾ ಕಳಕಳಿಯಿಂದ ಬೇಡುವವರಾಗಿದ್ದೇವೆ.
11ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು, ನಾವು ನಿಮ್ಮ ಬಳಿಗೆ ಬರುವುದಕ್ಕೆ ಮಾರ್ಗವನ್ನು ಸರಾಗಮಾಡಿಕೊಡಲಿ.
12ನಿಮ್ಮಲ್ಲಿ ನಮ್ಮ ಪ್ರೀತಿಯು ಹೆಚ್ಚಾದ ಹಾಗೆಯೇ ನಿಮ್ಮ ಪ್ರೀತಿಯು 3:12 1 ಥೆಸ. 4:9; 5:15 ಒಬ್ಬರಿಂದೊಬ್ಬರಿಗೆ ಹರಡಿ ಎಲ್ಲಾ ಮನುಷ್ಯರ ಮೇಲೆಯೂ ಅಭಿವೃದ್ಧಿ ಹೊಂದಿ ಅತ್ಯಧಿಕವಾಗುವಂತೆ ಕರ್ತನು ಆಶೀರ್ವದಿಸಲಿ.
13ನಮ್ಮ ಕರ್ತನಾದ ಯೇಸು ತನ್ನ 3:13 ಜೆಕ. 14:5; ಯೂದ 14:ಪರಿಶುದ್ಧ ಪರಿವಾರ ಸಮೇತ ಪುನರಾಗಮಿಸುವಾಗ ತಂದೆಯಾದ ದೇವರ ಸಮಕ್ಷಮದಲ್ಲಿ 3:13 ಯಾಕೋಬ 5:8; 1 ಪೇತ್ರ 5:10:ನೀವು ಪರಿಶುದ್ಧರೂ, ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ದೃಢಪಡಿಸಲಿ.