We Believe JesusFé, Esperança e Nova Vida

1 ಪೇತ್ರ 4

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 · georgiano

← 1 ಪೇತ್ರ 3 1 ಪೇತ್ರ 1 ಪೇತ್ರ 5 →

1ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ 4:1 ಫಿಲಿ. 2:5; ಎಫೆ 6:13:ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ 4:1 ರೋಮಾ. 6:2,7; ಗಲಾ. 5:24; ಕೊಲೊ 3:3, 5:ಶರೀರದಲ್ಲಿ ಬಾಧೆಪಟ್ಟವನು 4:1 2 ಪೇತ್ರ. 2:14ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ.

2ಆದ್ದರಿಂದ ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ 4:2 1 ಪೇತ್ರ. 1:14; ತೀತ. 2:12; 1 ಯೋಹಾ 2:16.ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ 4:2 ರೋಮಾ. 6:11:ದೇವರ ಚಿತ್ತದ ಪ್ರಕಾರ ಬದುಕುವುದಕ್ಕೆ 4:2 ರೋಮಾ. 6:14; 14:7; 2 ಕೊರಿ 5:15:ಪ್ರಯತ್ನಮಾಡುವನು.

3ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ 4:3 ಎಫೆ 4:17-19; 1 ಥೆಸ. 4:5; 1 ಕೊರಿ 12:2:ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ 4:3 ಯೆಹೆ. 45:9; ಅ. ಕೃ. 17:30. ಕಾಲಕಳೆದದ್ದು ಸಾಕು.

4ಅವರು ಮಾಡುವ ಅಪರಿಮಿತವಾದ 4:4 ಎಫೆ 5:18:ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು 4:4 1 ಪೇತ್ರ. 2:12; 3:16:ನಿಮ್ಮನ್ನು ದೂಷಿಸುತ್ತಾರೆ.

5ಅವರು 4:5 ಅ. ಕೃ. 10:42; 2 ಕೊರಿ 5:10; ಯಾಕೋಬ 5:9:ಬದುಕಿರುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಸಿದ್ಧವಾಗಿರುವಾತನಿಗೆ ಉತ್ತರ ಕೊಡಬೇಕು.

6ಸತ್ತಿರುವವರು ಮನುಷ್ಯ ಜಾತಿಗೆ ಬರುವ ಮರಣವೆಂಬ ತೀರ್ಪನ್ನು ಶರೀರಗಳಲ್ಲಿದ್ದಾಗ ಹೊಂದಿದರು. 4:6 ಅಥವಾ, ಶರೀರವನ್ನು ಬಿಟ್ಟವರಾಗಿ. ಅವರು ಆತ್ಮ ಸಂಬಂಧವಾಗಿ ದೇವರಂತೆ ಜೀವಿಸಲೆಂದು 4:6 1 ಪೇತ್ರ. 3:19:ಅವರಿಗೂ ಸುವಾರ್ತೆಯು ತಿಳಿಸಲ್ಪಟ್ಟಿತು.

7ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಜಿತೇಂದ್ರಿಯರಾಗಿಯೂ ಯಾವಾಗಲೂ 4:7 ಮತ್ತಾ 26:41; ಲೂಕ 21:36:ಪ್ರಾರ್ಥನೆಗೆ ಸಿದ್ಧವಾಗಿರುವಂತೆ 4:7 1 ಪೇತ್ರ. 1:13:ಸ್ವಸ್ಥಚಿತ್ತರಾಗಿಯೂ ಇರಿ.

8ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ. 4:8 1 ಕೊರಿ 13:5, 6; ಜ್ಞಾ. 10:12; 17:9:ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.

9ಗುಣಗುಟ್ಟದೆ ಒಬ್ಬರಿಗೊಬ್ಬರು 4:9 ಇಬ್ರಿ. 13:2; 1 ತಿಮೊ. 3:2; ತೀತ. 1:8:ಅತಿಥಿ ಸತ್ಕಾರ ಮಾಡಿರಿ.

10ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ 4:10 ಲೂಕ 12:42; 1 ಕೊರಿ 4:1, 2; ತೀತ. 1:7:ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು 4:10 ರೋಮಾ. 12:6, 7; 1 ಕೊರಿ 4:7; ಮತ್ತಾ 25:15:ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ.

11ಒಬ್ಬನು ಬೋಧಿಸುವವನಾದರೆ 4:11 ಅ. ಕೃ. 7:38; ರೋಮಾ. 3:2; ಇಬ್ರಿ. 5:12:ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ 4:11 1 ಕೊರಿ 10:31:ದೇವರಿಗೆ ಸ್ತೋತ್ರ ಉಂಟಾಗುವುದು. 4:11 ರೋಮಾ. 11:36:ಯೇಸು ಕ್ರಿಸ್ತನಿಗೆ 4:11 1 ಪೇತ್ರ. 5:11; ಯೂದ. 25; ಪ್ರಕ 1:6; 5:13:ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್.

12ಪ್ರಿಯರೇ, ನಿಮ್ಮನ್ನು ಪರಿಶೋಧಿಸುವುದಕ್ಕಾಗಿ 4:12 1 ಪೇತ್ರ. 1:7:ಅಗ್ನಿ ಪರೀಕ್ಷೆ ಬರುವಾಗ ನೀವು ಆಶ್ಚರ್ಯಪಡಬೇಡಿರಿ. ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ.

13ಆದರೆ 4:13 ಫಿಲಿ. 3:10, 11; ಅ. ಕೃ. 5:41:ನೀವು ಎಷ್ಟರ ಮಟ್ಟಿಗೆ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷಪಡಿರಿ. ಆದ್ದರಿಂದ 4:13 1 ಪೇತ್ರ. 1:5-7; 5:1; ರೋಮಾ. 8:17, 18; ಯೂದ. 24:ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ

144:14 ಮತ್ತಾ 5:11; ಯೋಹಾ 15:21; ಇಬ್ರಿ. 11:26:ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. 4:14 ಯೆಶಾ 11:2:ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.

154:15 1 ಪೇತ್ರ. 2:19, 20; 3:14, 17:ನಿಮ್ಮಲ್ಲಿ ಯಾವನಾದರು ಕೊಲೆಗಾರನು, ಕಳ್ಳನು, ದುಷ್ಟನು, ಪರರ ಕಾರ್ಯಗಳಲ್ಲಿ 4:15 ಅಥವಾ, ನಿಕೃಷ್ಟ ಕಾರ್ಯಗಳನ್ನು ನಡಿಸುವವನು. ತಲೆಹಾಕುವವನು ಎಂಬುದರೊಂದಿಗೆ 1 ಥೆಸ. 4:11; 2 ಥೆಸ. 3:11; 1 ತಿಮೊ. 5:13:ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು.

16ಆದರೆ 4:16 1 ಪೇತ್ರ. 2:19, 20; 3:14, 17; ಅ. ಕೃ. 26:28:ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.

17ನ್ಯಾಯವಿಚಾರಣೆಯ ಸಮಯ ಬಂದಿದೆ. 4:17 ಯೆರೆ 25:29; ಯೆಹೆ. 9:6; ಆಮೋ. 3:2; ರೋಮಾ. 2:9:ಆ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗಿದೆಯಲ್ಲಾ. 4:17 ಲೂಕ 23:31:ಅದು ನಮ್ಮಲ್ಲಿ ಪ್ರಾರಂಭವಾಗುವುದಾದರೆ, ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಅಂತ್ಯ ಹೇಗಿರಬಹುದು?

184:18 ಜ್ಞಾ. 11:31:ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಮತ್ತು ಪಾಪಿಷ್ಠನೂ ರಕ್ಷಣೆ ಹೊಂದುವುದು ಹೇಗೆ?

19ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೆದನ್ನು ಮಾಡುವವರಾಗಿದ್ದು 4:19 ಕೀರ್ತ 31:5; ಲೂಕ 23:46; 2 ತಿಮೊ. 1:12:ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿ ಕರ್ತನಿಗೆ ಒಪ್ಪಿಸಲಿ.

← 1 ಪೇತ್ರ 3 1 ಪೇತ್ರ 1 ಪೇತ್ರ 5 →

1 ಪೇತ್ರ 4 — georgiano:

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ